ಐಇಇಇ ಸ್ಪೇಸ್​ ಸಮ್ಮೇಳನದಲ್ಲಿ ಸಿಯುಕೆ ಭಾಗಿ

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಐಇಇಇ ಸ್ಪೇಸ್​-2026 ಸಮ್ಮೇಳನದಲ್ಲಿ ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಐಇಇಇ ಸ್ಪೇಸ್​-2026 ಸಮ್ಮೇಳನದಲ್ಲಿ ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಭಾಗವಹಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಹ್ಯಾಕಾಶ, ವೈಮಾನಿಕ, ಸುಧಾರಿತ ತಂತ್ರಜ್ಞಾನ ಕ್ಷೇತ್ರ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಎಲೆಕ್ಟ್ರಾನಿಕ್ಸ್​ ಮತ್ತು ಸಂವಹನ ಇಂಜಿನಿಯರಿಂಗ್​ ವಿಭಾಗವು ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಐಇಇಇ ಸ್ಪೇಸ್​-2026 ಸಮ್ಮೇಳನದಲ್ಲಿ ಭಾಗವಹಿಸಿತು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹಾಗೂ ಇಂಜಿನಿಯರಿಂಗ್​ ನಿಕಾಯದ ಡೀನ್​ ಹಾಗೂ ಎಲೆಕ್ಟ್ರಾನಿಕ್ಸ್​ ಮತ್ತು ಸಂವಹನ ಇಂಜಿನಿಯರಿಂಗ್​ ವಿಭಾಗದ ಮುಖ್ಯಸ್ಥ ಪ್ರೊ.ಪರಮೇಶ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ನರಸಿಂ ಚರಣ್​ ಪ್ರಧಾನ್​ ಸೇರಿ ವಿಭಾಗದ 15 ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೇಶದ ಬಾಹ್ಯಾಕಾಶ, ವೈಮಾನಿಕ ವಲಯ ಮತ್ತು ಸುಧಾರಿತ ತಂತ್ರಜ್ಞಾನ ೇತ್ರಗಳಲ್ಲಿ ಸೇರಿದೇಶದ ವಿವಿಧ ಭಾಗಗಳಿಂದ ಸುಮಾರು 70ಕ್ಕೂ ಹೆಚ್ಚು ಕುಲಪತಿಗಳು, ನಿರ್ದೇಶಕರು, ಖ್ಯಾತ ವಿಜ್ಞಾನಿಗಳು, ಕೈಗಾರಿಕಾ ಕ್ಷೇತ್ರದ ಪ್ರಮುಖರು ಹಾಗೂ ಶಿಕ್ಷಣ ತರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಭಾರತದ ಪ್ರತಿಷ್ಠಿತ ಸಮ್ಮೇಳನಗಳಲ್ಲಿ ಇದು ಯಶಸ್ವಿಯಾಗಿ ಹೊರಹೊಮ್ಮಿತು.
ಈ ಸಮ್ಮೇಳನದಲ್ಲಿ ಪ್ರಮುಖವಾಗಿ ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರವಾದ ಇಸ್ರೋ ಮತ್ತು ಡಿಆರ್​ಡಿಒ ಕೇಂದ್ರಗಳ ಅಧ್ಯಕ್ಷರು, ಖ್ಯಾತ ವಿಜ್ಞಾನಿಗಳು ಸೇರಿದಂತೆ ರಕ್ಷಣಾ ವಲಯ, ಬಾಹ್ಯಾಕಾಶ, ವೈಮಾನಿಕ ವಲಯ ಮತ್ತು ಸಂಶೋಧನಾ ೇತ್ರದ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು, ದೇಶದ ಪ್ರಮುಖ ಹಿರಿಯ ವಿಜ್ಞಾನಿಗಳಾದ ಡಾ.ಜಿ.ಸತೀಶ್​ ರೆಡ್ಡಿ, ಡಾ.ಬಿ.ಕೆ.ದಾಸ್​, ಡಾ.ಎಸ್​.ಸೋಮನಾಥ್​ ಸೇರಿ ಹಲವಾರು ಹಿರಿಯ ವಿಜ್ಞಾನಿಗಳೊಂದಿಗೆ ಕೇಂದ್ರೀಯ ವಿವಿಯ ಭವಿಷ್ಯದ ಶೈಕ್ಷಣಿಕ ಸಹಭಾಗಿತ್ವ, ಜಂಟಿ ಸಂಶೋಧನೆ ಹಾಗೂ ಮುಂಬರುವ ಆಯೋಜನೆ ಮಾಡುವ ಪ್ರಮುಖ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ನಮ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವುದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಂತೆ ಹಿರಿಯ ವಿಜ್ಞಾನಿಗಳನ್ನು ಆಹ್ವಾನಿಸಿದರು.
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಭಾರತೀಯ ಗಗನಯಾತ್ರಿಗಳಾದ ಅಂಗದ್​ ಪ್ರತಾಪ್​ ಹಾಗೂ ಗ್ರೂಪ್​ ಕ್ಯಾಪ್ಟನ್​ ಶುಭಾಂಶು ಶುಕ್ಲಾ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಭಾರತದ ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯದ ಕುರಿತು ತಮ್ಮ ಅನುಭವ ಮತ್ತು ದೂರದೃಷ್ಟಿ ಹಂಚಿಕೊಂಡರು. ಇದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಯಿತು,
ಈ ಸಮ್ಮೇಳನದಲ್ಲಿ ನಮ್ಮ ವಿಶ್ವವಿದ್ಯಾಲಯದ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದರು. ಈ ಸಮ್ಮೇಳನವು ತಮ್ಮ ಸಂಶೋಧನಾ ಸಾಧನೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿತ್ತು.
"

ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದರಿಂದಾಗಿ ಸಂಶೋಧನೆ, ನಾವೀನ್ಯತೆ ಹಾಗೂ ಇಸ್ರೋ, ಡಿಆರ್​ಡಿಒ, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕಾ ವಲಯಗಳೊಂದಿಗೆ ಅರ್ಥಪೂರ್ಣ ಸಹಯೋಗ ಬೆಳೆಸುವ ವಿಶ್ವವಿದ್ಯಾಲಯದ ಬದ್ಧತೆ ಎತ್ತಿ ತೋರಿಸಿದೆ.

— ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net