ಇಷ್ಟೇ ಅಲ್ಲದೆ, ಈ ಸ್ಥಳದಲ್ಲಿ ನಿಂತು ಬೆಳಗಿನ ಸೂರ್ಯೋದಯ, ಸಂಜೆಯ ಸೂರ್ಯಾಸ್ತಮದ ಸಮಯದಲ್ಲಿ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ಹಿತಾನುಭವ ನೀಡುತ್ತದೆ. ಪರಿಸರ ಪ್ರೇಮಿಗಳಾಗಿದ್ದರೆ ಓಪನ್ ಟೆರೇಸ್ ಅನ್ನು ಅಂದವಾದ ಉದ್ಯಾನವನ್ನಾಗಿ ನಿರ್ಮಿಸಿಕೊಳ್ಳುತ್ತಾರೆ. ಇದರ ನಡುವೆ ಮೇಜು ಕುರ್ಚಿಗಳನ್ನು ಅಳವಡಿಸಿ ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯಲು ಪೂರಕ ವಾತಾವರಣ ಮಾಡಿಕೊಳ್ಳುತ್ತಾರೆ.