ವಡಗೇರಾ ಪಟ್ಟಣದ ಎ???ಬಿಐ ಶಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ಯಾಂಕಿನ 71ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಎ???ಬಿಐ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಅಧಿಕಾರಿ ನಾಗರಾಜ್ ಕುಂಚ್ ಮಾತನಾಡಿದರು.ತಹಸೀಲ್ದಾರ್ ಮಂಗಳಾ ಎಂ,ಎ???ಬಿಐ ಅಧಿಕಾರಿಗಳಾದ ಸಂತೋ?್ ಶರ್ಮಾ, ಶಾಖಾ ವ್ಯವಸ್ಥಾಪಕ ಜೈರಾಮ್ ನಾಯ್ಕ, ಕ್ಯಾಶಿಯರ್ ಅನ್ವರ್ ಪಾ?ಾ, ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ವಡಗೇರಾ: ಗ್ರಾಹಕರ ವಿಶ್ವಾಸವೇ ಬ್ಯಾಂಕ್ನ ದೊಡ್ಡ ಶಕ್ತಿಯಾಗಿದೆ ಎಂದು ಎಸ್ಬಿಐ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ಕುಂಚ್ ಹೇಳಿದರು.
ಪಟ್ಟಣದ ಎಸ್ಬಿಐ ಶಾಖೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಬ್ಯಾಂಕ್ನ 71ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು, ಸಣ್ಣ ಉದ್ಯಮಿ ಹಾಗೂ ಸಾರ್ವಜನಿಕರ ವಿಶ್ವಾಸವೇ ಬ್ಯಾಂಕ್ನ ದೊಡ್ಡ ಶಕ್ತಿಯಾಗಿದ್ದು, ಅಲ್ಲದೆ ಗ್ರಾಹಕರು ಮತ್ತು ಬ್ಯಾಂಕ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದರು.
ದೇಶದ ಬ್ಯಾಂಕಿಂಗ್ ೇತ್ರದಲ್ಲಿ ಎಸ್ಬಿಐ ತನ್ನದೇಯಾದ ವಿಶಿಷ್ಟ ಸ್ಥಾನ ಹೊಂದಿದೆ. ಬ್ಯಾಂಕ್ನ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರ ಬಹಳ ಮಹತ್ವದ್ದಾಗಿದೆ. ಗ್ರಾಹಕರ ವಿಶ್ವಾಸವೇ ಬ್ಯಾಂಕ್ನ ಶಕ್ತಿಯಾಗಿದೆ.
ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಮೂಲಕ ಗ್ರಾಹಕರಿಗೆ ಇನ್ನಷ್ಟು ವೇಗವಾದ ಹಾಗೂ ಸುಲಭ ಸೇವೆ ಒದಗಿಸಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ಹಣಕಾಸು ಸೇವೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಹಸೀಲ್ದಾರ್ ಮಂಗಳಾ ಮಾತನಾಡಿ, ಎಸ್ಬಿಐ ತನ್ನ ಗ್ರಾಹಕರಿಗೆ ವಿವಿಧ ಸಾಲ, ಉಳಿತಾಯ ಹಾಗೂ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕ ಸದೃಢತೆಗೆ ನೆರವಾಗುತ್ತಿದೆ. ಗ್ರಾಹಕರು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಣ್ಣ ಮಟ್ಟದಲ್ಲಿ ಆರಂಭವಾದ ಎಸ್ಪಿಐ ಇಂದು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಬೆಳೆದಿದ್ದು, ಲಾಂತರ ಜನರಿಗೆ ಉದ್ಯೋಗ ನೀಡುತ್ತಿರುವ ಹೆಮ್ಮೆಯ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲೂ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು. ಅಧಿಕಾರಿಗಳಾದ ಸಂತೋಷ ಶರ್ಮಾ, ಜೈರಾಮ ನಾಯ್ಕ, ಅನ್ವರ್ ಪಾಷಾ ಸೇರಿ ಅನೇಕರು ಇದ್ದರು. ಅಲ್ಲದೆ ಹಿರಿಯ ಗ್ರಾಹಕರನ್ನು ಸನ್ಮಾನಿಸಲಾಯಿತು.