ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕಿ

ನಕಲಿ ವೈದ್ಯರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸೇಡಂನಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್​ ಪಾಂಡೆ ಅವರಿಗೆ ಜಯ ಕರ್ನಾಟಕ ಸಂಟನೆಯಿಂದ ಮನವಿಪತ್ರ ಸಲ್ಲಿಸಲಾಯಿತು. ರವೀಂದ್ರ ನಾಯಕ್​, ರಾಜು ದೊರೆ, ಲೋಕೇಶ ಹಂದರಕಿ, ದಿನೇಶ ನಾಯ್ಕೋಡಿ, ಶರಣು ಬುಡಸಾಣಿ ಇತರರಿದ್ದರು.
ನಕಲಿ ವೈದ್ಯರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸೇಡಂನಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್​ ಪಾಂಡೆ ಅವರಿಗೆ ಜಯ ಕರ್ನಾಟಕ ಸಂಟನೆಯಿಂದ ಮನವಿಪತ್ರ ಸಲ್ಲಿಸಲಾಯಿತು. ರವೀಂದ್ರ ನಾಯಕ್​, ರಾಜು ದೊರೆ, ಲೋಕೇಶ ಹಂದರಕಿ, ದಿನೇಶ ನಾಯ್ಕೋಡಿ, ಶರಣು ಬುಡಸಾಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಯ ಕರ್ನಾಟಕ ಸಂಘಟನೆಯಿಂದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ
ಸೇಡಂ: ಯಾವುದೇ ಅಧ್ಯಯನವಿಲ್ಲದ ಕೆಲವರು ವೈದ್ಯ ವೃತ್ತಿಯಲ್ಲಿ ಮುಂದುವರೆದು ಜನರಿಗೆ ಚಿಕಿತ್ಸೆ ನೀಡುತ್ತಿದ್ದು, ಅಂತಹ ನಕಲಿ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ರವೀಂದ್ರ ನಾಯಕ್​ ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತ್ವಿಕ್​ ಪಾಂಡೆ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಕ್ಲಿನಿಕ್​, ಆಸ್ಪತ್ರೆ ಹಾಗೂ ಚಿಕಿತ್ಸಾ ಕೇಂದ್ರಗಳ ಸಮಗ್ರ ಪರಿಶೀಲನೆ ಮಾಡಬೇಕು. ನೋಂದಣಿ ಇಲ್ಲದ ಆಸ್ಪತ್ರೆ, ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಈ ಸಮಸ್ಯೆಯನ್ನು ತುರ್ತಾಗಿ ಪರಿಗಣಿಸಬೇಕು. ತ ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ ಸೇರಿ ಹಲವು ಹುದ್ದೆಗಳ ಭರ್ತಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ರಾಜು ದೊರೆ, ಲೋಕೇಶ ಹಂದರಕಿ, ದಿನೇಶ ನಾಯ್ಕೋಡಿ, ಶರಣು ಬುಡಸಾಣಿ, ಬಸವರಾಜ ತಳವಾರ, ಭೀಮಾಶಂಕರ ದಂಡೋತಿ, ಸಂತೋಷ ದೊಡ್ಡಮನಿ, ರವಿ ಜಾಧವ್​, ಸಂಜಯ ಹುಣಸೂರ, ಭಾಗೇಶ, ಬೀರಲಿಂಗ, ಪ್ರಶಾಂತ, ಮೌನೇಶ, ಅಭಿ, ಗೋಪಾಲ, ಸುನೀಲ, ಬಸುಗೌಡ, ನಾಗು ದೋರೆ, ರಾಮು ಮೆಕಾನಿಕ್​, ಶ್ರೀಕಾಂತ, ರವಿ ಊಡಗಿ, ಭೀಮು ದಂಡೋತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net