ಪಿಡಿಒಗಳ ಸಮಸ್ಯೆ ನಿವಾರಿಸವ ಮಾರ್ಗಸೂಚಿಗೆ ಆಗ್ರಹ

ಪಿಡಿಒಗಳ ಮೇಲಿನ ಒತ್ತಡ ತಡೆಗಟ್ಟಲು ಕೂಡಲೇ ಮಾರ್ಗಸೂಚಿ ಹೊರಡಿಸಬೇಕೆಂದು ಆಗ್ರಹಿಸಿ ರಾಜ್ಯ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳ (ಬಿ&ಗ್ರೇಡ್​)ಹುದ್ದೆ ಉನ್ನತಿಕರಣ ಸಂ ಗುರುವಾರ ಗುರುಮಠಕಲ್​ ತಾಪಂ ಇಒಗೆ ಮನವಿಪತ್ರ ಸಲ್ಲಿಸಿತು. ಭೀಮರಾಯ,  ರಾಧಿಕ ರೆಡ್ಡಿ, ಸರೋಜಾ ಇತರರಿದ್ದರು.
ಪಿಡಿಒಗಳ ಮೇಲಿನ ಒತ್ತಡ ತಡೆಗಟ್ಟಲು ಕೂಡಲೇ ಮಾರ್ಗಸೂಚಿ ಹೊರಡಿಸಬೇಕೆಂದು ಆಗ್ರಹಿಸಿ ರಾಜ್ಯ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳ (ಬಿ&ಗ್ರೇಡ್​)ಹುದ್ದೆ ಉನ್ನತಿಕರಣ ಸಂ ಗುರುವಾರ ಗುರುಮಠಕಲ್​ ತಾಪಂ ಇಒಗೆ ಮನವಿಪತ್ರ ಸಲ್ಲಿಸಿತು. ಭೀಮರಾಯ, ರಾಧಿಕ ರೆಡ್ಡಿ, ಸರೋಜಾ ಇತರರಿದ್ದರು.
Published on
ಗುರುಮಠಕಲ್​: ರಾಜ್ಯದ ಗ್ರಾಮ ಪಂಚಾಯಿತಿಗಳ ಆರ್ಥಿಕ ಬಿಕ್ಕಟ್ಟು ನಿರ್ವಹಣೆ, ಬಾಕಿ ಬಿಲ್​ ಪಾವತಿಗೆ ಕೆಟಿಪಿಪಿ ಕಾಯ್ದೆಯಿಂದ ವಿಶೇಷ ವಿನಾಯಿತಿ ಮತ್ತು ಪಿಡಿಒಗಳ ಮೇಲಿನ ಒತ್ತಡ ಮತ್ತು ಬೆದರಿಕೆ ತಡೆಗಟ್ಟಲು ತುರ್ತು ಮಾರ್ಗಸೂಚಿ ಹೊರಡಿಸಬೇಕು ಎಂದು ರಾಜ್ಯ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳ (ಬಿ&ಗ್ರೇಡ್​)ಹುದ್ದೆ ಉನ್ನತಿಕರಣ ಸಂ ಆಗ್ರಹಿಸಿದೆ.
ಈ ಕುರಿತು ಪಟ್ಟಣದ ತಾಪಂ ಇಒಗೆ ಮನವಿ ಸಲ್ಲಿಸಿದ ಸಂ, ರಾಜ್ಯದ ಗ್ರಾಮೀಣಾಭಿವೃದ್ಧಿ ವ್ಯವಸ್ಥೆಯ ಬೆನ್ನೆಲುಬಾಗಿರುವ ಗ್ರಾಮ ಪಂಚಾಯಿತಿಗಳು ಪ್ರಸ್ತುತ ಹಿಂದೆಂದೂ ಕಾಣದಂತಹ ಆರ್ಥಿಕ ಮತ್ತು ಆಡಳಿತಾತ್ಮಕ ಬಿಕ್ಕಟ್ಟು ಎದುರಿಸುತ್ತಿವೆ. ರಾಜ್ಯದ 5,950 ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯು ಅನುದಾನದ ಕೊರತೆಯಿಂದಾಗಿ ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ ಎಂದು ರಾಜ್ಯದ ಪಿಡಿಒ ಅವರು ಗೂಗಲ್​ ಮೀಟ್​ ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ. 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡಬೇಕು. ಬೃಹತ್​ ಮೊತ್ತದ ಬಾಕಿ ಬಿಲ್​ ಪಾವತಿಸಬೇಕು. ಪಿಡಿಒಗಳ ಮೇಲೆ ಒತ್ತಡ ಹೇರುವುದನ್ನು ಮತ್ತು ಸಾರ್ವಜನಿಕರ ಬೆದರಿಕೆ ತಪ್ಪಿಸಿ ಭದ್ರತೆ ನೀಡಬೇಕು ಎಂದು ಆಗ್ರಹಿಸಿದೆ.
ಈ ವೇಳೆ ಸಂದ ಜಿಲ್ಲಾ ಕಾರ್ಯದರ್ಶಿ ಭೀಮರಾಯ, ಪ್ರಾಧನ ಕಾರ್ಯದರ್ಶಿ ಸರಸ್ಪತಿ, ತಾಲೂಕು ಗೌರವಾಧ್ಯೆ ಅನುರಾಧ, ಉಪಾಧ್ಯೆ ರಾಧಿಕ ರೆಡ್ಡಿ, ತಾಲೂಕು ಮಹಿಳಾ ಉಪಾಧ್ಯೆ ಸರೋಜಾ, ಖಜಾಂಚಿ ಶಿವರಾಜ್​, ಕಾರ್ಯದರ್ಶಿ ಗೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net