ಗ್ರಾಮದ ಹನುಮಾನ ಮಂದಿರ, ಹಳೇ ಗ್ರಾಮ ಪಂಚಾಯಿತಿ ಕಚೇರಿ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಬಡಾವಣೆಯಲ್ಲಿ ಮಹಿಳೆಯರು, ಮಕ್ಕಳು, ವಯೋ ವೃದ್ಧರು ಕೊಡ ನೀರಿಗಾಗಿ ಬೀದಿಗಿಳಿಯುವಂತ ಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಳೆದ ಎರಡು ದಿನಗಳಿಂದ ನಿತ್ಯವೂ ಎರಡು ಬಾರಿ ಟ್ಯಾಂಕರ್ ನೀರು ಪೂರೈಕೆ ಮಾಡುತ್ತಿದ್ದು, ಅದು ಇಡೀ ಹಳ್ಳಿ ಜನತೆಗೆ ಸಾಕಾಗುತ್ತಿಲ್ಲ. ಕೊಡ ನೀರು ಪಡೆಯುವುದಕ್ಕೂ ಹರಸಾಹಸ ಪಡುವ ಸ್ಥಿತಿ ಇದೆ.