ಪ್ರಯಾಣಿಕ ಸ್ನೇಹಿ ಸಮಯ ಬದಲಾವಣೆ ಮಾಡಿದ ಸ್ಟಾರ್ ಏರ್ ಸಂಸ್ಥೆಗೆ ಅಭಿನಂದನೆ

,
,
Published on
ಕಲಬುರಗಿ: ಗುಲ್ಬರ್ಗ ಬೆಂಗಳೂರು ಮಧ್ಯೆ ಸ್ಟಾರ್ ಏರ್ ಸಂಸ್ಥೆಯವರು ಜೂನ್ 10 ರಿಂದ ವಿಮಾನ ಸಂಚಾರ ಆರಂಭಿಸುವ ವೇಳಾಪಟ್ಟಿಯನ್ನು ಪ್ರಯಾಣಿಕ ಸ್ನೇಹಿಯಾಗಿ ಬದಲಾವಣೆ ಮಾಡಿರುವುದಕ್ಕೆ ಸಂಸ್ಥೆಗೆ ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಹಾಗೂ ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಸದಸ್ಯರು ಮತ್ತು ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಸಂತಸ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಏರ್ ಸಂಸ್ಥೆಯು ಜೂನ್ 10 ರಿಂದ ಸಂಜೆಯ ಬದಲು ಬೆಳಿಗ್ಗೆ 6.30 ಕ್ಕೆ ಬೆಂಗಳೂರಿಂದ ಹೊರಟು ಕಲಬುರಗಿಗೆ 7.40 ಕ್ಕೆ ತಲುಪುವ ಹಾಗೆ ಮತ್ತು ಇಲ್ಲಿಂದ 8.10 ಕ್ಕೆ ಹೊರಟು 9:20ಕ್ಕೆ ಬೆಂಗಳೂರು ತಲುಪುವಂತೆ ಸಮಯ ಬದಲಾವಣೆ ಮಾಡಿರುವುದು ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಅತ್ಯಂತ ಸೂಕ್ತವಾದದ್ದು ಹಾಗೂ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ. ಸಮಯ ಬದಲಾವಣೆಯ ಬಗ್ಗೆ ಪ್ರಯತ್ನಿಸಿದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನೆ ಹಾಗೂ ಕಲಬುರಗಿ - ಬೆಂಗಳೂರು ನಡುವೆ ಮುಂಜಾನೆ ಹಾಗೂ ಸಾಯಂಕಾಲ ಎರಡು ಬಾರಿ ವಿಮಾನ ಸೇವೆ ಆರಂಭಿಸಿದರೆ ಇನ್ನಷ್ಟು ಅನುಕೂಲಕರ. ರಾಜಧಾನಿಯಲ್ಲಿ ಕೆಲಸ ಮುಗಿಸಿ ಒಂದೇ ದಿನದಲ್ಲಿ ಕಲಬುರಗಿ ಸುತ್ತು ಮುತ್ತಲ ಜಿಲ್ಲೆಗಳಿಗೆ ವಾಪಸ್ ಪ್ರಯಾಣಿಸಲು ಅನುಕೂಲವಾಗುವಂತೆ ಸ್ಟಾರ್ ಏರ್ ಸಂಸ್ಥೆ ಚಿಂತನೆ ಮಾಡಲಿ ಎಂದು ಸಲಹೆ ನೀಡಿದ್ದಾರೆ ಕೇಂದ್ರ ಸರಕಾರವು 0.2 ಉಡಾನ್ ಯೋಜನೆ ಅಡಿಯಲ್ಲಿ ಕಲಬುರಗಿಯನ್ನು ಸೇರಿಸಿ ಮುಂಬೈ ಮಂಗಳೂರು ನವದೆಹಲಿ ಸೇರಿದಂತೆ ಇತರೆಡೆಗಳಿಗೂ ಸಂಪರ್ಕ ಕಲ್ಪಿಸುವಂತಾಗಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net