ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್​: ಒಂಟಿ ಮಹಿಳೆಯೊಂದಿಗೆ ಅನುಚಿತ ವರ್ತನೆ; ಪೊಲೀಸರಿಂದ ಬಂಧನ! Delivery Boy Misbehaves

ಮನೆಯಲ್ಲಿದ್ದ ಒಂಟಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆಸಾಮಿ
ಮನೆಯಲ್ಲಿದ್ದ ಒಂಟಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆಸಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್​
  • ಮನೆಯಲ್ಲಿದ್ದ ಒಂಟಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆಸಾಮಿ
  • ತನ್ನ ಖಾಸಗಿ ಅಂತವನ್ನು ತೋರಿಸಿ ವಿಕೃತಿ ಮೆರೆದ ಮಲ್ಲಿಕಾರ್ಜುನ್​ ಬಂಧನ
  • ಘಟನೆ ವಿಡಿಯೋ ಹಂಚಿಕೊಂಡ ಸಂತೃಸ್ತೆ ಫಾತಿಮಾ
ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿದ ಡೆಲಿವರಿ ಏಜೆಂಟ್​ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ (Delivery Boy Misbehaves) ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮನೆಗೆ ಆನ್​ಲೈನ್​ನಲ್ಲಿ ತರಿಸಿದ್ದ ಪಾರ್ಸೆಲ್​ಅನ್ನು ನೀಡಲು ಬಂದಿದ್ದ ಮಲ್ಲಿಕಾರ್ಜುನ್​ ಕಾಮತ್​ ಎಂಬ ಇ-ಕಾಮರ್ಸ್​ ಡೆಲಿವರಿ ಹುಡುಗನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಆಗಿದ್ದೇನು?

ನಿಲೋಫರ್​ ಫಾತಿಮಾ ಎಂಬ ಯುವತಿ ಇ-ಕಾಮರ್ಸ್​ ಸೈಟ್​ನಿಂದ ಕೆಲ ವಸ್ತುಗಳನ್ನು ಆರ್ಡ್​ರ್​ ಮಾಡಿದ್ದಳು. ಅದನ್ನು ತಲುಪಿಸಲು ಬಂದ ಮಲ್ಲಿಕಾರ್ಜುನ್​ ಕಾಮತ್​, ಆರ್ಡ್​ರ್​ ನೀಡಿದ ಬಳಿಕ ಶೌಚಾಲಯವನ್ನು ಬಳಸುವುದಾಗಿ ಕೇಳಿದ್ದಾನೆ. ಮನೆಯಲ್ಲಿ ಒಬ್ಬಳೇ ಇದ್ದ ಕಾರಣ ಬೇಡ, ಬೇಕಿದ್ದರೆ ಪಕ್ಕದಲ್ಲಿ ಪುರುಷರ ಫ್ಲಾಟ್​ ಇದೆ ಅವರ ಬಳಿ ವಿನಂತಿಸಿಕೊಳ್ಳಿ ಎಂದು ಫಾತಿಮಾ ಹೇಳಿದ್ದಾರೆ.
ಆದರೆ ಫಾತಿಮಾ ಮಾತಿಗೆ ಕ್ಯಾರೆ ಎನ್ನದ ಮಲ್ಲಿಕಾರ್ಜುನ್​, ಅಕ್ರಮವಾಗಿ ಮನೆಯನ್ನು ಪ್ರವೇಶಿಸಿ, ಶೌಚಾಲಯವನ್ನು ಬಳಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಡೆಲಿವರಿ ಬಾಯ್​, ತನ್ನ ಖಾಸಗಿ ಅಂಗವನ್ನು ಮಹಿಳೆಗೆ ತೋರಿಸಿ, ಅಶ್ಲೀಲ ಸನ್ನೆಗಳನ್ನು ಮಾಡಿದ್ದಾನೆ.
ಇವನ ಈ ಕೃತ್ಯವನ್ನು ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದ ಫಾತಿಮಾ ತನ್ನ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ನನ್ನ ಮನೆಯಲ್ಲಿ ನನಗೆ ಸುರಕ್ಷಿತಳಾಗಿಲ್ಲ ಎನ್ನುವಂತೆ ಅನ್ನಿಸಿದೆ, ಅವನು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ, ನನಗೆ ಬಹಳ ಭಯವಾಗುತ್ತಿದೆ ಎಂದು ಫಾತಿಮಾ ಭಾವುಕಳಾಗಿ ವಿಡಿಯೋ ಹಂಚಿಕೊಂಡಿದ್ದಾರೆ.

ಪೊಲೀಸರಿಂದ ಪ್ರತಿಕ್ರಿಯೆ; ಆರೋಪಿ ಬಂಧನ!

ಫಾತಿಮಾಳ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ಕೂಡಲೇ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಆತನ ಬಗ್ಗೆ ಸಂಪೂರ್ಣ ವಿವಿರವನ್ನು ನೀಡುವಂತೆ ಫಾತಿಮಾರಲ್ಲಿ ಹೇಳಿದ್ದಾರೆ. ಫಾತಿಮಾ ನೀಡಿದ ಮಾಹಿತಿ ಹಾಗೂ ದೂರನ್ನು ಆಧರಿಸಿ ಮಾರತಳ್ಳಿ ವ್ಯಾಪ್ತಿಯಲ್ಲಿ ಈ ಮಲ್ಲಿಕಾರ್ಜುನ ಕಾಮತ್​ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net