ಪ್ರಸ್ತುತದಲ್ಲಿ ಆರೋಗ್ಯ ಸೇವೆಗೆ ಆದ್ಯತೆ ಅಗತ್ಯ

ಬೈಲಹೊಂಗಲ ನಗರದ ಡಾ.ಮಹಾಂತಶೆಟ್ಟಿ ಸಮ್ಮಿಶ್ರ ಆಸ್ಪತ್ರೆ ಪ್ರಾರಂಭೋತ್ಸವದಲ್ಲಿ ಡಾ.ಚಂದ್ರಶೇಖರ ವಕ್ಕುಂದಮಠ ಅವರನ್ನು ಸನ್ಮಾನಿಸಲಾಯಿತು. ನೀಲಕಂಠ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ, ಮುರುರಾಜೇಂದ್ರ ಸ್ವಾಮೀಜಿ ಇತರರಿದ್ದರು.
ಬೈಲಹೊಂಗಲ ನಗರದ ಡಾ.ಮಹಾಂತಶೆಟ್ಟಿ ಸಮ್ಮಿಶ್ರ ಆಸ್ಪತ್ರೆ ಪ್ರಾರಂಭೋತ್ಸವದಲ್ಲಿ ಡಾ.ಚಂದ್ರಶೇಖರ ವಕ್ಕುಂದಮಠ ಅವರನ್ನು ಸನ್ಮಾನಿಸಲಾಯಿತು. ನೀಲಕಂಠ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ, ಮುರುರಾಜೇಂದ್ರ ಸ್ವಾಮೀಜಿ ಇತರರಿದ್ದರು.
Published on
ಬೈಲಹೊಂಗಲ: ಇತ್ತೀಚಿನ ದಿನಗಳಲ್ಲಿ ಆರೋಗ್ಯ ೇತ್ರ ಬಹಳಷ್ಟು ಮಹತ್ವ ಪಡೆದಿದೆ. ನಗರದ ಮಹಾಂತಶೆಟ್ಟಿ ಸಮ್ಮಿಶ್ರ ಆಸ್ಪತ್ರೆಯಲ್ಲಿ ಒಂದೇ ಸೂರಿನಡಿ ಹೃದ್ರೋಗ, ಮಧುಮೇಹ, ಹೆರಿಗೆ, ಸ್ತ್ರೀರೋಗ, ಎಲುಬು& ಕೀಲು ಹಾಗೂ ಅಪಘಾತ ಚಿಕಿತ್ಸಾಟಕ ಹೊಂದಿದೆ. ಜನರಿಗೆ ಅನುಕೂಲವಾಗಲಿದೆ ಎಂದು ಮುರಗೋಡ ದುರುದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು. ನಗರದ ಕೇಂದ್ರ ಬಸ್​ ನಿಲ್ದಾಣದ ಬಳಿ ಡಾ.ಮಹಾಂತಶೆಟ್ಟಿ ಸಮ್ಮಿಶ್ರ ಆಸ್ಪತ್ರೆ ಪ್ರಾರಂಭೋತ್ಸವದಲ್ಲಿ ಬುಧವಾರ ಆಶೀರ್ವಚನ ನೀಡಿ, ಮುಂಬರುವ ದಿನಗಳಲ್ಲಿ ಡಾ.ಮಹಾಂತಶೆಟ್ಟಿ ಸಮ್ಮಿಶ್ರ ಆಸ್ಪತ್ರೆ ಉತ್ತರೋತ್ತರ ಪ್ರಗತಿ ಹೊಂದಲಿ ಎಂದು ಆಶಿಸಿದರು. ಹೊಸೂರಿನ ಗಂಗಾಧರ ಸ್ವಾಮೀಜಿ, ಮುನವಳ್ಳಿಯ ಮುರುರಾಜೇಂದ್ರ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ದೊಡವಾಡದ ಜಡಿಸಿದ್ಧೇಶ್ವರ ಶಿವಾಚಾರ್ಯರು, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ನಯಾನಗರದ ಸಿದ್ಧಲಿಂಗ ಸ್ವಾಮೀಜಿ, ಸ್ಥಳಿಯ ಮಡಿವಾಳೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಬಸವರಾಜ ಮಹಾಂತಶೆಟ್ಟಿ ಮಾತನಾಡಿ, ಬೈಲಹೊಂಗಲ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಮಹಾಂತಶೆಟ್ಟಿ ಸಮ್ಮಿಶ್ರ ಆಸ್ಪತ್ರೆ ಆರಂಭಿಸಲಾಗಿದೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಹಲವು ತವೈದ್ಯರು ಆಸ್ಪತ್ರೆಗೆ ಆಗಮಿಸಲಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗುವುದು ಎಂದರು. ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಚಿಕ್ಕಮಕ್ಕಳ ತ ಡಾ.ಚಂದ್ರಶೇಖರ ವಕ್ಕುಂದಮಠ, ವಿಶ್ವನಾಥ ಹಿರೇಮಠ, ಡಾ.ಮಹಾಂತೇಶಶಾಸ್ತ್ರಿ ಆರಾದ್ರಿಮಠ, ಹೃದ್ರೋಗ ತ ಡಾ.ಬಸವರಾಜ ಮಹಾಂತಶೆಟ್ಟಿ, ಡಾ.ಸುನಂದಾ ಮಹಾಂತಶೆಟ್ಟಿ, ಸ್ತ್ರೀರೋಗ ತಜ್ಞೆ ಡಾ.ಚೇತನಾ ದೇಸಾಯಿ, ಎಲುಬು&ಕೀಲುತ ಡಾ.ವೀರೇಶ ವಾಲಿ, ಹೃದ್ರೋಗ ತ ಡಾ.ಸಂಜೀವಕುಮಾರ ಮಡಿವಾಳರ, ಚಿಕ್ಕಮಕ್ಕಳ ತ ಡಾ. ಚಂದ್ರಶೇಖರ ವಕ್ಕುಂದಮಠ, ಪ್ರಮೋದಕುಮಾರ ವಕ್ಕುಂದಮಠ, ಜಗದೀಶ ವಕ್ಕುಂದಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net