ನಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಿ

ನಾಯ್ಕಲ್​ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆಯನ್ನು ವಡಗೇರಾದ ಸೆಕ್ಷನ್​ ಅಧಿಕಾರಿ ಥಾಮಸ್​, ಹಿರಿಯ ಸಹಾಯಕ ಮಾರುತೇಶ್ವರ ಚವ್ಹಾಣ್​  ಶನಿವಾರ ಪರಿಶೀಲಿಸಿದರು.
ನಾಯ್ಕಲ್​ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆಯನ್ನು ವಡಗೇರಾದ ಸೆಕ್ಷನ್​ ಅಧಿಕಾರಿ ಥಾಮಸ್​, ಹಿರಿಯ ಸಹಾಯಕ ಮಾರುತೇಶ್ವರ ಚವ್ಹಾಣ್​ ಶನಿವಾರ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಸ್ಕಾಂ ಜೆಇ ಥಾಮಸ್​ ಮನವಿ
  • ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆಗೆ ಚಾಲನೆ
ಯಾದಗಿರಿ: ಸಮೀಪದ ವಿವಿಧ ಗ್ರಾಮಗಳಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ನಮ್ಮ ಸಿಬ್ಬಂದಿ ವರ್ಗ ಆರಂಭಿಸಿದ್ದು, ಗ್ರಾಹಕರು ಅವರಿಗೆ ಸಹಕರಿಸಬೇಕು ಎಂದು ವಡಗೇರಾ ಜೆಸ್ಕಾಂ ಅಧಿಕಾರಿ ಜೆಇ ಥಾಮಸ್​ ಹೇಳಿದರು.
ನಾಯ್ಕಲ್​ ಗ್ರಾಪಂ ಹಾಗೂ ಗುಲಸರಂ ಗ್ರಾಪಂಗಳಲ್ಲಿನ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮನೆಗಳಿಗೆ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಷ್ಕರಣೆ ಮಾಡುತ್ತಿದ್ದು, ಈ ವೇಳೆ ಖುದ್ದು ನಾನೇ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.
ನಂತರ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಹಾಗೂ ಮೇಲಧಿಕಾರಿಗಳ ಸೂಚನೆ ಮೇರೆಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರು ನೋಂದಣಿ ಕಾರ್ಯ ಆರಂಭಿಸಲಾಗಿದೆ. ಫಲಾನುಭವಿಗಳ ಮೊಬೈಲ್​ ಸಂಖ್ಯೆಗೆ ಒಟಿಪಿ ಸಂಖ್ಯೆಗಳು ಬರುತ್ತೆದೆ. ಆ ಸಂಖ್ಯೆ ನೋಂದಾಯಿಸಿಕೊಂಡು ಮರು ಗೃಹಲ್ಮ ಯೋಜನೆಗೆ ಅರ್ಹರಾಗುತ್ತಾರೆ ಎಂದು ಹೇಳಿದರು.
ಈಗಾಗಲೇ ಜುಲೈ 1ನೇ ತಾರಿಕಿನಿಂದ ಪರಿಷ್ಕರಣೆ ಆರಂಭವಾಗಿದ್ದು, ಶುಕ್ರವಾರ ಉಳ್ಳೆಸೂಗೂರ ಗ್ರಾಪಂ ಮತ್ತು ಹಾಲಗೇರಾ ಗ್ರಾಪಂ ವ್ಯಾಪ್ತಿಯಲ್ಲಿನ ಗೃಹಲಕ್ಷ್ಮಿ ಫಲಾನುಭವಿಗಳನ್ನು ಪರಿಷ್ಕರಣೆ ಮಾಡಲಾಗಿದೆ ಈ ವೇಳೆ ಗ್ರಾಹಕರು ನಮ್ಮ ಸಿಬ್ಬಂದಿಗೆ ಸಹಕರಿಸಬೇಕು ಎಂದು ಹೇಳಿದರು. ಹಿರಿಯ ಸಹಾಯಕ ಮಾರುತೇಶ್ವರ ಚವ್ಹಾಣ್​, ಗ್ರಾಮ ವಿದ್ಯುತ್​ ಪ್ರತಿನಿಧಿ ಮಹ್ಮದ್​ ಇಸ್ಮಾಯಿಲ್​, ಮರಿಲಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net