14,000 ಕೋಟಿ ರೂ. ವಿಶ್ವ ಬ್ಯಾಂಕ್​ ದುಡ್ಡು ಬಳಕೆ! NDA ವಿರುದ್ಧ ಪ್ರಶಾಂತ್ ಕಿಶೋರ್​ ಪಕ್ಷ ಗಂಭೀರ ಆರೋಪ

ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
Published on

ಪ್ರಮುಖ ಮುಖ್ಯಾಂಶಗಳು

  • ಎನ್​ಡಿಎ ಪಕ್ಷಕ್ಕೆ ಒಲಿದ ಬಿ'ಹಾರ'
  • 14,000 ಕೋಟಿ ರೂ. ವಿಶ್ವಬ್ಯಾಂಕ್ ಹಣ
  • ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10,000 ರೂ.
Bihar: ಅತ್ಯಂತ ಕುತೂಹಲಕಾರಿ ಆಗಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಎನ್​ಡಿಎ ಮೈತ್ರಿಕೂಟ ಭರ್ಜರಿ ಗೆಲುವನ್ನು ಸಾಧಿಸಿತು. ಈ ಮೂಲಕ ಎನ್​ಡಿಎ ಮತ್ತೊಮ್ಮೆ ಬಿಹಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ನಿರ್ಗಮನ ಸಮೀಕ್ಷೆಯ ಭವಿಷ್ಯವಾಣಿಗಳಂತೆ, ಬಿಹಾರದ ಮತದಾರರು ನಿತೀಶ್ ಕುಮಾರ್ ಅವರಿಗೆ ಮಗದೊಮ್ಮೆ ಕಿರೀಟಧಾರಣೆ ಮಾಡಿದ್ದು ಎನ್​ಡಿಎ ಪಕ್ಷಕ್ಕೆ ದೊಡ್ಡ ಪುಷ್ಠಿ ನೀಡಿತು.

14,000 ಕೋಟಿ ರೂ. ವಿಶ್ವಬ್ಯಾಂಕ್ ಹಣ

ಬಿಹಾರ ಚುನಾವಣೆಯಲ್ಲಿ ಕಿಂಗ್‌ಮೇಕರ್ ಆಗುವ ನಿರೀಕ್ಷೆಯಲ್ಲಿದ್ದ ಜನ್ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೀನಾಯವಾಗಿ ಸೋಲುಂಡರು. ಅಸಲಿಗೆ, ರಾಜ್ಯದಲ್ಲಿ ಒಂದೇ ಒಂದು ಸ್ಥಾನ ಕೂಡ ಈ ಪಾರ್ಟಿ ಗೆಲ್ಲಲಿಲ್ಲ. ಆರ್‌ಜೆಡಿಯಂತೆಯೇ, ಪ್ರಶಾಂತ್ ಕಿಶೋರ್ (ಪಿಕೆ) ಎನ್‌ಡಿಎ ಸುನಾಮಿಯಲ್ಲಿ ಕೊಚ್ಚಿಹೋಗಿದ್ದು ದುರಾದೃಷ್ಟಕರ. ಆದಾಗ್ಯೂ, ಸೋಲಿಗೆ ಮೊದಲು ಪ್ರತಿಕ್ರಿಯಿಸಿದ ಪ್ರಶಾಂತ್​ ಪಕ್ಷವು, ಎನ್‌ಡಿಎ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. 2025ರ ವಿಧಾನಸಭಾ ಚುನಾವಣೆಗೆ ಸಿಎಂ ನಿತೀಶ್ ಕುಮಾರ್ ಸರ್ಕಾರವು 14,000 ಕೋಟಿ ರೂ. ವಿಶ್ವಬ್ಯಾಂಕ್ ನಿಧಿಯನ್ನು ಬೇರೆಡೆಗೆ ತಿರುಗಿಸಿದೆ ಎಂದಿದೆ.

ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 10,000 ರೂ.

ಚುನಾವಣಾ ಫಲಿತಾಂಶಗಳ ಬಳಿಕ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್ ಮಾತನಾಡಿ, "ಜೂನ್‌ನಿಂದ ಚುನಾವಣೆ ಘೋಷಣೆಯಾಗುವವರೆಗೆ, ನಿತೀಶ್ ಕುಮಾರ್ ಸರ್ಕಾರವು ಜನರ ಹಣದಿಂದಲೇ ಮತಗಳನ್ನು ಖರೀದಿಸಲು 40,000 ಕೋಟಿ ರೂ. ಖರ್ಚು ಮಾಡಿದೆ" ಎಂದು ಆರೋಪಿಸಿದ್ದಾರೆ.
"ವಿಶ್ವಬ್ಯಾಂಕ್‌ನಿಂದ ಪಡೆದ ಸಾಲದಲ್ಲಿ 14,000 ಕೋಟಿ ರೂ.ಗಳನ್ನು ಉಚಿತ ಕೊಡುಗೆಗಳಿಗಾಗಿ ಬಳಸಲಾಗಿದೆ. 'ಸಿಎಂ ಮಹಿಳಾ ರೋಜ್‌ಗಾರ್ ಯೋಜನೆ' ಅಡಿಯಲ್ಲಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ಘೋಷಿಸಿದ್ದಾರೆ. ಮಹಿಳಾ ಮತದಾರರು ಈ ಹಣದಿಂದ ಆಕರ್ಷಿತರಾಗಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ ಮೈತ್ರಿಕೂಟ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ" ಎಂದಿದ್ದಾರೆ.

ಚುನಾವಣೆ ಫಲಿತಾಂಶ

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ-ಜೆಡಿಯು ಎನ್‌ಡಿಎ ಮೈತ್ರಿಕೂಟವು ಭರ್ಜರಿ ಜಯ ಸಾಧಿಸಿತು. 243 ಸ್ಥಾನಗಳ ವಿಧಾನಸಭೆಯಲ್ಲಿ 202 ಸ್ಥಾನಗಳನ್ನು ಗೆದ್ದು ಬೀಗಿತು. ಇವುಗಳಲ್ಲಿ, ಬಿಜೆಪಿ 89, ಜೆಡಿಯು 85, ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ 19 ಮತ್ತು ಇತರ ಪಕ್ಷಗಳು ಉಳಿದ ಸ್ಥಾನಗಳನ್ನು ಗೆದ್ದವು. ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಹಾಮೈತ್ರಿಕೂಟವು ಕೇವಲ 35 ಸ್ಥಾನಗಳಿಗೆ ಮಾತ್ರ ಸೀಮಿತವಾಯಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net