ಕಾನ್‌ಸ್ಟೆಬಲ್ ಪರೀಕ್ಷೆ: ಒಂದೇ ದಿನದಲ್ಲಿ ಕೀ ಉತ್ತರ ಪ್ರಕಟಿಸಿದ ಕೆಇಎ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Published on

ಪ್ರಮುಖ ಮುಖ್ಯಾಂಶಗಳು

  • ಈ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಕೆಇಎ ಪೋರ್ಟಲ್ನಲ್ಲಿನ ಲಿಂಕ್ ಮೂಲಕ ಸಲ್ಲಿಸಬಹುದು. ಇದಕ್ಕೆ ಸೆ.9ರಂದು ಬೆಳಿಗ್ಗೆ 10.30ರವರೆಗೆ ಅವಕಾಶ
ಬೆಂಗಳೂರು: ನಗರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್/ಡಿಎಆರ್) ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಭಾನುವಾರ ಲಿಖಿತ ಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದೇ ದಿನದಲ್ಲಿ ಅದರ ಕೀ ಉತ್ತರಗಳನ್ನೂ ಪ್ರಕಟಿಸಿದೆ.
ಈ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಕೆಇಎ ಪೋರ್ಟಲ್ನಲ್ಲಿನ ಲಿಂಕ್ ಮೂಲಕ ಸಲ್ಲಿಸಬಹುದು. ಇದಕ್ಕೆ ಸೆ.9ರಂದು ಬೆಳಿಗ್ಗೆ 10.30ರವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದರು.
ಪೂರ್ಣ ಮಾಹಿತಿಯೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು. ಪ್ರತಿ ಆಕ್ಷೇಪಣೆಗೂ 25 ರೂ. ಪಾವತಿಸಬೇಕು. ವಿಷಯ ತಜ್ಞರ ಸಮಿತಿ ಆಕ್ಷೇಪಣೆಗಳನ್ನು ಪರಿಶೀಲಿಸಿ ಪ್ರಕಟಿಸುವ ಕೀ ಉತ್ತರಗಳು ಅಂತಿಮವಾಗಿರುತ್ತವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net