ಸಮಗ್ರ ಅಭಿವೃದ್ಧಿಗೆ ಸಮನ್ವಯ ಅಗತ್ಯ

ಖಾನಾಪುರ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಮಾಸಿಕ ಪರಿಶೀಲನಾ ಸಭೆ ನಡೆಯಿತು. ಸೂರ್ಯಕಾಂತ ಕುಲಕರ್ಣಿ, ರಮೇಶ ಮೇತ್ರಿ, ಪ್ರಕಾಶ ಮಾದರ, ಪ್ರಿಯಾಂಕಾ ಗಾಂವ್ಕರ್​, ಶಾಂತಾರಾಮ ಗುರವ, ರಾಜಾ ಕುಡಾಳೆ, ವಿವೇಕ ತಡಕೋಡ ಇತರರಿದ್ದರು.
ಖಾನಾಪುರ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಮಾಸಿಕ ಪರಿಶೀಲನಾ ಸಭೆ ನಡೆಯಿತು. ಸೂರ್ಯಕಾಂತ ಕುಲಕರ್ಣಿ, ರಮೇಶ ಮೇತ್ರಿ, ಪ್ರಕಾಶ ಮಾದರ, ಪ್ರಿಯಾಂಕಾ ಗಾಂವ್ಕರ್​, ಶಾಂತಾರಾಮ ಗುರವ, ರಾಜಾ ಕುಡಾಳೆ, ವಿವೇಕ ತಡಕೋಡ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಖಾನಾಪುರ
ಖಾತರಿ ಯೋಜನೆಗಳ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿ ಸಾಧಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ತಾಲೂಕಿನಲ್ಲಿ ಖಾತರಿ ಯೋಜನೆಗಳ ಕುರಿತು ನಿಯಮಿತ ಸಭೆ ನಡೆಯುತ್ತಿವೆ. ಜತೆಗೆ ಸಮಿತಿ ಕಾರ್ಯ ಜಿಲ್ಲಾದ್ಯಂತ ಮೆಚ್ಚುಗೆ ಪಡೆಯುತ್ತಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಹೇಳಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಮಾಸಿಕ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಇದ್ಲಹೊಂಡ, ಸಿಂಗಿನಕೊಪ್ಪ, ಮಾಳಂಕಲೆ, ಬಿಡಿ&ಕಿತ್ತೂರು ಮತ್ತು ಪಾಲಿ&ಹೇಮಡ್ಗಾ ಮಾರ್ಗಗಳಲ್ಲಿ ಬಸ್​ ಸೇವೆ ಆರಂಭಿಸಬೇಕು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು. ನಿಯಮಿತವಾಗಿ ಬಸ್​ ಸಂಚಾರ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಸಹಾಯಕ ಸಿಡಿಪಿಒ ಶಾರದಾ ಮರಾಠೆ ಮಾತನಾಡಿ, ಗೃಹಲ ಯೋಜನೆಗೆ ಮೇ ಅಂತ್ಯದೊಳಗೆ 67,360 ಅರ್ಜಿ ನೋಂದಣಿಯಾಗಿವೆ. ಅವುಗಳಲ್ಲಿ 64,311 ಲಾನುಭವಿಗಳಿಗೆ ಅನುದಾನ ವಿತರಿಸಲಾಗಿದೆ. 25 ಬಾಕಿ ಉಳಿದಿದ್ದು, 214 ಅರ್ಜಿಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಒಟ್ಟು 1,768 ಅರ್ಜಿ ಸ್ವೀಕೃತಗೊಂಡಿದ್ದು, 986 ಅನುಮೋದನೆ ಪಡೆದಿವೆ. 420 ತಿರಸ್ಕತಗೊಂಡಿವೆ. ತಾಲೂಕಿನಲ್ಲಿ ಒಟ್ಟು 83,673 ಪಡಿತರ ಚೀಟಿ ಇವೆ ಎಂದು ವಿವರಿಸಿದರು.
ಆಹಾರ ನಿರೀಕ ಉದಯ ಖಟೇದಾರ್​ ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು ಯೋಜನೆ ಕುರಿತು ಮಾಹಿತಿ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯವೈಖರಿ ಬಗ್ಗೆ ಸಮಿತಿ ಸದಸ್ಯ ಪ್ರಕಾಶ ಮಾದರ ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಇಒ ರಮೇಶ ಮೇತ್ರಿ, ವ್ಯವಸ್ಥಾಪಕ ಶ್ರೀಕಾಂತ ಸಪಟ್ಲ, ಗುರು ಹಿರೇಮಠ, ಸಮಿತಿ ಸದಸ್ಯರಾದ ಬಾಬು ಹತ್ತರವಾಡ, ಇಸಾಖಾನ್​ ಪಠಾಣ, ಜಗದೀಶ ಪಾಟೀಲ, ರುದ್ರಪ್ಪ ಪಾಟೀಲ, ಗೋವಿಂದ ಪಾಟೀಲ, ಯೂಸ್​ು ಹರ್ಗಿ, ಪ್ರಿಯಾಂಕಾ
ಗಾಂವ್ಕರ್​, ದೀಪಾ ಪಾಟೀಲ, ಶಾಂತಾರಾಮ ಗುರವ, ರಾಜಾ ಕುಡಾಳೆ, ವಿವೇಕ ತಡಕೋಡ, ಸಂಜಯ ಗಾವಡೆ ಇತರರಿದ್ದರು.
ಬಸ್​ ಚಾಲಕರು, ನಿರ್ವಾಹಕರ ಕೊರತೆ
ಮೇ ತಿಂಗಳಿನಲ್ಲಿ ಒಟ್ಟು 9,63,332 ಪ್ರಯಾಣಿಕರು ಪ್ರಯಾಣಿಸಿದ್ದು, ಡಿಪೋಗೆ 3.43 ಕೋಟಿ ರೂ. ಆದಾಯ ಬಂದಿದೆ. ಮಹಿಳೆಯರಿಗಾಗಿ ಅನುಷ್ಠಾನಗೊಳಿಸಿದ ಶಕ್ತಿ ಯೋಜನೆಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮೇ ತಿಂಗಳಲ್ಲೇ 6,37,133 ಮಹಿಳೆಯರು ಯೋಜನೆ ಪ್ರಯೋಜನ ಪಡೆದಿದ್ದಾರೆ. ಡಿಪೋದಲ್ಲಿ 14 ಚಾಲಕರು ಮತ್ತು ನಿರ್ವಾಹಕರ ಕೊರತೆಯಿಂದಾಗಿ ಸುಗಮ ಬಸ್​ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಬಸ್​ ಡಿಪೋ ವ್ಯವಸ್ಥಾಪಕ ಸಂತೋಷ ಬೆಂಕನಕೊಪ್ಪ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net