ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಿ

 ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಅರಿವು ಶಿಣ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಮಲ್ಲಿಕಾರ್ಜುನ ಶೃಂಗೇರಿ, ಪ್ರವಿಣ ಮೊದಲೇ, ಡಾ.ಬಾಬುರಾವ ಶೃಂಗೇರಿ, ಆಕಾಶ ಇತರರಿದ್ದರು
ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಅರಿವು ಶಿಣ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಮಲ್ಲಿಕಾರ್ಜುನ ಶೃಂಗೇರಿ, ಪ್ರವಿಣ ಮೊದಲೇ, ಡಾ.ಬಾಬುರಾವ ಶೃಂಗೇರಿ, ಆಕಾಶ ಇತರರಿದ್ದರು
Published on
ಆಳಂದ: ಸಮಾಜದಿಂದ ಸಿಗುವ ಗೌರವ, ಸನ್ಮಾನ ಮಕ್ಕಳಿಗೆ ಸ್ಫೂರ್ತಿದಾಯಕವಾಗಬೇಕು ಎಂದು ಅರಿವು ಶಿಕ್ಷಣ ಕೇಂದ್ರದ ಸಂಸ್ಥಾಪಕ ಮಲ್ಲಿಕಾರ್ಜುನ ಶೃಂಗೇರಿ ಹೇಳಿದರು. ಕಿಣ್ಣಿಸುಲ್ತಾನ ಗ್ರಾಮದ ಅರಿವು ಶಿಕ್ಷಣ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿ, ಮಕ್ಕಳು ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು ಎಂದು ಸಲಹೆ ನೀಡಿದರು. ಕರವೇ ತಾಲೂಕು ಅಧ್ಯಕ್ಷ ಪ್ರವಿಣ ಮೊದಲೇ ಮಾತನಾಡಿದರು. ಪ್ರಮುಖರಾದ ಡಾ.ಬಾಬುರಾವ ಶೃಂಗೇರಿ, ಆಕಾಶ ದೇಗಾಂವ, ಮಹೇಶ ವಾರಿಕ, ವಿಕಾಸ ಕಾಂಬಳೆ, ನಾಗಯ್ಯ ಇತರರಿದ್ದರು. ವಿದ್ಯಾರ್ಥಿಗಳಾದ ಕಿರಣ್​, ರಾಹುಲ್​, ಅಶ್ವಿನಿ, ಕಲ್ಯಾಣಿ, ಚಂದನರನ್ನು ಸನ್ಮಾನಿಸಲಾಯಿತು. ಹಣಮಂತ ಚಿಂಚೋಳಿ ನಿರೂಪಣೆ ಮಾಡಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net