ಪಾರದರ್ಶಕ, ನ್ಯಾಯಸಮ್ಮತ ಪ್ರಕ್ರಿಯೆ ಸಲುವಾಗಿ ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ ಪರಿಚಯಿಸಿರುವುದು ಸ್ವಾಗತಾರ್ಹ. ಆದರೆ, ಕೆಲವು ನಿಯಮಗಳಲ್ಲಿ ಅಸ್ಪಷ್ಟತೆ, ತೊಡಕು ಮತ್ತು ಸಂಭವನೀಯ ಕಾನೂನು ವಿವಾದ ಎದುರಾಗುವ ಸಾಧ್ಯತೆ ಇದೆ. ಅವುಗಳನ್ನು ತಪ್ಪಿಸಲು ಸ್ಪಷ್ಟೀಕರಣ, ಮಾರ್ಪಾಡು ಮತ್ತು ತಿದ್ದುಪಡಿ ಅಗತ್ಯ ಇರುತ್ತದೆ ಎಂದು ಆಕ್ಷೇಪಣಾ ಪತ್ರದಲ್ಲಿ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.