ನಾವು ಯಾರೋ ಎಂಟು ಜನ ಕುಳಿತುಕೊಂಡು ತೆಗೆದುಕೊಂಡ ನಿರ್ಧಾರವನ್ನು ಒಪ್ಪಲ್ಲ. ರವೀಂದ್ರನಾಥ್ ಟಾಗೋರ್, ಗಾಂಧೀಜಿ, ಬೋಸ್, ವಲ್ಲಬಭಾಯಿ ಪಟೇಲರು ಎಷ್ಟು ಹಾಡುತ್ತಿದ್ದರೋ ನಾವು ಅಷ್ಟನ್ನೇ ಹಾಡುತ್ತೇವೆ ಎಂದಿದ್ದಾರೆ. ಬ್ರಿಟಿಷರಿಂದ ಪಿಂಚಣಿ ತೆಗೆದುಕೊಂಡವರು ಯಾರೆಂದು ಎಲ್ಲರಿಗೂ ತಿಳಿದಿದೆ. ನಮಗೆ ದೇಶಭಕ್ತಿ ಬಗ್ಗೆ ಬಿಜೆಪಿ ಅಥವಾ ಆರ್ಎಸ್ಎಸ್ನಿಂದ ಕಲಿಯುವುದಿಲ್ಲ ಎಂದು ಹೇಳಿದ್ದಾರೆ.