28 ಕೃಷ್ಣಮೃಗಗಳ ದಾರುಣ ಸಾವು! ಇಂದು ಮತ್ತೊಂದು ಮೃತ, ಸಾವಿನ ಸಂಖ್ಯೆ 29ಕ್ಕೆ ಏರಿಕೆ

ಕೃಷ್ಣಮೃಗಗಳ ಸಾವು
ಕೃಷ್ಣಮೃಗಗಳ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಸಾವು
  • ಇಂದು ಮತ್ತೊಂದು ಮೃತ, ಸಾವಿನ ಸಂಖ್ಯೆ 29ಕ್ಕೆ ಏರಿಕೆ
  • ಮಂಗಳವಾರ ವರದಿ ಕೈಸೇರಲಿದೆ
ಬೆಳಗಾವಿ: ಮಾರಣಾಂತಿಕ ಕಾಯಿಲೆಗೆ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳು ದಾರುಣ ಸಾವನ್ನಪ್ಪಿತು. ಇಂದು ಮತ್ತೊಂದು ಮೃತಪಟ್ಟಿದ್ದು, ಇದೀಗ ಸಾವಿನ ಸಂಖ್ಯೆ 29ಕ್ಕೆ ಏರಿದೆ.
ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ನವೆಂಬರ್ 13ರಂದು ಮೊದಲು 8 ಕೃಷ್ಣಮೃಗಗಳು ಸಾವಿಗೀಡಾಯಿತು. ನಂತರದಲ್ಲಿ, ನ.15ರಂದು 20 ಕೃಷ್ಣಮೃಗಗಳು ದಾರುಣ ಅಂತ್ಯ ಕಂಡಿತು. ಆರಂಭದಲ್ಲಿ ಸಾವನ್ನಪ್ಪಿದ್ದ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿ, ಎಲ್ಲಾ ಸ್ಯಾಂಪಲ್ ಅನ್ನು ಮೈಸೂರಿನ ಲ್ಯಾಬ್​ಗೆ ರವಾನಿಸಲಾಯಿತು.
ಕೃಷ್ಣಮೃಗಗಳು ಮಾರಣಾಂತಿಕ ಬ್ಯಾಕ್ಟಿರಿಯಾದಿಂದ ಮೃತಪಟ್ಟಿವೆ ಎಂದು ವೈದ್ಯರು ಶಂಕಿಸಿದ್ದಾಗಿ ತಿಳಿಸಲಾಗಿದೆ. ಮೃಗಾಲಯದಲ್ಲಿ ‌ಒಟ್ಟು 38 ಕೃಷ್ಣಮೃಗಗಳಿವೆ. ಇವುಗಳಲ್ಲಿ ಇಲ್ಲಿಯವರೆಗೆ 29 ಸಾವಿಗೀಡಾಗಿವೆ. ಸ್ಥಳಕ್ಕೆ ಬೆಳಗಾವಿ ಎಸಿಎಫ್ ನಾಗರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಲ್ಯಾಬ್​ ವರದಿ ಕೈಸೇರಲಿದ್ದು, ಕೃಷ್ಣಮೃಗಗಳ ಸರಣಿ ಸಾವಿನ ಹಿಂದಿರುವ ಕಾರಣವೇನು ಎಂಬುದು ಸ್ಪಷ್ಟವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net