ಎಸ್‌ಐಆರ್ ಬುಡಮೇಲಿಗೆ ಷಡ್ಯಂತ್ರ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Published on
ಬೆಂಗಳೂರು: ನ್ಯಾಯಸಮ್ಮತವಾಗಿ ನಡೆಯಬೇಕಾದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಸೋಮವಾರ ಬಿಜೆಪಿ, ಜೆಡಿಎಸ್ ನಿಯೋಗದಿಂದ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಕುಮ್ಮಕ್ಕಿನಿಂದ ಎಸ್‌ಐಆರ್‌ನಲ್ಲಿ ಅಕ್ರಮ ಮಾಡಲಾಗುತ್ತಿದೆ. ಇದರ ವಿರುದ್ಧ ಪ್ರತಿಭಟಿಸಿ ಮನವಿ ನೀಡಲಾಗಿದೆ ಎಂದರು.
ಎಸ್‌ಐಆರ್ ಸಂಬಂಧ ಅಕ್ರಮವಾಗಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಮಾಹಿತಿ ರವಾನಿಸಲಾಗುತ್ತಿದೆ. ತಮಗೆ ಬೇಕಾದ ಪ್ರದೇಶ, ಮದರಸ ಹಾಗೂ ಮಸೀದಿಗಳಲ್ಲಿ ಎಸ್‌ಐಆರ್ ನಡೆಸಲಾಗುತ್ತಿದೆ. ಮೊದಲು ಬೇರೆ ಬೇರೆ ದೂರು ನೀಡಿದ್ದೇವೆ. ಈಗ ಉನ್ನತ ಮಟ್ಟದ ನಿಯೋಗದಿಂದ ದೂರು ನೀಡಿ ಆಗ್ರಹಿಸಿದ್ದೇವೆ. ಆದರೂ ಕ್ರಮ ಆಗಿಲ್ಲ. ಸ್ಥಳೀಯ ಶಾಸಕರ ಚಿತ್ರವನ್ನು ಬಿಎಲ್ಒಗಳೇ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕ್ರಮವಾಗಬೇಕು.
ಮೋಸದಿಂದ ಎಸ್‌ಐಆರ್ ನಡೆದರೆ ದೇಶದ ಭದ್ರತೆಗೆ ಧಕ್ಕೆಯಾಗಲಿದೆ. ಎಸ್‌ಐಆರ್‌ನಲ್ಲಿ ಹೆಸರು ತೆಗೆದು ಹಾಕಿದರೆ ಗ್ಯಾರಂಟಿ ಕೊಡಲ್ಲ ಎಂದು ಮುಖ್ಯಮಂತ್ರಿ ಬೇಕೆಂತಲೇ ಹೇಳಿದ್ದಾರೆ. ಇದರ ಉದ್ದೇಶ ಏನು ಎಂದು ತಿಳಿಯಬೇಕು. ಇದನ್ನು ಈಗ ಏಕೆ ಘೋಷಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net