ಹಳೇ ಕೈಗಾರಿಕೆ ವಸಾಹತು ಪ್ರದೇಶ ಅಭಿವೃದ್ಧಿಗೊಳಿಸಿ

ಹಳೆಯ ಕೈಗಾರಿಕಾ ವಸಾಹತು ಪ್ರದೇಶ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿ ಚಿತ್ತಾಪುರದಲ್ಲಿ ತಾಲೂಕು ಸಣ್ಣ ಕೈಗಾರಿಕೆಗಳ ಸಂ (ಸಿಟಿಎಸ್​ಎಸ್​ಐಎ)ದಿಂದ ಕೆಎಸ್​ಎಸ್​ಐಡಿಸಿ ಸಹಾಯಕ ಮಹಾಪ್ರಬಂಧಕ ಮಲ್ಲಿಕಾರ್ಜುನ ಜಾಕಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

Published on
ಚಿತ್ತಾಪುರ: ಪಟ್ಟಣದಲ್ಲಿನ ಸರ್ವೇ ನಂ. 112/2 ಹಾಗೂ 113ರಲ್ಲಿರುವ ಹಳೆಯ ಕೈಗಾರಿಕಾ ವಸಾಹತು ಪ್ರದೇಶ ಅಭಿವೃದ್ದಿಗೊಳಿಸಲು ಮುಂದಾಗಬೇಕು ಎಂದು ಸಣ್ಣ ಕೈಗಾರಿಕೆಗಳ ಸಂಘ (ಸಿಟಿಎಸ್​ಎಸ್​ಐಎ)ದ ತಾಲೂಕು ಅಧ್ಯಕ್ಷ ಸೈಯದ್​ ನಿಜಾಮುದ್ದಿನ್​ ಚಿಸ್ತಿ ಒತ್ತಾಯಿಸಿದರು. ಕೈಗಾರಿಕಾ ವಸಾಹತು ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಕೆಎಸ್​ಎಸ್​ಐಡಿಸಿ ಸಹಾಯಕ ಮಹಾಪ್ರಬಂಧಕ ಮಲ್ಲಿಕಾರ್ಜುನ ಜಾಕಾ ಅವರಿಗೆ ಮನವಿಪತ್ರ ಸಲ್ಲಿಸಿ, ಒಳರಸ್ತೆಗಳ ಅಭಿವೃದ್ಧಿ, ಒಳಚರಂಡಿ ಹಾಗೂ ಮಳೆನೀರು ಹರಿಸುವ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ನೀರಿನ ಸರಬರಾಜು ಪೈಪ್​ಲೈನ್​, ಕಾಂಪೌಂಡ್​ ಗೋಡೆ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಸಬೇಕು. ಬಾಕಿಯಿರುವ ಮಾರಾಟ ಪತ್ರಗಳ ನೋಂದಣಿ, ಕೈಗಾರಿಕಾ ವಸಾಹತು ನಿರ್ವಹಣೆಯನ್ನು ಚಿತ್ತಾಪುರ ಪುರಸಭೆಗೆ ಹಸ್ತಾಂತರಿಸಬೇಕು. ಅರ್ಹ ಕೈಗಾರಿಕಾ ನಿವೇಶನ ಹಂಚಿಕೆದಾರರಿಗೆ ಖಾತೆ ಉತಾರ ನೀಡಬೇಕು ಎಂದು ಕೋರಿದರು. ಉಪಾಧ್ಯಕ್ಷ ಶರಣರೆಡ್ಡಿ ಇಜಾರ್​, ಕಾರ್ಯದರ್ಶಿ ಅಬ್ದುಲ್​ ಬಾಸಿತ್​, ಪ್ರಮುಖರಾದ ಮುಕ್ತಾರ್​ ಪಟೇಲ್​, ಎಂ.ಎ.ರಶೀದ್​, ರುನಾಥ್​ ರೆಡ್ಡಿ, ಶಿವು ಚೌಧರಿ, ತಯ್ಯಬ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net