ವಳಖಿಂಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಚಿಟಗುಪ್ಪಗೆ ಮಂಗಳವಾರ ಆಗಮಿಸಿದ್ದ ಜಿಪಂ ಸಿಒಒ ಗಿರೀಶ್​ ಬದೋಲೆ ಅವರಿಗೆ ವಳಖಿಂಡಿ ಗ್ರಾಮದ ಸಮಸ್ಯೆಗಳ ಕುರಿತು ಗ್ರಾಪಂ ಮಾಜಿ ಅಧ್ಯಕ್ಷ ರಾಜಕುಮಾರ ನಡುವಿನದೊಡ್ಡಿ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ತಹಸೀಲ್ದಾರ್​ ಮಂಜುನಾಥ ಮಂಚಾಳ, ತಾಪಂ ಇಒ ಲಿಂಗರಾಜ ಪಾಟೀಲ್​ ಇತರರಿದ್ದರು.
ಚಿಟಗುಪ್ಪಗೆ ಮಂಗಳವಾರ ಆಗಮಿಸಿದ್ದ ಜಿಪಂ ಸಿಒಒ ಗಿರೀಶ್​ ಬದೋಲೆ ಅವರಿಗೆ ವಳಖಿಂಡಿ ಗ್ರಾಮದ ಸಮಸ್ಯೆಗಳ ಕುರಿತು ಗ್ರಾಪಂ ಮಾಜಿ ಅಧ್ಯಕ್ಷ ರಾಜಕುಮಾರ ನಡುವಿನದೊಡ್ಡಿ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ತಹಸೀಲ್ದಾರ್​ ಮಂಜುನಾಥ ಮಂಚಾಳ, ತಾಪಂ ಇಒ ಲಿಂಗರಾಜ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಒಒ ಗಿರೀಶ್​ ಅವರಿಗೆ ಗ್ರಾಮಸ್ಥರ ಮನವಿ
ಚಿಟಗುಪ್ಪ: ತಾಲೂಕಿನ ಇಟಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಖಿಂಡಿ ಗ್ರಾಮದ ಮೂಲಸೌಕರ್ಯ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್​ ಬದೋಲೆ ಅವರನ್ನು ಗ್ರಾಮಸ್ಥರು ಆಗ್ರಹಿಸಿದರು.
ಪಟ್ಟಣಕ್ಕೆ ಮಂಗಳವಾರ ಆಗಮಿಸಿದ ಸಿಇಒ ಅವರಿಗೆ ಮನವಿ ಸಲ್ಲಿಸಿ, ಕಳೆದ ಒಂದು ವರ್ಷದಿಂದ ವಿಬಿ-ಜಿ -ರಾಮ್​ ಜಿ ಯೋಜನೆಯಡಿ ಗ್ರಾಮದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಚುನಾಯಿತ ಪ್ರತಿನಿಧಿಗಳು ಇಲ್ಲದಿರುವುದನ್ನು ದುರುಪಯೋಗಪಡಿಸಿಕೊಂಡು ಪಂಚಾಯಿತಿ ಆಡಳಿತ ಗ್ರಾಮಾಭಿವೃದ್ಧಿಯನ್ನು ರ್ನಿಲಕ್ಷಿಸುತ್ತಿದೆ ಎಂದು ದೂರಿದರು.
ಗಣಿಗಾರಿಕೆ ಲಾರಿಗಳ ಅಕ್ರಮ ಹಾಗೂ ಭಾರಿ ವಾಹನಗಳ ಸಂಚಾರದಿಂದ ಗ್ರಾಮದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಹಲವು ಬಡಾವಣೆಗಳಲ್ಲಿ ಕೊಳಚೆ ನೀರು ರಸ್ತೆಗಳ ಮೇಲೆಯೇ ಹರಿಯುತ್ತಿದ್ದು, ಸ್ವಚ್ಛತಾ ವ್ಯವಸ್ಥೆ ಹದಗೆಟ್ಟಿದೆ. ಗ್ರಾಮಸಭೆ ಹಾಗೂ ವಾರ್ಡ್​ ಸಭೆ ನಿಯಮಾನುಸಾರ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಇಟಗಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಿಇಒ ಸಿಬ್ಬಂದಿ ಇಲ್ಲದ ಕಾರಣ ಸಾರ್ವಜನಿಕರಿಗೆ ಅಗತ್ಯ ಸೇವೆ ಪಡೆಯಲು ತೊಂದರೆಯಾಗುತ್ತಿದೆ. ಕೂಡಲೇ ಸಿಬ್ಬಂದಿ ನೇಮಕ ಮಾಡಬೇಕು. ಪಿಡಿಒ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ರಾಜಕುಮಾರ ನಡುವಿನದೊಡ್ಡಿ, ಪ್ರಮುಖರಾದ ಮಾರುತಿ ಪೋಲಾ, ಶಿವಾಜಿ ಶೇರಿಕಾರ, ಸುನೀಲಕುಮಾರ ಭಂಗೆನೂರ, ಗುಂಡಪ್ಪ ಭಂಗೆನೂರ ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net