ಬರಪೀಡಿತ ಘೋಷಿಸಿ, ಸೂಕ್ತ ಪರಿಹಾರ ನೀಡಿ

ಕಲಬುರಗಿ ಬರ ಪೀಡಿತ ಪ್ರದೇಶ ಘೋಷಿಸುವಂತೆ ಆಗ್ರಹಿಸಿ ಚಿಂಚೋಳಿಯಲ್ಲಿ ವಿವಿಧ ಸಂಟನೆಗಳಿಂದ ಪ್ರತಿಭಟನೆ ನಡೆಸಿ ಗ್ರೇಡ್​&2 ತಹಸೀಲ್ದಾರ್​ ವೆಂಕಟೇಶ ದುಗ್ಗನ್​ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಶರಣಬಸಪ್ಪ ಮಮಶೆಟ್ಟಿ, ಕಾಶಿನಾಧ ಶಿಂಧೆ, ರವಿಶಂಕರ ರೆಡ್ಡಿ, ವೀರಣ್ಣ ಗಂಗಣ್ಣಿ, ವಿಠ್ಠಲ ಕುಸಾಳೆ, ಮಾರುತಿ ಗಂಜಗೇರಿ ಇತರರಿದ್ದರು. === ಜೆಡಿಎಸ್​ ತಾಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಆಕ್ರೋಶ > ಚಿಂಚೋಳಿಯಲ್ಲಿ ವಿವಿಧ ಸಂಘಟನೆಗಳಿಂದ ಹೋರಾಟ ಬರಪೀಡಿತ ಘೋಷಿಸಿ, ಸೂಕ್ತ ಪರಿಹಾರ ನೀಡಿ ವಿಜಯವಾಣಿ ಸುದ್ದಿಜಾಲ ಚಿಂಚೋಳಿ ಮುಂಗಾರು ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಬರ ೂಷಣೆ ಮಾಡಿ ಪರಿಹಾರ ವಿತರಣೆಗೆ ಮುಂದಾಗಬೇಕು ಎಂದು ಜೆಡಿಎಸ್​ ತಾಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಆಗ್ರಹಿಸಿದರು.

Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್​ ತಾಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಆಕ್ರೋಶ
  • ಚಿಂಚೋಳಿಯಲ್ಲಿ ವಿವಿಧ ಸಂಘಟನೆಗಳಿಂದ ಹೋರಾಟ
ಚಿಂಚೋಳಿ: ಮುಂಗಾರು ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಬರ ಘೋಷಣೆ ಮಾಡಿ ಪರಿಹಾರ ವಿತರಣೆಗೆ ಮುಂದಾಗಬೇಕು ಎಂದು ಜೆಡಿಎಸ್​ ತಾಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಆಗ್ರಹಿಸಿದರು.
ಬರಪೀಡಿತ ಜಿಲ್ಲೆ ಘೋಷಣೆ ಮಾಡಬೇಕು ಹಾಗೂ ಬರ ಕಾಮಗಾರಿ ಆರಂಭಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು, ದಲಿತ, ಕನ್ನಡಪರ ಸೇರಿ ವಿವಿಧ ಸಂಘಟನೆಗಳಿಂದ ಬಸವೇಶ್ವರ ವೃತ್ತದಲ್ಲಿ ಕುರಿಗಳೊಂದಿಗೆ ಸಂಚಾರ ತಡೆದು ಬುಧವಾರ ಹಮ್ಮಿಕೊಂಡಿದ್ದ ಬೃಹತ್​ ಹೋರಾಟದಲ್ಲಿ ಮಾತನಾಡಿ, ಸರ್ಕಾರ ರೈತರ ನೇರವಿಗೆ ಬರಬೇಕು. ನಿರ್ಲಕ್ಷ್ಯ ವಹಿಸಿದರೆ ನಿರಂತರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡ ವೀರಣ್ಣ ಗಂಗಣ್ಣಿ, ಜಾಫರಖಾನ್​ ಮಿರಿಯಾಣ, ಶರಣಬಸಪ್ಪ ಮಮ್ಮಶೆಟ್ಟಿ, ಮಾರುತಿ ಗಂಜಗೇರಿ, ಕೆ.ಎಂ.ಬಾರಿ, ಕಾಶಿನಾಥ ಶಿಂಧೆ, ಹಣಮಂತ ಪೂಜಾರಿ, ಗೋಪಾಲ ರಾಂಪುರೆ ಮಾತನಾಡಿದರು.
ಗ್ರೇಡ್​ 2 ತಹಸೀಲ್ದಾರ್​ ವೆಂಕಟೇಶ ದುಗ್ಗನ್​ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ವೈಜನಾಥ ಸಾತಪನೂರ, ಸಾಗರ ಚಿಂಚೋಳಿ, ವಾಮನರಾವ ಕೊರವಿ, ನಾಗಪ್ಪ ಪೂಜಾರಿ, ಸಿದ್ದಲಿಂಗಯ್ಯ ಸ್ವಾಮಿ, ನಾಗಯ್ಯ ಸ್ವಾಮಿ, ವಿಠ್ಠಲ ಕುಸಾಳೆ, ಗೋಪಾಲ ಪೋಲಕಪಳ್ಳಿ, ಮೋಹನ ಐನಾಪುರ, ಕುಮಾರ ಪೋಲಕಪಳ್ಳಿ, ಶಬ್ಬೀರ್​ ತೇಗಲತಿಪ್ಪಿ, ಮೌನೇಶ ಗಾರಂಪಳ್ಳಿ ಇತರರಿದ್ದರು.
ರಸ್ತೆಯಲ್ಲಿ ಕುರಿ, ಮೇಕೆ
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಕುರಿ, ಮೇಕೆಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ರಸ್ತೆಯಲ್ಲಿ ಸಂಚಾರ ತಡೆದು ಸರ್ಕಾರದ ವಿರುದ್ಧ ೂಷನೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ಕಲಬುರಗಿ, ತಾಂಡೂರ, ಕುಂಚಾವರಂ ಮಧ್ಯೆ ಸಂಚಾರಕ್ಕೆ ಸಮಸ್ಯೆ ಆಯಿತು. ಪಿಐ ಗಂಗಮ್ಮ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್​ ಮಾಡಲಾಗಿತ್ತು.
ಬೇಡಿಕೆಗಳೇನು ?
ರೈತರ ಗುಳೆ ತಪ್ಪಿಸಲು ಬರ ಪಿರಿಹಾರ ಕಾಮಗಾರಿ ಪ್ರಾರಂಭಿಸಬೇಕು. ಸಾಲ ಮರುಪಾವತಿಗೆ ಕಾಲಾವಕಾಶ ನೀಡುವುದರ ಜತೆಗೆ ಬಡ್ಡಿ ಮನ್ನಾ ಮಾಡಬೇಕು. ಕಬ್ಬು ಬೆಳಗಾರರಿಗೆ ಅನುಕೂಲವಾಗಲು ಭೀಮಾ ನದಿಗೆ ಉಜನಿ ಡ್ಯಾಮ್​ನಿಂದ 15 ಟಿಎಂಸಿ ನೀರು ಹರಿಸಬೇಕು. ತಾಲೂಕಿನಲ್ಲಿ ಗೋಶಾಲೆ ತೆರೆಯಬೇಕು. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳ ವಿರುದ್ಧ ಕ್ರಮ ಆಗಬೇಕು. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net