ರೈತರ ಸಂಕಷ್ಟ ಆಲಿಸಿದ ಡಿಸಿ

ಕಟ್ಟಿಸಂಗಾವಿ ಜಮೀನುಗಳಿಗೆ ಜಿಲ್ಲಾಧಿಕಾರಿ ಇಕ್ರಮ್​ ಷರೀಫ್​ ಮಂಗಳವಾರ ಭೇಟಿ ನೀಡಿ ಬರ ಸ್ಥಿತಿ ವೀಕ್ಷಿಸಿದರು. ತಹಸೀಲ್ದಾರ್​ ಅಂಜುಂ ತಬಸ್ಸುಮ್​, ಕೃಷಿ ಅಧಿಕಾರಿ ಚಂದ್ರಶೇಖರ ಜಿವಣಗಿ ಇದ್ದರು.
ಕಟ್ಟಿಸಂಗಾವಿ ಜಮೀನುಗಳಿಗೆ ಜಿಲ್ಲಾಧಿಕಾರಿ ಇಕ್ರಮ್​ ಷರೀಫ್​ ಮಂಗಳವಾರ ಭೇಟಿ ನೀಡಿ ಬರ ಸ್ಥಿತಿ ವೀಕ್ಷಿಸಿದರು. ತಹಸೀಲ್ದಾರ್​ ಅಂಜುಂ ತಬಸ್ಸುಮ್​, ಕೃಷಿ ಅಧಿಕಾರಿ ಚಂದ್ರಶೇಖರ ಜಿವಣಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೇವರ್ಗಿ ತಾಲೂಕಿನಲ್ಲಿ ವಿವಿಧೆಡೆ ಭೇಟಿ ನೀಡಿದ ಇಕ್ರಮ್​ ಷರೀಫ್​
ಜೇವರ್ಗಿ: ಮಳೆ ಅಭಾವದಿಂದ ಬಿತ್ತಿದ ಬೆಳೆ, ಹಾಕಿದ ಗೊಬ್ಬರ ಮಣ್ಣು ಪಾಲಾಗಿ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಹಾನಿಗೊಳಗಾದ ರೈತರ ಜಮೀನುಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಇಕ್ರಮ್​ ಷರೀಫ್​ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದರು.
ಕಟ್ಟಿಸಂಗಾವಿ ಗ್ರಾಮದಲ್ಲಿ ಜಮೀನುಗಳಿಗೆ ತೆರಳಿ ರೈತರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಬೆಳೆ ನಷ್ಟದ ಬಗ್ಗೆ ಪ್ರತಿಯೊಬ್ಬ ರೈತರ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಬಳಿಕ ತಹಸಿಲ್​ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್​ಐಆರ್​) ಫಾಮ್​ರ್ ತುಂಬುವಾಗ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವುದರ ಜತೆ ಎಸ್​ಐಆರ್​ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ತಾಲೂಕು ಕ್ರೀಡಾಂಗಣ ಹಾಗೂ ಒಳ ಕ್ರೀಡಾಂಗಣ ವೀಕ್ಷಿಸಿ ಸ್ಥಳದಲ್ಲಿದ್ದ ಲ್ಯಾಂಡ್​ ಆರ್ಮಿ ಇಲಾಖೆ ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ತಾಕೀತು ಮಾಡಿದ ಅವರು, ಹರವಾಳದಲ್ಲಿ ನಡೆದಿರುವ ಬ್ರಿಡ್ಜ್​ ಕಂ ಬ್ಯಾರೇಜ್​ ಕಾಮಗಾರಿ ಹಾಗೂ ಪಟ್ಟಣದ ಓಂನಗರ ಬಡಾವಣೆಯಲ್ಲಿ ನಡೆದಿರುವ ಸಿಸಿ ರಸ್ತೆ ಕಾಮಗಾರಿ ವೀಸಿ ಗುತ್ತಿಗೇದಾರರು, ಅಧಿಕಾರಿಗಳು ಗುಣಮಟ್ಟಕ್ಕೆ ಮಹತ್ವ ನೀಡಬೇಕು. ಕಳಪೆ ಕಾಮಗಾರಿ ನಡೆಸಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ತಹಸೀಲ್ದಾರ್​ ಅಂಜುಂ ತಬಸ್ಸುಮ್​, ಯಡ್ರಾಮಿ ತಹಸೀಲ್ದಾರ್​ ಯಲ್ಲಪ್ಪ ಸುಬೇದಾರ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net