ವಿದ್ಯೆಯೊಂದಿಗೆ ಸಂಸ್ಕಾರ, ಶಿಸ್ತು ಬೆಳೆಸಿಕೊಳ್ಳಿ

ಕಲಬುರಗಿಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಸರ್ಕಾರಿ ಪದವಿ ಕಾಲೇಜಿನ ಪ್ರಾಚಾಯೆರ್ ಡಾ.ಸವಿತಾ ತಿವಾರಿ ಉದ್ಘಾಟಿಸಿದರು. ಡಾ.ಪ್ರಕಾಶ ಮೋರಗೆ, ಡಾ.ಕಿಶೋರಸಿಂಗ್​, ಬಿ.ಎಸ್​.ಬಿರಾದಾರ, ರಾು ಮೈಲಾಪುರ, ಲಾಲ್​ ಅಹ್ಮದ್​ ಬಾಂಬೆ ಸೇಠ್​, ಧರ್ಮರಾಜ ಹೆರೂರ, ವಿದ್ಯಾ ಜೋಶಿ, ಡಾ.ಜ್ಯೋತಿ ಕೆ.ಎಸ್​, ಡಾ.ಪದ್ಮಣ್ಣಾ ರಾಸಣಗಿ, ಡಾ.ರೂಪಾಲಿ ರಾಠೋಡ್​ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಾ.ಸವಿತಾ ತಿವಾರಿ ಕರೆ
  • ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀಳ್ಕೊಡುಗೆ
ಕಲಬುರಗಿ: ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಸಂಸ್ಕಾರ, ಶಿಸ್ತು ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ಪ್ರಾಚಾಯೆರ್ ಡಾ.ಸವಿತಾ ತಿವಾರಿ ಹೇಳಿದರು.
ನಗರದ ಜೇವರ್ಗಿ ರಸ್ತೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ಜೀವನ ಭವಿಷ್ಯದ ಬಲವಾದ ಅಡಿಪಾಯ. ವಿದ್ಯಾರ್ಥಿನಿಯರು ಗುರಿ ಸಾಧನೆಗೆ ಆತ್ಮವಿಶ್ವಾಸದಿಂದ ಮುಂದುವರಿಯಬೇಕು ಎಂದು ಸಲಹೆ ನೀಡಿದರು.
2025&26ನೇ ಶೈಕ್ಷಣಿಕ ಸಾಲಿನ ಸಾಂಸತಿಕ, ಕ್ರೀಡಾ, ಎನ್​ಎಸ್​ಎಸ್​, ರೆಡ್​ ಕ್ರಾಸ್​, ಸ್ಕೌಟ್ಸ್​ ಮತ್ತು ಗೈಡ್ಸ್​ ಹಾಗೂ ಬುದ್ಧ ಬಸವ ಅಂಬೇಡ್ಕರ್​ ವೇದಿಕೆಯ ವಾರ್ಷಿಕೋತ್ಸವ ಮತ್ತು ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಪದವಿ ಹಾಗೂ ಎಂಎ ಕನ್ನಡ, ಇತಿಹಾಸ, ರಾಜ್ಯಶಾಸ, ಅರ್ಥಶಾಸ, ಎಂಎಸ್ಸಿ, ಎಂಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಮೋರಗೆ ಪ್ರಕಾಶ ಮಾತನಾಡಿ, ವಿದ್ಯಾರ್ಥಿನಿಯರ ಸಾಧನೆಗೆ ಕಾಲೇಜಿನ ಎಲ್ಲಾ ವಿಭಾಗಗಳ ಸಹಕಾರ ಮಹತ್ವದ್ದಾಗಿದೆ ಎಂದರು.
ಸಿಡಿಸಿ ಸದಸ್ಯರಾದ ಡಾ.ಕಿಶೋರಸಿಂಗ್​, ಬಿ.ಎಸ್​.ಬಿರಾದಾರ, ಹುಲಿಕಂಠರಾಯ ಗೌಡ, ರಾು ಮೈಲಾಪೂರ, ಲಾಲ್​ ಅಹ್ಮದ್​ ಬಾಂಬೆ ಸೇಠ್​, ವಾಣಿ ಸಗರಕರ್​, ಧರ್ಮರಾಜ ಹೆರೂರ, ವಿದ್ಯಾ ಜೋಶಿ, ಡಾ.ಜ್ಯೋತಿ ಕೆ.ಎಸ್​, ಡಾ.ಪದ್ಮಣ್ಣಾ ರಾಸಣಗಿ, ಡಾ. ರೂಪಾಲಿ ರಾಠೋಡ, ಡಾ.ಜ್ಯೋತಿ ರೆಡ್ಡಿ, ಡಾ.ಪದ್ಮಾವತಿ ಧನ್ನಿ, ಡಾ.ಸಂತೋಷ ಹುಂಪಳಿ, ಡಾ.ಮೀನಾ ವಿಜಯಕುಮಾರ, ಡಾ. ಶರಣಬಸಪ್ಪ ಚಿಕ್ಕಳ್ಳಿ ಹಾಗೂ ಡಾ.ವಿನೋದಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net