ಬೆಳೆ ಹಾನಿ ಪರಿಹಾರ ನೀಡಿ

ಬಿಜೆಪಿ ಮುಖಂಡರು ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿ ಹೊಲಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿದರು. ಎನ್​.ರವಿಕುಮಾರ, ವಿರೂಪಾ ಮಾಮನಿ, ಹಣಮಂತ ನಿರಾಣಿ, ಎ.ಎಸ್​.ಪಾಟೀಲ ಇತರರಿದ್ದರು.
ಬಿಜೆಪಿ ಮುಖಂಡರು ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿ ಹೊಲಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿದರು. ಎನ್​.ರವಿಕುಮಾರ, ವಿರೂಪಾ ಮಾಮನಿ, ಹಣಮಂತ ನಿರಾಣಿ, ಎ.ಎಸ್​.ಪಾಟೀಲ ಇತರರಿದ್ದರು.
Published on

ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಬೆಳೆಹಾನಿ ಸಮೀೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ವಿಧಾನ ಪರಿಷತ್​ ಸದಸ್ಯ ಎನ್​.ರವಿಕುಮಾರ ಆಗ್ರಹಿಸಿದರು.

ಕಗದಾಳ ಗ್ರಾಮದಲ್ಲಿ ಬಿಜೆಪಿ ಮುಖಂಡರೊಂದಿಗೆ ಭಾನುವಾರ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಬೆಳೆ ಒಣಗಿದ್ದು, ಬಿತ್ತನೆ, ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ರೈತರು ಮಾಡಿರುವ ಖರ್ಚು ವ್ಯರ್ಥವಾಗಿದೆ. ರೈತರ ವಾಸ್ತವ ಸಮಸ್ಯೆ ಅರಿಯಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಬೆಳೆಹಾನಿ ಸಮೀೆ ನಡೆಸಬೇಕು. ರೈತರಿಗೆ ಬೆಳೆ ವಿಮೆ ಹಾಗೂ ಪರಿಹಾರಧನ ತಲುಪಿಸಬೇಕು ಎಂದು ಒತ್ತಾಯಿಸಿದರು.
ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ವಿರೂಪಾ ಮಾಮನಿ ಮಾತನಾಡಿದರು. ವಿಧಾನ ಪರಿಷತ್​ ಸದಸ್ಯ ಹಣಮಂತ ನಿರಾಣಿ, ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅರವಿಂದ ಪಾಟೀಲ, ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯ ಎ.ಎಸ್​.ಪಾಟೀಲ, ಬಸವರಾಜ ಯಂಕಂಚಿ, ಸುಭಾಸ ಪಾಟೀಲ, ಜಗದೀಶ ಬೂದಿಹಾಳ, ಕೆ.ವಿ.ಪಾಟೀಲ, ಜಗದೀಶ ಕೌಜಗೇರಿ, ಶೇಖರ ಗೋಕಾಂವಿ, ಸುಭಾಸ ಸಣ್ಣವಿರಪ್ಪನವರ, ಉಮೇಶ ಅಂಗಡಿ, ರಮೇಶ ಮೇಟಿ, ರಾಮಕೃಷ್ಣ ಸವದತ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net