ಡಿಸಿಇಟಿ: ಅರ್ಜಿ ತಿದ್ದುಪಡಿಗೆ ಮೇ 20ರವರೆಗೆ ಅವಕಾಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Published on

ಪ್ರಮುಖ ಮುಖ್ಯಾಂಶಗಳು

  • ಅಭ್ಯರ್ಥಿಗಳು ಮೇ 5ರಿಂದ 20ರವರೆಗೆ ಲಾಗಿನ್ ಆಗಿ ತಮ್ಮಅರ್ಜಿಯಲ್ಲಿ ಏನಾದರೂ ಬದಲಾವಣೆ ಅಗತ್ಯ ಇದ್ದರೆ ಮಾಡಿಕೊಳ್ಳಬಹುದು
  • ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಒಳ ಮೀಸಲಾತಿಗೆ ತಿದ್ದುಪಡಿ ಮೂಲಕ ಹೊಸದಾಗಿ ಆರ್‌ಡಿ ಸಂಖ್ಯೆ ನಮೂದಿಸಬೇಕು.
  • ಪ್ರವರ್ಗ-ಎ, ಬಿ ಮತ್ತು ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಮೇ 22ರವರೆಗೂ ಅವಕಾಶ ನೀಡಲಾಗಿದೆ
ಬೆಂಗಳೂರು: ಲ್ಯಾಟರಲ್ ಎಂಟ್ರಿ ಮೂಲಕ ಇಂಜಿನಿಯರಿಂಗ್ 2ನೇ ವರ್ಷ ಅಥವಾ 3ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯಲು ಡಿಸಿಇಟಿಗೆ ಅರ್ಜಿ ಸಲ್ಲಿಸಿರುವ ಡಿಪ್ಲೊಮಾ ಅಭ್ಯರ್ಥಿಗಳು, ಮೀಸಲಾತಿ ಸೇರಿ ಅರ್ಜಿಗಳಲ್ಲಿನ ಲೋಪದೋಷಗಳ ತಿದ್ದುಪಡಿಗೆ ಮೇ 20ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಅಭ್ಯರ್ಥಿಗಳು ಮೇ 5ರಿಂದ 20ರವರೆಗೆ ಲಾಗಿನ್ ಆಗಿ ತಮ್ಮಅರ್ಜಿಯಲ್ಲಿ ಏನಾದರೂ ಬದಲಾವಣೆ ಅಗತ್ಯ ಇದ್ದರೆ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ರಕ್ಷಣೆ, ಮಾಜಿ ಸೈನಿಕ, ಸಿಆರ್‌ಪಿಎ್ ಸೇರಿ ಇತರ ವಿಶೇಷ ಕ್ಯಾಟಗರಿಗಳಲ್ಲಿ ಅರ್ಹತೆ ಇದ್ದು ಕ್ಲೇಮ್ ಮಾಡಿರುವ ಬಗ್ಗೆ ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬಹುದು. ಕ್ಲೇಮ್ ಮಾಡಿದ್ದಲ್ಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದು. ಮೀಸಲಾತಿ ಸಂಬಂಧದ ಆರ್‌ಡಿ ಸಂಖ್ಯೆ ನಮೂದಿಸುವುದನ್ನು ಕೂಡ ಖಚಿತಪಡಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.

ಒಳಮೀಸಲಾತಿ ಆರ್‌ಡಿ ಸಂಖ್ಯೆ ನಮೂದಿಸಿ

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಕೆಲವರು ಒಳ ಮೀಸಲಾತಿ ಪ್ರಕಾರ ಪ್ರಮಾಣ ಪತ್ರ ಸಲ್ಲಿಸದೆ, ಹಳೇ ಆರ್‌ಡಿ ಸಂಖ್ಯೆಯನ್ನೇ ಅರ್ಜಿಯಲ್ಲಿ ದಾಖಲಿಸುತ್ತಿದ್ದು, ಅಂತಹವರು ತಿದ್ದುಪಡಿ ಮೂಲಕ ಹೊಸದಾಗಿ ಆರ್‌ಡಿ ಸಂಖ್ಯೆ ನಮೂದಿಸಬೇಕು. ಪ್ರವರ್ಗ-ಎ, ಬಿ ಮತ್ತು ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಮೇ 22ರವರೆಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net