

ಆಳಂದ: ತಾಲೂಕಿನಲ್ಲಿ ಕಳೆದ 2-3 ವರ್ಷಗಳಿಂದ ವಿಂಡ್ ಪವರ್ ಕಂಪನಿಯು ರೈತರ ಕೃಷಿ ಭೂಮಿಯಲ್ಲಿ ವಿದ್ಯುತ್ ಉತ್ಪಾದನಾ ಟಕಗಳನ್ನು ಅಳವಡಿಸಿದ್ದು, ಸಮರ್ಪಕ ಹಣ ನೀಡಿದ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಿದ್ದು ಹಿರೋಳ್ಳಿ ಆರೋಪಿಸಿದರು. ಈ ಕುರಿತು ತಹಸೀಲ್ದಾರ್ ಅಣ್ಣಾರಾಯ ಪಾಟೀಲ್ ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಿ, ಒಂದು ಪವರ್ ಟಕ ನಿರ್ಮಾಣಕ್ಕೆ 10 ಎಕರೆ ಜಮೀನು ಖರೀದಿಸಬೇಕೆಂಬ ನಿಯಮವಿದೆ. ಆದರೆ ಕಂಪನಿಯೂ ಸರ್ಕಾರದ ನಿಯಮ ಗಾಳಿಗೆ ತೂರಿ ದಲ್ಲಾಳಿಗಳ ಮೂಲಕ ರೈತರ ಜಮೀನು ಕಬಳಿಸುತ್ತಿದೆ. ಪ್ರತಿ ಎಕರೆ ಜಮೀನಿಗೆ 2&4 ಲಕ್ಷ ರೂ. ಹಣ ನೀಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಹೆಚ್ಚಿನ ಬೆಲೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಅಜಿತ್ ಕುಲಕರ್ಣಿ, ಈರಣ್ಣ ಹತರಕಿ, ಮನೋಜ ಸಿಂಗೆ, ಮಹೇಶ ಪವಾರ್, ಶಿರೀಶ ವರ್ಧಮಾನೆ, ಮೌಲಾಲಿ ಬಸವರಾಜ ವಾಡೆದ ಇತರರಿದ್ದರು.