ಸಿದ್ಧಾರೂಢ ಮಠ ನಿರ್ಮಾಣ ಶುರು

ನಿಂಬರ್ಗಾದಲ್ಲಿ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಮಠ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಮಹಾಲಿಂಗಯ್ಯ ಸ್ವಾಮಿ, ದಿಗಂಬರಾವ ಕುಲಕರ್ಣಿ, ಸಿದ್ದಣ್ಣ ಸನಗುಂದಿ ಇತರರಿದ್ದರು.
ನಿಂಬರ್ಗಾದಲ್ಲಿ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಮಠ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಮಹಾಲಿಂಗಯ್ಯ ಸ್ವಾಮಿ, ದಿಗಂಬರಾವ ಕುಲಕರ್ಣಿ, ಸಿದ್ದಣ್ಣ ಸನಗುಂದಿ ಇತರರಿದ್ದರು.
Published on

ಆಳಂದ: ನಿಂಭರ್ಗಾದಲ್ಲಿ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಮಠ ನಿರ್ಮಾಣ ಕಾಮಗಾರಿಗೆ ಮಹಾಲಿಂಗಯ್ಯ ಸ್ವಾಮಿಗಳು ಮಂಗಳವಾರ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿ, ಪವಾಡ ಪುರುಷರಾದ ಶ್ರೀ ಸಿದ್ಧಾರೂಢರ ಭವ್ಯ ಮಠ ನಿರ್ಮಾಣವಾಗಲಿದೆ. ಮಠದ ಸಮಗ್ರ ನಿರ್ವಹಣೆ ಉದ್ದೇಶದಿಂದ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಮಠದ ಟ್ರಸ್ಟ್​ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು. ಸದಾಶಿವ ಎಸ್​. ಮಾಡಿಯಾಳ (ಅಧ್ಯಕ್ಷ), ಶರಣಬಸಪ್ಪ ಎಚ್​. ಸಲಗರ (ಉಪಾಧ್ಯಕ್ಷರು), ಈರಣ್ಣ ಎಂ. ಸುತಾರ್​ (ಕಾರ್ಯದರ್ಶಿ) ಹಾಗೂ 20 ಜನರನ್ನು ಕಾರ್ಯಕಾರಣಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಪ್ರಮುಖರಾದ ದಿಗಂಬರಾವ ಕುಲಕರ್ಣಿ, ಬಾಬು ಹಳಿಮನಿ, ಸುಭಾಷ ಹಳ್ಳಿ, ಬಲವಂತಪ್ಪ ಬಿಬ್ರಾಣಿ, ಮಲ್ಕಪ್ಪ ನಿಂಗಶೆಟ್ಟಿ, ಶರಣಬಸಪ್ಪ ಸಂಗೋಳಗಿ, ಸಿದ್ದು ಉಪ್ಪಿನ್​, ಸಿದ್ದಾರೂಡ ಅಟ್ಟೂರ, ಅಣ್ಣಾರಾವ ಪಾಟೀಲ್​, ಹನುಮಂತರಾವ್​ ಜವಳಿ ಇತರರಿದ್ದರು. ಮಠ ನಿರ್ಮಾಣಕ್ಕಾಗಿ ಭೂಮಿ ನೀಡಿದ ಸಿದ್ದಣ್ಣ ಸನಗುಂದಿ ದಂಪತಿಯನ್ನು ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net