ಸೈಬರ್​ ಕ್ರೈಮ್​: ಗೆಳೆಯನಿಗೆ ಬ್ಯಾಂಕ್ ವಿವರ ನೀಡಿ 7 ಕೋಟಿ ವಂಚನೆಯಲ್ಲಿ ಸಿಲುಕಿದ ಎಂಜಿನಿಯರಿಂಗ್ ವಿದ್ಯಾರ್ಥಿ | Cyber Crime

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮುಂದುವರಿದ ಸೈಬರ್​ ವಂಚನೆ ಪ್ರಕರಣ
  • ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಎಂಜಿನಿಯರಿಂಗ್​ ವಿದ್ಯಾರ್ಥಿ
  • ಉತ್ತರ ವಿಭಾಗ ಸೈಬರ್​ ಪೊಲೀಸರಿಂದ ಮುಂದುವರಿದ ತನಿಖೆ
ಬೆಂಗಳೂರು: ಸಿಲಿಕಾನ್​ ಸಿಟಿ ಎಂಬ ಖ್ಯಾತಿ ಪಾತ್ರವಾಗಿದ್ದ ಬೆಂಗಳೂರು ಈಗ ಸೈಬರ್​ ಅಪರಾಧ (Cyber Crime) ಗಳ ರಾಜಧಾನಿಯಾಗಿ ಕುಖ್ಯಾತಿಯನ್ನು ಗಳಿಸುತ್ತಿದ್ದೆ. ಈದೀಗ ಗೆಳೆಯನಿಗೆ ಸಹಾಯ ಮಾಡಲೆಂದು ಬ್ಯಾಂಕ್​ ವಿವರಗಳನ್ನು ನೀಡಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ ಎಂದು ವರದಿಯಾಗಿದೆ.
ಬೆಂಗಳೂರಿನ ಪ್ರತಿಷ್ಟಿತ ಎಂಜಿನಿಯರಿಂಗ್​ ವಿದ್ಯಾಭ್ಯಾಸ ಮಾಡುತ್ತಿದ್ದ 19 ವರ್ಷದ ಹುಡುಗನೊಬ್ಬ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಸುಮಾರು 7 ಕೋಟಿ ಮೌಲ್ಯದ ಸೈಬರ್​ ಅಪರಾಧ ಪ್ರಕರಣದಲ್ಲಿ ಸಿಲುಕಿ ಕೊಂಡಿರುವ ಬಗ್ಗೆ ವರದಿಯಾಗಿದೆ.
ಬಂಧಿತ ವಿದ್ಯಾರ್ಥಿಯ ಪ್ರಕಾರ ಆತನ ಗೆಳೆಯ ಎಂದು ಹೇಳಲಾಗಿರುವ ಆಯುಷ್​ ಎಂಬ ವಿದ್ಯಾರ್ಥಿ ಕಳೆದ ವರ್ಷ ನವೆಂಬರ್​ನಲ್ಲಿ ತನ್ನ ಬ್ಯಾಂಕ್​ ಖಾತೆ ಬ್ಲಾಕ್​ ಆಗಿದೆ, ಸ್ವಲ್ಪ ದಿನದ ಮಟ್ಟಿಗೆ ನಿನ್ನ ಬ್ಯಾಂಕ್​ ಖಾತೆಯನ್ನು ಬಳಸಿತ್ತೆನೆ ಎಂದು ಹೇಳಿದ್ದಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಈ ವಿದ್ಯಾರ್ಥಿ ತನ್ನ ಬ್ಯಾಂಕ್​ ಖಾತೆ ವಿವರಗಳು, ಎಟಿಎಮ್​ ಕಾರ್ಡ್​, ಸಿಮ್​ ಕಾರ್ಡ್​ ಸಮೇತ ಎಲ್ಲಾ ಪಾಸ್​ವರ್ಡಗಳನ್ನು ವಾಟ್ಸಾಪ್​ ಮೂಲಕ ಹಂಚಿಕೊಂಡಿದ್ದಾನೆ.
ಸ್ವಲ್ಪ ದಿನ ಎಲ್ಲಾ ಚೆನ್ನಾಗಿಯೇ ನಡೆದಿದೆ. ಆದರೆ ಒಂದು ದಿನ ಬ್ಯಾಂಕ್​ ಸಿಬ್ಬಂದಿಯಿಂದ ನಿಮ್ಮ ಬ್ಯಾಂಕ್​ ಅಕೌಂಟ್​ನಿಂದ ಸುಮಾರು 7 ಕೋಟಿ ರೂಪಾಯಿ ವರ್ಗಾವಣೆಯಾಗಿದೆ, ಕೂಡಲೇ ಬ್ಯಾಂಕಿಗೆ ಬನ್ನಿ ಎಂಬ ಸಂದೇಶ ಬಂದಿದೆ. ಈ ಸಂದೇಶವನ್ನು ನೋಡಿ ಗಾಬರಿಗೊಂಡ ವಿದ್ಯಾರ್ಥಿ ತನ್ನ ಸ್ನೇಹಿತ ಆಯುಷ್​ ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅವನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.
ತನ್ನ ಬ್ಯಾಂಕ್​ ಖಾತೆಯನ್ನು ಸೈಬರ್​ ವಂಚನೆಗೆ ಬಳಸಿಕೊಳ್ಳಲಾಗಿದೆ ಎಂದು ತಿಳಿದ ವಿದ್ಯಾರ್ಥಿ ತಕ್ಷಣ ತನ್ನ ಬ್ಯಾಂಕ್​ ಖಾತೆಯನ್ನು ಬ್ಲಾಕ್​ ಮಾಡಿಸಿದ್ದಾನೆ ಮತ್ತು ಪೊಲೀಸರಲ್ಲಿ ಪ್ರಕರಣ ದಾಖಲಿದ್ದಾನೆ. ವಿದ್ಯಾರ್ಥಿಯ ಬ್ಯಾಂಕ್​ ಖಾತೆಯನ್ನು ಬಳಸಿಕೊಂಡು ಸುಮಾರು 7 ಕೋಟಿ ಹಣ ವರ್ಗಾವಣೆಯಾಗಿದೆ, ಆದರೆ ವಂಚನೆಯ ಮೊತ್ತ ಸುಮಾರು 70 ಕೋಟಿ ಇರಬಹುದು ಎಂದು ಉತ್ತರ ಸೈಬರ್​ ಠಾಣಾ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಸೈಬರ್​ ಪೊಲೀಸರು ಆರೋಪಿ ಆಯುಷ್​ ನನ್ನು ಹುಡುಕಲು ಪ್ರಾರಂಭಿಸಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net