ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಿ

ಬಸವಕಲ್ಯಾಣದ ಉರಿಲಿಂಗ ಪೆದ್ದಿ ಮಠದ  ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವನ್ನು  ಸಾಹಿತಿ ಡಾ.ಗವಿಸಿದ್ಧಪ್ಪ  ಪಾಟೀಲ ಉದ್ಘಾಟಿಸಿದರು. ಶ್ರೀ ಪಂಚಾಕ್ಷರಿ ಸ್ವಾಮೀಜಿ, ಡಾ.ಭೀಮಾಶಂಕರ ಬಿರಾದಾರ, ಡಾ.ರೊಲೇಕರ ನಾರಾಯಣ, ಡಾ.ಸಂಜುಕುಮಾರ ನಡುಕರ್​, ಮಹಾಲಿಂಗ ದೇವರು, ಬಾಲಾಜಿ ಕುಂಬಾರ, ರವೀಂದ್ರ ಕೊಳಕೂರ, ಸಂದೀಪ ಮುಕಿಂದೆ, ಡಾ.ಸಿದ್ದಪ್ಪ ಹೊಸಮನಿ,  ನಾಗಪ್ಪ ನಿಣ್ಣೆ, ವೀರಶೆಟ್ಟಿ ಪಾಟೀಲ ಇದ್ದರು.
ಬಸವಕಲ್ಯಾಣದ ಉರಿಲಿಂಗ ಪೆದ್ದಿ ಮಠದ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವನ್ನು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಉದ್ಘಾಟಿಸಿದರು. ಶ್ರೀ ಪಂಚಾಕ್ಷರಿ ಸ್ವಾಮೀಜಿ, ಡಾ.ಭೀಮಾಶಂಕರ ಬಿರಾದಾರ, ಡಾ.ರೊಲೇಕರ ನಾರಾಯಣ, ಡಾ.ಸಂಜುಕುಮಾರ ನಡುಕರ್​, ಮಹಾಲಿಂಗ ದೇವರು, ಬಾಲಾಜಿ ಕುಂಬಾರ, ರವೀಂದ್ರ ಕೊಳಕೂರ, ಸಂದೀಪ ಮುಕಿಂದೆ, ಡಾ.ಸಿದ್ದಪ್ಪ ಹೊಸಮನಿ, ನಾಗಪ್ಪ ನಿಣ್ಣೆ, ವೀರಶೆಟ್ಟಿ ಪಾಟೀಲ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಸಲಹೆ
  • ಬಸವಕಲ್ಯಾಣದಲ್ಲಿ ಮನೆಗೊಂದು ಗ್ರಂಥಾಲಯ
ಬಸವಕಲ್ಯಾಣ: ಜ್ಞಾನ ವೃದ್ದಿಗೆ  ಗ್ರಂಥಾಲಯ ಅವಶ್ಯಕವಾಗಿದ್ದು, ಹಲವು ಜ್ಞಾನ ಶಾಖೆಗಳ ಪುಸ್ತಕ ಹೊಂದಿರುವ ಗ್ರಂಥಾಲಯ ಮನೆಯಲ್ಲಿ ಇದ್ದರೆ ಸಹಜವಾಗಿಯೇ ಓದುವ ಹವ್ಯಾಸ ಬೆಳೆಯುತ್ತದೆ ಎಂದು ಕಲಬುರಗಿಯ ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ  ಪಾಟೀಲ ಹೇಳಿದರು.
ನಗರದ ತ್ರಿಪುರಾಂತನ ಬೇಲೂರು ಉರಿಲಿಂಗ ಪೆದ್ದಿ ಮಠದ  ಶಾಖಾ ಮಠದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಜಾಗೃತ ಸಮಿತಿ ಬೀದರ್​ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,  ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಒಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರುವ ಹಾಗೆ ಮಾಡುತ್ತಿರುವುದು ಶ್ಲಾನೀಯವಾಗಿದೆ ಎಂದರು. 
ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ, ಸಾಹಿತಿ ಡಾ.ಭೀಮಾಶಂಕರ ಬಿರಾದಾರ ವಿಶೇಷ ಉಪನ್ಯಾಸ ನೀಡಿ,  ಮಾತನಾಡುವ ಪ್ರವೃತ್ತಿ ಹೆಚ್ಚಾಗಿ ಕೃತಿಗಳ ಓದು ಗೌಣವಾಗುತ್ತಿರುವುದು ಈ ಕಾಲದ ಬಹುದೊಡ್ಡ ಸಾಂಸ್ಕೃತಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಸಾಕ್ಷರತೆ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ, ಗಂಭೀರವಾದ ಓದು ಅಧ್ಯಯನದಲ್ಲಿ ತೊಡಗಿರುವವರ ಸಂಖ್ಯೆ ವಿರಳವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. 
ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ನಿವೃತ್ತ ಪ್ರಾಧ್ಯಾಪಕ ಡಾ.ರೊಲೇಕರ ನಾರಾಯಣ ಮಾತನಾಡಿ, ಯೋಚನೆ ಮಾಡುವ  ಶಕ್ತಿಯನ್ನು ಪುಸ್ತಕ ಓದುವುದರಿಂದ  ಮಾತ್ರ ಸಾಧ್ಯ. ಪುಸ್ತಕಗಳು ನಮ್ಮ ಜೀವನ ಸಂಗಾತಿಯಾಗಿ ನಮ್ಮನ್ನು  ಮುನ್ನಡೆಸುತ್ತವೆ. ಓದು&ಅಧ್ಯಯನಗಳು ಸಾಮಾಜಿಕ ಬೆಳವಣಿಗೆಗೆ ಕಾರಣವಾಗಿವೆ. ಯುವ ಸಮುದಾಯ ಹೆಚ್ಚು ಓದುವ ಮೂಲಕ ನಮ್ಮ ಕಾಲದ ಸತ್ಯಾಸತ್ಯತೆಯನ್ನು ಅರಿಯಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಶ್ರೀ ಪಂಚಾಕ್ಷರಿ ಸ್ವಾಮೀಜಿ  ಮಾತನಾಡಿ, ಜ್ಞಾನ ಪರಂಪರೆಯ ಬೆಳವಣಿಗೆಗೆ ಪುಸ್ತಕಗಳು ಮಹತ್ವ ಪಡೆಯುತ್ತವೆ. ತತ್ವಶಾಸ ವಚನ, ತತ್ವಪದ ಯಾವುದೇ ಕೃತಿಗಳಾದರೂ ಪ್ರತಿಯೊಬ್ಬರ ಮನೆಯಲ್ಲಿ ಇರಬೇಕು ಎಂದರು.
ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಜಿಲ್ಲಾ ಸಂಚಾಲಕ ಬಾಲಾಜಿ ಕುಂಬಾರ ಮಾತನಾಡಿದರು. ಪ್ರಮುಖರಾದ ಸಂದೀಪ ಮುಕಿಂದೆ, ರವೀಂದ್ರ ಕೊಳಕೂರ, ಡಾ.ಸಿದ್ದಪ್ಪ ಹೊಸಮನಿ, ನಾಗೇಂದ್ರ ಡೋಲೆ, ನಾಗಪ್ಪ ನಿಣ್ಣೆ, ಶ್ರೀಪತಿ ಬೇಲೂರು, ಸುಮಿತ ಖೇಳಗಿ, ಮಹಾಲಿಂಗ ದೇವರು, ರಾಮಜಿ ಸಕ್ಪಾಲ್​ ಬೇಲೂರ, ಗುರುನಾಥ ವಾಗ್ಮೊರೆ, ಸುಮಿತ ಖೇಳಗೆ ಇದ್ದರು.  ಜಾಗೃತ ಸಮಿತಿ ಸದಸ್ಯ ಡಾ.ಪೀರಪ್ಪ ಸಜ್ಜನ ನಿರೂಪಣೆ ಮಾಡಿದರು. ಸದಸ್ಯ ವೀರಶೆಟ್ಟಿ ಪಾಟೀಲ ಸ್ವಾಗತಿಸಿ ವಂದಿಸಿದರು. ಗುಲ್ಬರ್ಗ ವಿವಿಯಿಂದ ಪಿಎಚ್​.ಡಿ. ಪದವಿ ಪಡೆದ ಡಾ.ಸಂಜುಕುಮಾರ ನಡುಕರ ಅವರನ್ನು ಸನ್ಮಾನಿಸಲಾಯಿತು.
"

ಪಾಲಕರು ಮೊಬೈಲ್​ ಬಿಟ್ಟು ಪುಸ್ತಕ ಹಿಡಿದರೆ ಮಕ್ಕಳಲ್ಲಿ ಓದುವ ರೂಢಿ ಕರಗತವಾಗುತ್ತದೆ. ಮನೆ, ಮಠ, ಶಾಲೆ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಗ್ರಂಥಾಲಯ ಅನುಷ್ಠಾನಕ್ಕೆ ತರಬೇಕು. ನಮ್ಮೆಲ್ಲರ ಜೀವನ ಕೈಹಿಡಿದು ನಡೆಸುವ ಕೆಲಸ ಪುಸ್ತಕದಿಂದ ಸಾಧ್ಯ

— > ಶ್ರೀ ಪಂಚಾಕ್ಷರಿ ಸ್ವಾಮೀಜಿ ಪೀಠಾಧಿಪತಿ, ಉರಿಲಿಂಗಪೆದ್ದಿ ಮಠ


"

ಸಾರ್ವಜನಿಕ ಜೀವನದಲ್ಲಿ ಇರುವವರು ಹೆಚ್ಚು ಓದುವ ಮೂಲಕ ಜನ ಸಮುದಾಯದ ಸಮಸ್ಯೆ ಹಾಗೂ ಸವಾಲುಗಳಿಗೆ ಕಾಳಜಿಯಿಂದ ಸ್ಪಂದಿಸಬಹುದು. ಪಠ್ಯ ಓದು ವ್ಯಕ್ತಿಯ ಒಳ ಮತ್ತು ಹೊರ ಜಗತ್ತನ್ನು ಬದಲಾಯಿಸುವ ಸಾಧ್ಯತೆ ಹೊಂದಿದೆ.

— > ಡಾ.ಭೀಮಾಶಂಕರ ಬಿರಾದಾರ ಪ್ರಾಚಾರ್ಯ, ಬಸವಕಲ್ಯಾಣ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net