ಕಲ್ಯಾಣ ಬರಪೀಡಿತ ಪ್ರದೇಶವೆಂದು ಘೋಷಿಸಿ

 ಕಲ್ಯಾಣ ಕರ್ನಾಟಕ ಭಾಗವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಚಿಂಚೋಳಿ ಪ್ರಜಾಸೌಧ ಎದುರು ವೀರ ಕನ್ನಡಿಗರ ಸೇನೆ ತಾಲೂಕು ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಲಾಯಿತು. ವಿಠ್ಠಲ ಕುಸಾಳೆ, ಮಹೇಶ ಭೂತಾಳಿ, ಶರಣಪ್ಪ ಶಿರೋಳ್ಳಿ, ರತನಕುಮಾರ, ವಿನೋದ ಯಲ್ಮಡಗಿ ಇತರರಿದ್ದರು.
ಕಲ್ಯಾಣ ಕರ್ನಾಟಕ ಭಾಗವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಚಿಂಚೋಳಿ ಪ್ರಜಾಸೌಧ ಎದುರು ವೀರ ಕನ್ನಡಿಗರ ಸೇನೆ ತಾಲೂಕು ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಲಾಯಿತು. ವಿಠ್ಠಲ ಕುಸಾಳೆ, ಮಹೇಶ ಭೂತಾಳಿ, ಶರಣಪ್ಪ ಶಿರೋಳ್ಳಿ, ರತನಕುಮಾರ, ವಿನೋದ ಯಲ್ಮಡಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿಂಚೋಳಿಯಲ್ಲಿ ವೀರ ಕನ್ನಡಿಗರ ಸೇನೆಯಿಂದ ಪ್ರತಿಭಟನೆ
  • ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಚಿಂಚೋಳಿ: ಕಲ್ಯಾಣ ಪ್ರದೇಶದಲ್ಲಿ ಮುಂಗಾರು ಮಳೆ ಕೈಗೊಟ್ಟಿದ್ದು, ಬೆಳೆಗಳು ಸಂಪೂರ್ಣ ನಾಶವಾಗಿವೆ. ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಅನ್ನದಾತರ ನೋವಿಗೆ ಸ್ಪಂದಿಸಬೇಕು ಎಂದು ವೀರ ಕನ್ನಡಿಗರ ಸೇನೆ ಅಧ್ಯಕ್ಷ ಗೋಪಾಲ ಇಡುಗೊಟ್ಟಿ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ತಹಸಿಲ್​ ಕಚೇರಿ ಎದುರು ವೀರ ಕನ್ನಡಿಗರ ಸೇನೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ತಣವೇ ಬರಪೀಡಿತವೆಂದು ಘೋಷಿಸಿ ಜನ-ಜಾನವಾರುಗಳ ಸಂರಕ್ಷಣೆಗೆ ಮುಂದಾಗಬೇಕು. ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು. ಬೆಳೆ ಕಳೆದುಕೊಂಡ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಬೆಳೆ ಸಾಲ ಮತ್ತು ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕುಡಿವ ನೀರು, ಮೇವಿನ ವ್ಯವಸ್ಥೆ ಮಾಡಬೇಕು. ವಿಬಿ-ಜಿ ರಾಮ್​ ಜಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ 150 ದಿನಗಳ ಕಾಲ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ತಹಸಿಲ್​ ಕಚೇರಿ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ವಿಠ್ಠಲ ಕುಸಾಳೆ, ಮಹೇಶ ಭೂತಾಳಿ, ಶರಣಪ್ಪ ಶಿರೋಳ್ಳಿ, ರತನಕುಮಾರ, ವಿನೋದ ಯಲ್ಮಡಗಿ, ವಿಜಯ ಎಂಪಳ್ಳಿ, ಲಾಡ್ಲೆಸಾಬ್​ ಸುಲೇಪೇಟ, ಪಾಂಡುರಂಗ ಲೋಡ್ಡನೂರ, ಸುಮಂತ ಮೇತ್ರಿ, ಶಿವಕುಮಾರ ಶೇರಿಕಾರ, ವಿಜಯಕುಮಾರ ಗುತ್ತೇದಾರ್​, ಗುರುಶಾಂತ, ಸುರೇಶ ತಳವಾರ, ನಾಗಪ್ಪ ಚೌದರಿ, ಮಡೆಪ್ಪ ಗಂಗನಪಳ್ಳಿ, ದಯಾಸಾಗರ ಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net