ಆರ್ಥಿಕ ದಿವಾಳಿತನದಲ್ಲಿ ಪಾಕಿಸ್ತಾನ:ಬಾಳೆಹಣ್ಣು 450..ಖರ್ಜೂರ 1200; ಹಣ್ಣು ತಿನ್ನೋದು ಬಿಡೋದೇ ಲೇಸೆಂದ ನೆಟ್ಟಿಗರು | Pakistan

ಪಾಕಿಸ್ತಾನದಲ್ಲಿ ಗಗನಕ್ಕೇರಿದ ಹಣ್ಣಿನ ಬೆಲೆ
ಪಾಕಿಸ್ತಾನದಲ್ಲಿ ಗಗನಕ್ಕೇರಿದ ಹಣ್ಣಿನ ಬೆಲೆ
Published on

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ದಿವಾಳಿತನದಲ್ಲಿ ಪಾಕಿಸ್ತಾನ
  • ರಂಜಾನ್​ ಸಂದರ್ಭದಲ್ಲಿ ಗಗನಕ್ಕೇರಿದ ಹಣ್ಣಿನ ದರ
  • ಕೆಜಿ ಬಾಳೆಹಣ್ಣಿಗೆ 450, ಪಪ್ಪಾಯ ಕೆಜಿಗೆ 400 ರೂಪಾಯಿಗೆ ಮಾರಾಟ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್​ ವೈರಲ್​
ಪಾಕಿಸ್ತಾನ: ಪಾಕಿಸ್ತಾನ (Pakistan) ಒಂದು ಬಿಕಾರಿ ಅಥವಾ ಬಿಕ್ಷುಕ ದೇಶ ಎಂದು ಹೊಸದಾಗಿ ಹೇಳ ಬೇಕಿಲ್ಲ. ಅಲ್ಲಿನ ಆರ್ಥಿಕ ಪರಿಸ್ಥಿತಿ ಎಷ್ಟು ಕೆಟ್ಟು ಹೋಗಿದೆ ಎಂದರೆ ಪವಿತ್ರ ರಂಜಾನ್​ನಲ್ಲಿ ಹಣ್ಣನ್ನು ಸಹ ಖರೀದಿ ಮಡಲಾಗದ ಪರಿಸ್ಥಿತಿ ಎದುರಾಗಿದೆ.
ಪಾಕಿಸ್ತಾನ ಘೋಷಿತ ಮುಸ್ಲಿಂ ದೇಶವಾಗಿರುವ ಕಾರಣ ಅಲ್ಲಿ ರಂಜಾನ್​ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಂಜಾನ್​ ಹಬ್ಬದಂದು ಮುಸ್ಲಿಮರು ಬೆಳಿಗ್ಗೆಯಿಂದ ಉಪವಾಸವಿದ್ದು ಸಂಜೆ ಉಪವಾಸವನ್ನು ಮುಗಿಸುತ್ತಾರೆ. ಹೀಗೆ ಈ ಉಪವಾಸವನ್ನು ಸುಮಾರು 29-30 ದಿನಗಳ ಕಾಲ ಮಾಡಲಾಗುತ್ತದೆ.
ಈ ಉಪವಾಸವನ್ನು ಸಂಜೆ ಸಮಾಪ್ತಿ ಮಾಡಬೇಕಾದರೆ, ಮುಸ್ಲಿಮರು ಹೆಚ್ಚಾಗಿ ಹಣ್ಣು ಮತ್ತು ಡ್ರೈ ಪ್ರೂಟ್ಸ್​ಗಳನ್ನು ತಿನ್ನಯತ್ತಾರೆ. ಆದರೆ ಪಾಕಿಸ್ತಾನದಲ್ಲಿ ಮಾರಾಟವಾಗುತ್ತಿರುವ ಹಣ್ಣುಗಳ ಬೆಲೆಯನ್ನು ಕೇಳಿದರೆ ನಿಮ್ಮ ತಲೆ ತಿರುಗೋದು ಗ್ಯಾರಂಟಿ.

ವಿಡಿಯೋ ವೈರಲ್​

ಪಾಕಿಸ್ತಾನದಲ್ಲಿ ರಂಜಾನ್ ಸಂದಂರ್ಭದಲ್ಲಿ ಮಾರುಕಟ್ಟೆಯಲ್ಲಿ ವಾತಾವರಣ ಹೇಗಿದೆ ಎಂದು ಪರೀಕ್ಷಿಸಲು ರಿಜ್ವಾನ್ ಎಂಬ ವ್ಲಾಗರ್​ ಹರಿಬಿಟ್ಟ ವಿಡಿಯೋ ಈದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಫುಲ್​ ವೈರಲ್​ ಆಗುತ್ತಿದೆ.
ಮಾರುಕಟ್ಟೆ ಸುತ್ತಮುತ್ತ ವಿಡಿಯೋ ಮಾಡುತ್ತಾ ರಿಜ್ವಾನ್ ಒಬ್ಬ ಹಣ್ಣಿನ ವ್ಯಾಪಾರಿ ಬಳಿ ಹೋಗಿ ಬಾಳೆಹಣ್ಣು ಕೆಜಿಗೆ ಹೇಗೆ ಎಂದು ಕೇಳುತ್ತಾನೆ. ಅದಕ್ಕೆ ಅಂಗಡಿಯವನು 450 ರೂಪಾಯಿ ಎಂದು ಉತ್ತರಿಸುತ್ತಾನೆ. ಪಪ್ಪಾಯ ಹೇಗೆ ಎಂದು ಕೇಳಿದಾಗ ಕಿಲೋಗೆ 400 ರೂಪಾಯಿ ಎಂದು ಉತ್ತರಿಸಿದ್ದಾನೆ. ಇಷ್ಟು ಬೆಲೆ ಕೊಟ್ಟು ಯಾರು ಖರೀದಿಸುತ್ತಾರೆ ಎಂದು ರಿಜ್ವಾನ್ ಅಂಗಡಿಯವನಿಗೆ ಕೇಳಿದಾಗ, ಈಗ ರಂಜಾನ್​ ಉಪವಾಸ ಇರುವುದರಿಂದ ನಮಗೆ ಸ್ವಲ್ಪ ವ್ಯಾಪಾರವಾಗುತ್ತೆ ಅಂದು ಬೆಲೆಯನ್ನು ಹೆಚ್ಚಿಸಿದ್ದೇವೆ ಎಂದು ಹೇಳಿದ್ದಾನೆ.
ನಂತರ ರಿಜ್ವಾನ್​ ಸೇಬು ಕಿಲೋಗೆ ಎಷ್ಟು ಎಂದಾಗ ಅಂಗಡಿಯವನು ಅದು 500 ಕಿಲೋ ಹಾಗೆ ಮಾರುತ್ತಿದ್ದೇವೆ ಎಂದಿದ್ದಾನೆ. ಹಾಗಾದರೆ ಡ್ರೈ ಪ್ರೂಟ್ಸ್​ಗಳ ಬೆಲೆ ಇನ್ನು ಹೆಚ್ಚಾಗಿರಬೇಕಲ್ವಾ ಎಂದು ರಿಜ್ವಾನ್​ ಕೇಳಿದಾಗ, ಹೌದು ಖರ್ಜೂರವನ್ನು ಕಿಲೋಗೆ 1200 ಕ್ಕೆ ಮಾರಲಾಗುತ್ತಿದೆ ಎಂದು ಹೇಳಿದ್ದಾನೆ.

ಕಮೆಂಟ್ಸ್​ನಲ್ಲಿ ಭಾರತೀಯರದ್ದೇ ಹಾವಳಿ

ಈ ವಿಡಿಯೋ ಈದೀಗ ಎಲ್ಲಾ ಕಡೆ ಸಖತ್​ ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಭಾರತೀಯ ಕಮೆಂಟ್ಸ್​ ಸುರಿಮಳೆಯನ್ನೇ ಹರಿಸಿದ್ದಾರೆ. ಒಬ್ಬ ಬಳಕೆದಾರರು ಪಾಕಿಸ್ತಾನದ ಜನ ಆ ದೇಶದಲ್ಲಿ ಹೇಗೆ ಜೀವಿಸುತ್ತಿದ್ದಾರೆ ಎಂದು ಬರೆದರೆ, ಇನ್ನೊಬ್ಬರು ನಮ್ಮ ದೇಶದಲ್ಲಿ ಪಪ್ಪಾಯ ಕೇವಲ 40 ರೂಪಾಯಿಗೆ ಸಿಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪಾಕಿಸ್ತಾನಿಗಳು ಇನ್ಮುಂದೆ ಹಣ್ಣು ತಿನ್ನುವುದನ್ನು ನಿಲ್ಲಿಸುವುದೇ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net