ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ

ಕಲಬುರಗಿ ಸಿದ್ದೇಶ್ವರ ಕಾಲನಿ ನಿವಾಸಿ ಸಾಹಿತಿ ಡಾ.ರಾಜಶೇಖರ ಮಾಂಗ್​ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಇತ್ತೀಚಿಗೆ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿ.ಎಚ್​.ನಿರಗುಡಿ, ಡಾ.ಸೂರ್ಯಕಾಂತ ಸುಜ್ಯಾತ, ಡಾ.ಶೋಭಾದೇವಿ ಚಕ್ಕಿ, ಡಾ.ಪರ್ವೀನ್​ ಸುಲ್ತಾನಾ, ರೇವಣಸಿದ್ದಪ್ಪ ದುಕಾನ, ಶ್ರೀಶೈಲ ಮದಾನೆ, ಆನಂದ್​ ಕೊಡೇಕಲ್​, ವಿಜಯಕುಮಾರ ರಾವೂರ, ಅರುಣಕುಮಾರ ಪಾಂಡವ, ಧೂಳಪ್ಪ ದ್ಯಾಮನಕರ್​, ಭೀಮೇಶ್ವರಿ ಮಾಂಗ್​ ಇದ್ದರು.
ಕಲಬುರಗಿ ಸಿದ್ದೇಶ್ವರ ಕಾಲನಿ ನಿವಾಸಿ ಸಾಹಿತಿ ಡಾ.ರಾಜಶೇಖರ ಮಾಂಗ್​ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಇತ್ತೀಚಿಗೆ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿ.ಎಚ್​.ನಿರಗುಡಿ, ಡಾ.ಸೂರ್ಯಕಾಂತ ಸುಜ್ಯಾತ, ಡಾ.ಶೋಭಾದೇವಿ ಚಕ್ಕಿ, ಡಾ.ಪರ್ವೀನ್​ ಸುಲ್ತಾನಾ, ರೇವಣಸಿದ್ದಪ್ಪ ದುಕಾನ, ಶ್ರೀಶೈಲ ಮದಾನೆ, ಆನಂದ್​ ಕೊಡೇಕಲ್​, ವಿಜಯಕುಮಾರ ರಾವೂರ, ಅರುಣಕುಮಾರ ಪಾಂಡವ, ಧೂಳಪ್ಪ ದ್ಯಾಮನಕರ್​, ಭೀಮೇಶ್ವರಿ ಮಾಂಗ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ
ಕಲಬುರಗಿ: ಪುಸ್ತಕಗಳು ಜ್ಞಾನ, ಅನುಭವ ಹಾಗೂ ಜೀವನದ ಮಾರ್ಗದರ್ಶಕಗಳಾಗಿವೆ. ಒಂದು ಉತ್ತಮ ಪುಸ್ತಕ ನೆಮ್ಮದಿಯ ಬದುಕಿಗೆ ಬೆಳಕಾಗಿದೆ ಎಂದು ಸಾಹಿತಿ ಡಾ.ಸೂರ್ಯಕಾಂತ ಸುಜ್ಯಾತ ಹೇಳಿದರು. 
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಸಹಯೋಗದಲ್ಲಿ ಸೇಡಂ ರಸ್ತೆಯ ಸಿದ್ದೇಶ್ವರ ಕಾಲನಿಯ ಸಾಹಿತಿ, ಪ್ರಾಚಾರ್ಯ ಡಾ.ರಾಜಶೇಖರ ಮಾಂಗ್​ ನಿವಾಸದಲ್ಲಿ ಇತ್ತೀಚಿಗೆ ಮನೆಗೊಂದು ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
 ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಒಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರುವ ಹಾಗೆ ಮಾಡುತ್ತಿರುವುದು ಶ್ಲಾನೀಯ. ಇಂದಿನ ವಿದ್ಯಾರ್ಥಿಗಳು ಮೊಬೈಲ್​ ಗೀಳಿಗೆ ಬಿದ್ದಿದ್ದಾರೆ. ಅವರನ್ನು ಪುಸ್ತಕ ಓದುವ ರುಚಿ ಹಚ್ಚುವ ವಿಶೇಷ ಕಾರ್ಯಕ್ರಮ ಪ್ರಾಧಿಕಾರದ್ದು ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಪ್ರಾಧಿಕಾರದ ಸದಸ್ಯ ಬಿ.ಎಚ್​.ನಿರಗುಡಿ ಮಾತನಾಡಿ, ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ಅಂಗಳದಲ್ಲಿ ತಿಂಗಳ ಪುಸ್ತಕ ವಿಶೇಷ ಕಾರ್ಯಕ್ರಮಗಳ ಜತೆಗೆ ಈ ಭಾಗದ ಸಾಹಿತಿಗಳ ಸಂಪುಟಗಳನ್ನು ಹೊರ ತರುವುದು ಶಾಲಾ&ಕಾಲೇಜುಗಳಲ್ಲಿ ನನ್ನ ನೆಚ್ಚಿನ ಪುಸ್ತಕ , ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳುವುದು,  ಈ ಭಾಗದ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ನೀಡುವುದು, ಮನೆ  ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಮಾಡುವುದು ಹಾಗೂ ಪ್ರಾಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಸಾಹಿತಿ ಡಾ.ರಾಜಶೇಖರ ಮಾಂಗ್​ ಮಾತನಾಡಿ, ಸಾಹಿತ್ಯ ಹಾಗೂ ಸ್ಪರ್ಧಾತ್ಮಕ ಪರೀೆಯ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಓದಲು ನೀಡುತ್ತಿದ್ದೇನೆ. ಇನ್ನು ದೊಡ್ಡದಾದ ಗ್ರಂಥಾಲಯ ಮನೆಯಲ್ಲಿ  ನಿರ್ಮಿಸುವ ಯೋಜನೆ ಹೊಂದಿದ್ದು, ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎನ್ನುವ ಮನೋಭಾವನೆ ನಮ್ಮದು ಎಂದು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕಿ ಡಾ.ಶೋಭಾದೇವಿ ಚೆಕ್ಕಿ ನಿರೂಪಿಸಿದರು. ಸಮಿತಿ ಸದಸ್ಯೆ ಡಾ.ಪರ್ವೀನ್​ ಸುಲ್ತಾನಾ, ರೇವಣಸಿದ್ದಪ್ಪ ದುಕಾನ, ಶ್ರೀಶೈಲ ಮದಾನೆ, ಶಿಕರಾದ ಆನಂದ್​ ಕೊಡೇಕಲ್​, ವಿಜಯಕುಮಾರ ರಾವೂರ, ಅರುಣಕುಮಾರ ಪಾಂಡವ, ಧೂಳಪ್ಪ ದ್ಯಾಮನಕರ್​, ಭೀಮೇಶ್ವರಿ ಮಾಂಗ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net