ಹಲ್ಲು ಶುಚಿಗೊಳಿಸುವ ಶಿಬಿರ

dental
dental
Published on
ಬೆಳಗಾವಿ: ಮರಾಠ ಮಂಡಳದ ನಾಥಾಜಿರಾವ ಜಿ. ಹಲಗೇಕರ ದಂತ ವಿಜ್ಞಾನ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದ ಪಿರಿಯೋಡಾಂಟಾಲಜಿ ವಿಭಾಗ ಬಾಯಿ ನೈರ್ಮಲ್ಯ ದಿನದ ಅಂಗವಾಗಿ ಆ.1ರಂದು ಸಾರ್ವಜನಿಕರಿಗಾಗಿ ಉಚಿತ ಹಲ್ಲು ಶುಚಿಗೊಳಿಸುವ (ಹ್ಯಾಂಡ್ ಸ್ಕೇಲಿಂಗ್) ಶಿಬಿರ ಆಯೋಜಿಸಿದೆ.
ಅನುಭವಿ ದಂತ ವೈದ್ಯರು ಉಚಿತ ಹ್ಯಾಂಡ್ ಸ್ಕೇಲಿಂಗ್, ಸಂಪೂರ್ಣ ಬಾಯಿ/ದಂತ ಆರೋಗ್ಯ ತಪಾಸಣೆ, ವೈಯಕ್ತಿಕ ಬಾಯಿ ನೈರ್ಮಲ್ಯ ಸಲಹೆಗಳು ಮತ್ತು ಸರಿಯಾದ ರೀತಿಯಲ್ಲಿ ಹಲ್ಲುಜ್ಜುವ ವಿಧಾನಗಳ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಜತೆಗೆ ಜೀವಮಾನವಿಡೀ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ರಕ್ಷಣಾ ಕ್ರಮಗಳ ಕುರಿತು ಸಲಹೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net