ಉಚಿತ ಆರೋಗ್ಯ ಶಿಬಿರದಲ್ಲಿ ಹೃದಯ ತಜ್ಞ ಡಾ.ಮಹಾಂತೇಶ ಚರಂತಿಮಠ ಮತ್ತು ವೈದ್ಯರ ತಂಡವು 200ಕ್ಕೂ ಅಧಿಕ ಜನರಿಗೆ ಉಚಿತವಾಗಿ ರಕ್ತ ಪರೀಕ್ಷೆ, ಇಕೋ, ಇಸಿಜಿ ತಪಾಸಣೆ ನಡೆಸಿ ಔಷಧಗಳು ಮತ್ತು ವೈದ್ಯಕೀಯ ಸಲಹೆ ನೀಡಿತು. ದಾಸರಹಳ್ಳಿ ನಂಜುಂಡಯ್ಯ, ಪಿ.ಎಸ್. ಸಿದ್ದಗಂಗಯ್ಯ, ಎ.ಎಸ್. ಆನಂದಪ್ಪಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿದರು. ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಪೂಜಾ ಸಮಿತಿ ಅಧ್ಯಕ್ಷ ಟಿ.ಎಸ್. ಉಮಾಶಂಕರ, ಕನ್ನಡ ಹೋರಾಟಗಾರ ಫಾಲನೇತ್ರ, ಪ್ರದೀಪ ಕಂಕನವಾಡಿ, ಡಾ. ಪಿಕೆಎಂ ಪ್ರಶಾಂತ್ ಮತ್ತು ಹಾಲ್ವೇನು ವೀರಭದ್ರಯ್ಯ ಸೇರಿ ಹಲವರು ಉಪಸ್ಥಿತರಿದ್ದರು.