ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸವದತ್ತಿ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದಗೆ ರೈತಪರ ಸಂಟನೆಗಳ ವತಿಯಿಂದ ಮನವಿ ಸಲ್ಲಿಸಲಾಯಿತು. ಬಸವರಾಜ ಬಿಜ್ಜೂರ, ಅಲ್ಲಿಸಾಬ್​ ನೂಲಗಿ, ಸಿಂಧೂರ ತೆಗ್ಗಿ, ಮಂಜುನಾಥ ವಣ್ಣೂರ, ರಂಗಪ್ಪ ಗಂಗರಡ್ಡಿ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸವದತ್ತಿ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದಗೆ ರೈತಪರ ಸಂಟನೆಗಳ ವತಿಯಿಂದ ಮನವಿ ಸಲ್ಲಿಸಲಾಯಿತು. ಬಸವರಾಜ ಬಿಜ್ಜೂರ, ಅಲ್ಲಿಸಾಬ್​ ನೂಲಗಿ, ಸಿಂಧೂರ ತೆಗ್ಗಿ, ಮಂಜುನಾಥ ವಣ್ಣೂರ, ರಂಗಪ್ಪ ಗಂಗರಡ್ಡಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಸವದತ್ತಿ
ರೆತರ ಸಮಸ್ಯೆಗಳಿಗೆ ಸರ್ಕಾರ ತಣ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೆತ ಸಂ ಹಾಗೂ ಹಸಿರುಸೇನೆ ಕಾರ್ಯಾಧ್ಯ ಬಸವರಾಜ ಬಿಜ್ಜೂರ ಎಚ್ಚರಿಕೆ ನೀಡಿದರು.
ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್​ ಕಾರ್ಯಾಲಯದಲ್ಲಿ ಶುಕ್ರವಾರ ರೆತ ಸಂಟನೆ ವತಿಯಿಂದ ತಹಸೀಲ್ದಾರ್​ಗೆ ಮನವಿ ಸಲ್ಲಿಸಿ ಮಾತನಾಡಿದರು.
2026ರ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಎಲ್ಲ ಕಷಿ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಿ, ಬೆಳೆಹಾನಿ ಪರಿಹಾರ ಹಾಗೂ ಬೆಳೆ ವಿಮೆ ಮೊತ್ತವನ್ನು ರೆತರ ಬ್ಯಾಂಕ್​ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ಮಹದಾಯಿ ಹಾಗೂ ಕಳಸಾ&ಬಂಡೂರಿ ಯೋಜನೆ ತ್ವರಿತವಾಗಿ ಜಾರಿಗೊಳಿಸಿ ಮಲಪ್ರಭಾ ಜಲಾಶಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. 2026ರ ಪ್ರಧಾನಮಂತ್ರಿ ಸಲ್​ ಬಿಮಾ ಯೋಜನೆಯ ಹೊಸ ನಿಯಮ ರದ್ದುಗೊಳಿಸಿ, 2025ರ ನಿಯಮಾವಳಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ರೆತ ಸೇನಾ ಸವದತ್ತಿ ಶಹರ ಅಧ್ಯ ಅಲ್ಲಿಸಾಬ್​ ದಿಲಾವರಸಾಬ್​ ನೂಲಗಿ ಮಾತನಾಡಿ, ಬ್ಯಾಂಕ್​ ಸಿಬ್ಬಂದಿ ರೆತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಬೆಳೆ ಸಾಲದ ಪ್ರಮಾಣಪತ್ರ ಹಾಗೂ ಬೆಳೆ ವಿಮೆ ನೋಂದಣಿ ವಿಚಾರದಲ್ಲಿ ರೆತರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಗ್ರೇಡ್​&2 ತಹಸೀಲ್ದಾರ್​ ಎಂ.ಎನ್​.ಮಠದಗೆ ವಿವಿಧ ರೆತ ಸಂಟನೆ ವತಿಯಿಂದ ರೆತ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಕಾರ್ಯಾಧ್ಯ ಸಿಂಧೂರ ತೆಗ್ಗಿ, ಬೆಲಹೊಂಗಲ ಅಧ್ಯ ಮಂಜುನಾಥ ವಣ್ಣೂರ, ಯರಗಟ್ಟಿ ಅಧ್ಯ ರಂಗಪ್ಪ ಗಂಗರಡ್ಡಿ, ಹಸಿರುಸೇನೆ ಅಧ್ಯ ಬಿರಾದಾರ ಪಾಟೀಲ, ಮಹಾಂತೇಶ ಮುತವಾಡ, ಸಿದ್ದಪ್ಪ ಚಂದರಗಿ, ಜಿಲ್ಲಾ ಸಂಚಾಲಕರಾದ ಯಲ್ಲನಾಯ್ಕ ನಾಯ್ಕರ, ಅಶೋಕ ನಂದಿ, ಶಂಕರ ಬಗನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net