ದಾವೂದ್ ಹೆಸರಲ್ಲಿ ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ: ಕಾರ್ಯಪ್ರವರ್ತರಾದ ಖಾಕಿ ಪಡೆ; ಮುಂಬೈನಲ್ಲಿ ಮತ್ತೆ ಸಕ್ರೀಯವಾದ ಡಿ-ಕಂಪನಿ? Dawood Ibrahim Bomb Threat

ಪ್ರಖ್ಯಾತ ತಾಜ್ ಹೋಟೆಲ್‌ಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬಾಂಬ್ ಬೆದರಿಕೆ
ಪ್ರಖ್ಯಾತ ತಾಜ್ ಹೋಟೆಲ್‌ಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬಾಂಬ್ ಬೆದರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಖ್ಯಾತ ತಾಜ್ ಹೋಟೆಲ್‌ಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಬಾಂಬ್ ಬೆದರಿಕೆ
  • ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಶೋಧ ಕಾರ್ಯ
  • ಮುಂಬೈನಲ್ಲಿ ಮತ್ತೆ ಡಿ-ಕಂಪನಿ ಸಕ್ರೀಯವಾಗಿದೆಯೇ ಎಂಬ ಆಯಾಮದಲ್ಲಿ ಪೊಲೀಸರ ತನಿಖೆ
ಮುಂಬೈ: ನವಿ ಮುಂಬೈನಲ್ಲಿರುವ ದೇಶದ ಪ್ರಖ್ಯಾತ ತಾಜ್​ ಹೋಟೆಲ್​​ನಲ್ಲಿ ಭೂಗತ ಪಾತಕಿ ದಾವೂದ್​ ಇಬ್ರಾಹಿಂ (Dawood Ibrahim Bomb Threat) ಬಾಂಬ್​​ ಇಟ್ಟಿದ್ದಾನೆಂಬ ಬೆದರಿಕೆ ಕರೆ ಬಂದಿದ್ದು, ಸದ್ಯ ಹೋಟೆಲ್​ ಸುತ್ತ ಬಿಗಿ ಭದ್ರತೆಯನ್ನು ನೀಡಲಾಗಿದೆ. ತಡರಾತ್ರಿ ನವಿ ಮುಂಬೈ ಪೊಲೀಸ್​ ಠಾಣೆಗೆ ಅಪರಿಚಿತ ಕರೆ ಬಂದಿದ್ದು, ಫೋನ್​ ಮಾಡಿದ ವ್ಯಕ್ತಿ, ತಾಜ್​ ಹೋಟೆಲ್​ನಲ್ಲಿ ದಾವೂದ್​ ಇಬ್ರಾಹಿಂ ಬಾಂಬ್​ ಇಟ್ಟಿದ್ದಾನೆಂದು ಹೇಳಿ ಕರೆಯನ್ನು ಕಟ್​ ಮಾಡಿದ್ದಾನೆ.

ಕಾರ್ಯಪ್ರವರ್ತರಾದ ಪೊಲೀಸ್​!

ಬೆದರಿಕೆ ಕರೆ ಬಂದ ಕೂಡಲೇ ಜಾಗ್ರತರಾದ ನವಿ ಮುಂಬೈ ಪೊಲೀಸರು ಕೂಡಲೇ ಹೋಟೆಲ್​ ಸಿಬ್ಬಂದಿಗಳಿಗೆ ಹಾಗೂ ಬಾಂಬ್​ ಸಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಾಂಬ್​ ಸಿಷ್ಕ್ರಿಯ ದಳದ ಸಿಬ್ಬಂದಿಗಳು ಹೋಟೆಲ್​ನ ಕೋಣೆಗಳು, ಸ್ವಿಮ್ಮಿಂಗ್​ ಪೂಲ್​, ಬಾಂಕ್ವೆಟ್​ ಹಾಲ್ಸ್, ರೆಸ್ಟೋರಂಟ್ಸ್, ಪಾರ್ಕಿಂಗ್ ಪ್ರದೇಶ ಎಲ್ಲಾ ಕಡೆ ಬಾಂಬ್​ಗಾಗಿ ಹುಡುಕಾಟ ನಡೆಸಿದ್ದಾರೆ.
ಆದರೆ ಎಲ್ಲಿ ಸಹ ಯಾವುದೇ ಸ್ಪೋಟಕ ದೊರೆತಿಲ್ಲ, ಇದೊಂದು ಹುಸಿ ಬಾಂಬ್​ ಕರೆ ಇರಬಹುದೆಂದು ಬಾಂಬ್​ ನಿಷ್ಕ್ರಿಯ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹೋಟೆಲ್​ಗೆ ಭದ್ರತೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಮುಂದುವರಿದ ಶೋಧ ಕಾರ್ಯಚರಣೆ!

ಒಂದು ಕಡೆ ಬಾಂಬ್​ ನಿಷ್ಕ್ರಿಯ ದಳದವರು ತಾಜ್​ನಲ್ಲಿ ಬಾಂಬ್​ ಪತ್ತೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಪೊಲೀಸರು ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ. ಮಾಹಿತಿ ಪ್ರಕಾರ, ಈ ಕರೆಯು ನವಿ ಮುಂಬೈನಲ್ಲಿರು ತುರ್ಭೆ ಪ್ರದೇಶದಿಂದ ಬಂದಿದೆ ಎಂದು ತಿಳಿದು ಬಂದಿದ್ದು, ತುರ್ಭೆ ಠಾಣೆಯ ಹಾಗೂ ನವಿ ಮುಂಬೈನ ಪೊಲೀಸರು ಈ ಹುಸಿ ಬಾಂಬ್​ ಕರೆ ಮಾಡಿದ ವ್ಯಕ್ತಿಯ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಅಂತಯೇ ಐಬಿ ಹಾಗೂ ರಾ ಮೂಲಕ ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂ, ಮುಂಬೈ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದನೆ? ಎಂಬ ಆಯಾಮದಲ್ಲಿ ಸಹ ಮಾಹಿತಿ ಪಡೆಯಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net