1872ರಲ್ಲಿ ಮೊದಲ ಗಣತಿ ನಡೆದಿದ್ದು, ಇದೀಗ ಸ್ವಾತಂತ್ರ್ಯ ಬಂದ ಬಳಿಕ ನಡೆಯುತ್ತಿರುವ 8ನೇ ಗಣತಿಯಾಗಿದೆ. ಏ.1ರಿಂದ 15ರವರೆಗೆ ಮನೆ ಗಣತಿ ನಡೆಯಲಿದ್ದು, ಸಾರ್ವಜನಿಕರಿಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಪಾಲ್ಗೊಂಡವರು ಗಣತಿದಾರರಿಗೆ ಎಸ್‌ಸಿ ಐಡಿ ನೀಡಬೇಕು. ಇನ್ನು ಜಿಲ್ಲೆಯಲ್ಲಿ ಗಣತಿಗಾಗಿ 40 ಜನರಿಗೆ ಒಬ್ಬರಂತೆ ಕ್ಷೇತ್ರ ತರಬೇತುದಾರರನ್ನು ನೇಮಿಸಲಾಗಿದೆ. ಜತೆಗೆ 11 ಮಂದಿ ಚಾರ್ಜ್ ಆಫಿಸರ್‌ಗಳಿದ್ದು, ಇವರಲ್ಲಿ ನಾಲ್ವರು ತಹಸೀಲ್ದಾರ್, 5 ಮಂದಿ ಪೌರಾಯುಕ್ತರಿದ್ದಾರೆ. ಮಲ್ಲಿಕಾರ್ಜುನ ಮತ್ತು ಸಿದ್ದಲಿಂಗಸ್ವಾಮಿ ಅವರು ಮಾಸ್ಟರ್ ತರಬೇತಿದಾರರಾಗಿದ್ದು, ಯಾವುದೇ ರೀತಿಯ ದೂರುಗಳು ಬಾರದಂತೆ ಗಣತಿದಾರರು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.