2026ರ ಶ್ರೇಯಾಂಕದಲ್ಲಿ ಸಿಯುಕೆ ಸಾಧನೆ

,
,
Published on

ಪ್ರಮುಖ ಮುಖ್ಯಾಂಶಗಳು

  • 32ರಿಂದ 16ನೇ ಸ್ಥಾನಕ್ಕೆ ಜಿಗಿತ
ಕಲಬುರಗಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು 2026ರ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) 16ನೇ ಸ್ಥಾನ ಪಡೆದು ಶಿಕ್ಷಣ ೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ.
ಕಳೆದ ವರ್ಷ 32ನೇ ಸ್ಥಾನದಲ್ಲಿದ್ದ ಸಿಯುಕೆ ಈ ವರ್ಷ 16ನೇ ಸ್ಥಾನಕ್ಕೆ ಏರಿಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡಿ ವಾರ್ಷಿಕ ಶ್ರೇಯಾಂಕ ಪ್ರಕಟಿಸುವ ಪ್ರತಿಷ್ಠಿತ ಸಂಸ್ಥೆಯಾದ ಐಐಆರ್​ಎಫ್​ ಈ ಶ್ರೇಯಾಂಕದಲ್ಲಿ ಸಿಯುಕೆ ಸಾಧಿಸಿರುವ ಪ್ರಗತಿಯು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ, ಹೊಸ ಸಂಶೋಧನೆಗಳು, ನವೋದ್ಯಮ ಹಾಗೂ ಕೌಶಲ ಸೇರಿ ವಿವಿಯ ಸಮಗ್ರ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆ ಇದು ಪ್ರತಿಬಿಂಬಿಸುತ್ತದೆ.
ಈ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿರುವ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಐಐಆರ್​ಎಫ್​ ಶ್ರೇಯಾಂಕದಲ್ಲಿ ವಿಶ್ವವಿದ್ಯಾಲಯವು ಗಮನಾರ್ಹ ಪ್ರಗತಿ ಸಾಧಿಸಿರುವುದು ನಮ್ಮ ಬೋಧಕ&ಬೋಧಕೇತರ ವೃಂದ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ನಿಷ್ಠೆಗೆ ದೊರೆತ ಮಾನ್ಯತೆಯಾಗಿದೆ. ಈ ಸಾಧನೆಯು ನಮ್ಮ ವಿವಿಯಲ್ಲಿ ಮತ್ತಷ್ಟು ಬೋಧನೆ, ಹೊಸ ಹೊಸ ಸಂಶೋಧನೆ, ನವೋದ್ಯಮ ಹಾಗೂ ಕೌಶಲ ಆಧಾರಿತ ಶಿಕ್ಷಣ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ಐಕ್ಯೂಎಸಿ ನಿರ್ದೇಶಕ ಪ್ರೊ.ಅಮರೆಂದ್ರ ಮತ್ಸ ಮತ್ತು ವಿವಿಯ ಶ್ರೇಯಾಂಕ ವಿಭಾಗದ ಸಂಯೋಜಕ ಡಾ.ಗುರುರಾಜ ಮುಕರಂಬಿಯವರ ಕಾರ್ಯವನ್ನು ಕುಲಪತಿಗಳು ಶ್ಲಾಸಿದ್ದಾರೆ. ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​, ಡೀನರು, ಮುಖ್ಯಸ್ಥರು ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net