ಸಾಲಬಾಧೆಗೆ ರೈತ ಆತ್ಮಹತ್ಯೆ

ಅಶೋಕ ಹೊರಟ್ಟಿ
ಅಶೋಕ ಹೊರಟ್ಟಿ
Published on
ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ರೈತ ಅಶೋಕ ಬಸಗೌಡ ಹೊರಟ್ಟಿ (46) ಸಾಲಬಾಧೆ ತಾಳದೆ ಶನಿವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 3.24 ಎಕರೆ ಜಮೀನು ಹೊಂದಿದ್ದು, ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಕೆನರಾ ಬ್ಯಾಂಕ್​ ಹಾಗೂ ಶೇಗುಣಸಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರ ಸಂದಲ್ಲಿ ತಂದೆ, ಪತ್ನಿ ಹಾಗೂ ತನ್ನ ಹೆಸರಲ್ಲಿ 40 ಲಕ್ಷ ರೂ. ಸಾಲ ಮಾಡಿದ್ದರು. ಬೆಳೆಗಳು ಕೈಕೊಟ್ಟಿದ್ದರಿಂದ ಸಾಲದ ಹೊರೆ ತಾಳದೆ ಮನೆಯ ಹಿಂದಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಕರಣದ ದಾಖಲಿಸಿಕೊಂಡಿರುವ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net