ದರ್ಗಾ 799ನೇ ಉರುಸ್​ 9ರಿಂದ

ಚಿತ್ತಾಪುರದ ಹಜರತ್​ ಚಿತ್ತಾಷಹಾವಲಿ ದರ್ಗಾ
ಚಿತ್ತಾಪುರದ ಹಜರತ್​ ಚಿತ್ತಾಷಹಾವಲಿ ದರ್ಗಾ
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ತಾಪುರ ಹಜರತ್​ ಚಿತ್ತಾಷಹಾವಲಿ
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಹಿಂದೂ ಮುಸ್ಲಿಂ ಭಾವೈಕ್ಯದ ಸೂಫಿ ಸಂತ ಹಜರತ್​ ಚಿತ್ತಾಷಹಾವಲಿ ದರ್ಗಾದ 799ನೇ ಜಾತ್ರಾ ಮಹೋತ್ಸವ (ಉರುಸ್​) ಮೇ 9ರಂದು ಪ್ರಾರಂಭವಾಗಲಿದೆ ಎಂದು ದರ್ಗಾದ ಮುತ್ತವಲ್ಲಿ ಸೈಯದ್​ ಮಿನಾಜುದ್ದೀನ್​ ಚಿಸ್ತಿ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 10ಕ್ಕೆ ನಾಗಣ್ಣ ಮಾಸ್ಟರ್​ ಬಳ್ಳಾ ಮನೆಯಲ್ಲಿ ಗಲಾಫ್​ ಫಾತೇಹಾ ಮೂಲಕ ಶುಭಾರಂಭಗೊಳ್ಳಲಿದೆ. ಅಪರಾಹ್ನ ಸೂಫಿ ಸಂತರ ಭಕ್ತರಾದ ಚೂರಿ, ಬಾಬುಳಗಿ, ಪಬ್ಬಣಿ, ವಸದ ಮನೆಯವರಿಂದ ವಿವಿಧ ಧಾನ್ಯಗಳನ್ನು ಜೋಳಿಗೆಯಲ್ಲಿ ತಂದು ಪೂಜೆ ಸಲ್ಲಿಸಿ ಚಿತ್ತಾಷಹಾವಲಿ ಕುಳಿತ ಸ್ಥಳ ಮತ್ತು ಗಲಾಫ್​ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಲ್ದಿ ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 9.30ಕ್ಕೆ ಬಳ್ಳಾ ಮನೆಯಿಂದ ಹೊರಡುವ ಗಲಾಫ್​ ಮೆರವಣಿಗೆ ಮುತ್ತವಲ್ಲಿ ಮತ್ತು ಸಜ್ಜಾದೆ ಸೈಯದ್​ ಮಿನಾಜುದ್ದೀನ್​ ಚಿಸ್ತಿ ಮನೆ ತಲುಪಲಿದೆ. ಅಲ್ಲಿಂದ ರಾತ್ರಿ 10ಕ್ಕೆ ಸಂದಲ್​ ಷರೀಫ್​ ಫಾತೇಹಾ ಮೂಲಕ ಸಂದಲ್​(ಗಂಧ) ಮೆರವಣಿಗೆ ಶುರುವಾಗಲಿದೆ. ಗಲಾಫ್​ ಹೊತ್ತ ಕುದುರೆ, ದರ್ಗಾಕ್ಕೆ ಹೊದಿಸುವ ಚಾಂದನಿ ಹೊತ್ತ ಒಂಟೆಗಳು, ಶಹನಾಯಿ ಮತ್ತು ನಗಾರಿ ವಾದಕರು, ಮೌಲ್ವಿಗಳ ಭಕ್ತಿಗಾಯನ ಯುವಕರ ಸಾಹಸಮಯ ಮಲ್ಲಗಂಬ ಪ್ರದರ್ಶನ ಗಮನ ಸೆಳೆಯಲಿವೆ. ಗಂಧದ ಮೆರವಣಿಗೆ ದರ್ಗಾ ತಲುಪಿದ ಬಳಿಕ ಪೀರ್​ ಖಾದ್ರಿ ಹಾಗೂ ಸೂಫಿ ಸಂತ ಹಜರತ್​ ಚಿತ್ತಾಷಹಾವಲಿ ಸಮಾಧಿಗೆ ಪುಷ್ಪಾರ್ಪಣೆ ಜತೆ ಗಂಧಲೇಪನ ಮತ್ತು ಗಲಾಫ್​ ಹೊದಿಕೆ, ಫಾತೇಹಾ ಅರ್ಪಿಸಲಾಗುತ್ತದೆ.
10ರಂದು ದೀಪೋತ್ಸವ (ಚಿರಾಗ್​), ದರ್ಗಾ ಆವರಣದಲ್ಲಿ ರಾತ್ರಿ ಮಿರಾಮ್​ (ಮಾಡಗಳಲ್ಲಿ) ಸಾವಿರಾರು ದೀಪಗಳು ಪ್ರಜ್ವಲಿಸತ್ತವೆ. 10ಕ್ಕೆ ಖ್ಯಾತ ಕಲಾವಿದರಿಂದ ಖವ್ವಾಲಿ ಮತ್ತು ಗೀಗೀ ಪದಗಳ ಸಂಭ್ರಮ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net