ಎಸ್​ಐಆರ್​ ಕಾರ್ಯಕ್ಕೆ ಸಹಕಾರ ನೀಡಿ

ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​
ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ
  • ಅಕ್ಟೋಬರ್​ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ
ಕಲಬುರಗಿ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ದೋಷಪೂರಿತ ಸ್ವಚ್ಛ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಇಕ್ರಮ್​ ಶರೀಫ್​ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗವು ಎಸ್​ಐಆರ್​ ಮೂರನೇ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಿದೆ. ಜೂನ್​ 20ರಿಂದ ಜಿಲ್ಲೆಯಲ್ಲಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
2026ನೇ ಅಕ್ಟೋಬರ್​ 1 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಈ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ ಕಾರ್ಯ ನಡೆಯಲಿದೆ. ಜೂನ್​ 20 ರಿಂದ 29ರವರೆಗೆ ಚುನಾವಣಾ ಸಿಬ್ಬಂದಿಗೆ ತರಬೇತಿ, ಪೂರ್ವಸಿದ್ಧತೆ ಮುದ್ರಣ ಕಾರ್ಯ ಜರುಗಲಿದೆ. ಜೂನ್​ 30 ರಿಂದ ಜುಲೈ 29ರವರೆಗೆ ಬಿಎಲ್​ಒಗಳು ಮನೆ&ಮನೆಗೆ ಭೇಟಿ ನೀಡಿ ಅರ್ಜಿ ವಿತರಿಸಿ, ಸಂಗ್ರಹ ಮಾಡಲಿದ್ದಾರೆ. ಈ ಅವಧಿಯಲ್ಲಿ ಮತಗಟ್ಟೆಗಳ ರ್ಯಾಂಡಮೈಜೇಷನ್​ ಕಾರ್ಯ ಒಟ್ಟಿಗೆ ನಡೆಯಲಿದೆ. ಆಗಸ್ಟ್​ 5ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತಿದೆ ಎಂದರು.
ಬಿಎಲ್​ಒ ಸೂಪರ್​ವೈಸರ್​ ನೇಮಕ
ಕಲಬುರಗಿ ಜಿಲ್ಲೆಯಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ 9 ವಿಧಾನಸಭಾ ೇತ್ರಗಳಲ್ಲಿ 11,89,398 ಪುರುಷ, 11,84,171 ಮಹಿಳೆಯರು, 340 ಇತರೆ ಸೇರಿ ಒಟ್ಟು 23,73,909 ಮತದಾರರಿದ್ದು, 2,400 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ಬೂತ್​ ಲೇವಲ್​ ಆಫೀಸರ್​ ನೇಮಕ ಮಾಡಲಾಗಿದ್ದು, ಬಿ.ಎಲ್​.ಓ ಗಳ ಮೇಲುಸ್ತುವಾರಿಗೆ 275 ಜನರನ್ನು ಬಿ.ಎಲ್​.ಓ ಸೂಪರ್​ವೈಸರ್​ಗಳನ್ನು ನೇಮಕ ಮಾಡಲಾಗಿದೆ ಎಂದರು.
ಬೂತ್​ವಾರು ಶುದ್ಧ ಮತದಾರರ ಪಟ್ಟಿ ಮತ್ತು ಮ್ಯಾಪಿಂಗ್​ ಕಾರ್ಯಕ್ಕೆ ಸಹಕರಿಸಲು ಬೂತ್​ ಲೇವೆಲ್​ ಏಜೆಂಟರನ್ನು ನೇಮಕ ಮಾಡುವಂತೆ ಈಗಾಗಲೆ ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ. ಮನೆಗೆ ಬರುವ ಬಿಎಲ್​ಒಗಳಿಗೆ ಮತದಾರರು ಅಗತ್ಯ ಸಹಕಾರ ನೀಡಬೇಕು. ಎಸ್​ಐಆರ್​ ಕುರಿತು ಸಾರ್ವಜನಿಕರಲ್ಲಿ ಯಾವುದೇ ರೀತಿ ಗೊಂದಲಗಳಿದ್ದಲ್ಲಿ ಆಯಾ ಮತೇತ್ರದ ಮತದಾರರ ನೋಂದಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಇಕ್ರಮ್​ ಶರೀಫ್​ ತಿಳಿಸಿದರು.
ಸೌಲಭ್ಯ ಕೇಂದ್ರ ಸ್ಥಾಪನೆ
2022ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಗೆ ಮ್ಯಾಪಿಂಗ್​ ಮಾಡುವ ಎಸ್​.ಐ.ಆರ್​. ಕಾರ್ಯ ತೀವ್ರಗೊಳಿಸಲು ಬಿಎಲ್​ ಹಂತದಲ್ಲಿ ಸೌಲಭ್ಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಗ್ರಾಮೀಣ ವಿಭಾಗದಲ್ಲಿ ಮತದಾರರ ಸೌಲಭ್ಯ ಕೇಂದ್ರ ಸ್ಥಾಪನೆಗೆ ಜಿಲ್ಲಾ ಪಂಚಾಯಿತಿ ಸಿಇಒಗೆ ನಿರ್ದೇಶನ ನೀಡಲಾಗಿದೆ. ಬಿಎಲ್​ಒ ಮತ್ತು ಬಿಎಲ್​ಎಗಳು ಇದರ ಸದುಪಯೋಗ ಪಡೆದು ಪರಸ್ಪರ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್​ ಸಂಕನೂರ್​, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಇದ್ದರು.
"

ಕರಡು ಪಟ್ಟಿಗೆ ಆಗಸ್ಟ್​ 5 ರಿಂದ ಸೆಪ್ಟೆಂಬರ್​ 4ರವರೆಗೆ ಆೇಪಣೆ ಆಹ್ವಾನಿಸಿ ಅಕ್ಟೋಬರ್​ 3ರೊಳಗೆ ಆೇಪಣೆ ವಿಲೇವಾರಿ ಮಾಡಿ ಅಕ್ಟೋಬರ್​ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.

— ಇಕ್ರಮ್​ ಶರೀಫ್​, ಜಿಲ್ಲಾ ಚುನಾವಣಾಧಿಕಾರಿ, ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net