ಹೆಚ್ಚಿನ ಸಮಯ ಅಭ್ಯಾಸಕ್ಕೆ ಮೀಸಲಿಡಿ

ಯಾದಗಿರಿಯಲ್ಲಿ ಸೋಮವಾರ ಕರವೇ ಜಿಲ್ಲಾ ಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಎಸ್​ಪಿ ಪೃಥ್ವಿಕ್​ ಶಂಕರ್​ ಸನ್ಮಾನಿಸಿದರು. ಹಲಕಟ್ಟಿ ಶ್ರೀಗಳು, ಟಿ.ಎನ್​.ಭೀಮುನಾಯಕ, ಡಾ.ನಿವೇದಿತಾ ಭಾವಿಮನಿ ಇತರರಿದ್ದರು.
ಯಾದಗಿರಿಯಲ್ಲಿ ಸೋಮವಾರ ಕರವೇ ಜಿಲ್ಲಾ ಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಎಸ್​ಪಿ ಪೃಥ್ವಿಕ್​ ಶಂಕರ್​ ಸನ್ಮಾನಿಸಿದರು. ಹಲಕಟ್ಟಿ ಶ್ರೀಗಳು, ಟಿ.ಎನ್​.ಭೀಮುನಾಯಕ, ಡಾ.ನಿವೇದಿತಾ ಭಾವಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಪಿ ವೃಥ್ವಿಕ್​ ಶಂಕರ್​ ಕವಿಮಾತು
  • ಕರವೇಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಯಾದಗಿರಿ : ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಕಾರಣ ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ಹರಿಸುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪೃಥ್ವಿಕ್​ ಶಂಕರ್​ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಟಕವು ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಆಯೋಜಸಿದ್ದ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ಕಣ್ಣು ಎದುರಿಗೆ ಡಾ.ನಿವೇದಿತಾ ಭಾವಿಮನಿ ಇದ್ದಾರೆ. ಅವರ ಜೀವನದಲ್ಲಿ ಸಮಯ ಹಾಳು ಮಾಡದೇ ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡಿ ಈಗ ಯುಪಿಎಸ್​ಪಿ ಪಾಸು ಮಾಡಿದ್ದಾರೆ. ಅವರೇ ನಿಮಗೆ ಪ್ರೇರಣೆ ಎಂದು ಮಕ್ಕಳನ್ನು ಪ್ರೇರೆಸಿದರು.
ಯುಪಿಎಸ್​ಸಿ ಸಾಧಕಿ ಡಾ.ನಿವೇದಿತಾ ಭಾವಿಮನಿ ಮಾತನಾಡಿ, ಜೀವನದಲ್ಲಿ ಸಾಧನೆಗೆ ಶಿಕ್ಷಣ ಒಂದೇ ಮೈಲುಗಲ್ಲು. ಕಾರಣ, ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡಿದರೆ ನಿಗದಿತ ಗುರಿ ತಾನಾಗಿಯೇ ಮುಟ್ಟಲೇರಲು ಸಾಧ್ಯ ಎಂದರು.
ಶಿಕ್ಷಣ ಒಂದಿದ್ದರೇ ಜೀವನದಲ್ಲಿ ಎಷ್ಟೇ ಕಠಿಣ ಸವಾಲುಗಳು ಎದುರಾದರೂ ನಿಭಾಯಿಸುವ ಶಕ್ತಿ ಬರುತ್ತದೆ. ತಾವು ಪಟ್ಟ ಕಠಿಣ ಶ್ರಮದ ಬಗ್ಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್​.ಭೀಮುನಾಯಕ ಮಾತನಾಡಿ, ಪ್ರತಿ ವರ್ಷವೂ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆ ಸಮಾಜಕ್ಕೆ ಪರಿಚಯಿಸುವ ಕೆಲಸ ಸಂಟನೆ ಮಾಡುತ್ತದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹಲಕಟ್ಟಿಯ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಮುನಿಂದ್ರ ಶಿವಾಚಾರ್ಯ ಸ್ವಾಮಿಗಳು, ಕಳೆದ ಹಲವಾರು ವರ್ಷಗಳಿಂದ ಕನ್ನಡದ ಬಗ್ಗೆ ನಿರಂತರವಾಗಿ ಹೋರಾಟ ಮಾಡುವ ಮೂಲಕ ನ್ಯಾಯ ದೊರಕಿಸಿಕೊಟ್ಟ ಜಿಲ್ಲಾ ಕರವೇ ಸಂಟನೆ, ಇಂದು ಇಂತಹ ವಿನೂತನ ಮತ್ತು ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದರು.
ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ವಕೀಲರ ಸಂದ ಅಧ್ಯಕ್ಷ ರವೀಂದ್ರ ಪಾಟೀಲ್​, ಅಗ್ರಣೆಯ ಬ್ಯಾಂಕಿನ ವ್ಯವಸ್ಥಾಪಕ ಸುನೀಲ್​ ಬತ್ನಿ, ಗುತ್ತೀಗೆದಾರ ಮೋಹನ ರಾಠೋಡ್​, ಉದ್ಯಮಿ ಜೀತೇಶ ಮೋರ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ವೇಳೆ 35 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರವೇ ಸಂಟನೆಯ ಮಲ್ಲು ಮಾಳಿಕೇರಿ, ಅಂಬರೇಶ ಹತ್ತಿಮನಿ, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಮನಿ, ವಿಶ್ವರಾಜ ಪಾಟೀಲ್​ ಹೊನಗೇರಾ, ಪ್ರಕಾಶ ಪಾಟೀಲ್​ ಜೈಗ್ರಾಮ, ಅಬ್ದುಲ್​ ಚಿಗಾನೂರ, ವೆಂಕಟೇಶ ನಾಯಕ ಬೈರಿಮಡ್ಡಿ, ಶರಣಬಸಪ್ಪ ಎಲ್ಹೇರಿ, ಚನ್ನಬಸಪ್ಪ ತಳವಾರ, ಅಂಬರೀಶ ಕಟ್ಟಿಮನಿ, ದೀಲಿಪಕುಮಾರ ಸೈದಾಪುರ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net