ವಿಕಸಿತ ಭಾರತಕ್ಕೆ ಸಂಘಟಿತ ಕಾರ್ಯ ಅಗತ್ಯ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಐದು ವರ್ಷ ಅವಧಿ ಪೂರೈಸಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೆಜ್ಜೆಗುರುತು ಸಾಧನಾ ವರದಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಸಿ.ಎಂ. ಜೋಶಿ, ಪ್ರೊ.ಆರ್​.ಆರ್​.ಬಿರಾದಾರ್​ ಇತರರಿದ್ದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಐದು ವರ್ಷ ಅವಧಿ ಪೂರೈಸಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹೆಜ್ಜೆಗುರುತು ಸಾಧನಾ ವರದಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಸಿ.ಎಂ. ಜೋಶಿ, ಪ್ರೊ.ಆರ್​.ಆರ್​.ಬಿರಾದಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಪ್ರತಿಪಾದನೆ
  • ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಭಿನಂದನೆ
ಕಲಬುರಗಿ: ಉನ್ನತ ಶಿಕ್ಷಣ ಗುಣಮಟ್ಟ ವೃದ್ಧಿ ಜತೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ತಂಡವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಧಾನಿ ಆಶಯದಂತೆ ಭಾರತ 2047ರ ವೇಳೆಗೆ ವಿಕಸಿತವಾಗಲು ಸಾಧ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆ ಕಾರ್ಯನಿರ್ವಹಣೆ ಪರಿಶೀಲನೆ ಹಾಗೂ ಪ್ರೊ.ಬಟ್ಟು ಸತ್ಯನಾರಾಯಣ ಐದು ವರ್ಷ ಕುಲಪತಿಗಳಾಗಿ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿದ ಅವರು, 2021ರ ಜುಲೈನಲ್ಲಿ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ವಿವಿ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡಿದ್ದೇನೆ ಎಂದರು.
ಸಂಪನ್ಮೂಲ, ದಾಖಲೆಗಳು, ಭೋದಕ/ಭೋದಕೇತರ ಸಿಬ್ಬಂದಿ ಕೊರತೆ, ಅನುದಾನ ಅಲಭ್ಯತೆ ಸೇರಿ ಹಲವಾರು ತೊಂದರೆ, ಸವಾಲುಗಳ ಮಧ್ಯೆಯೂ ಹಂತ-ಹಂತವಾಗಿ ಎಲ್ಲವನ್ನು ಸರಿಪಡಿಸಿ ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಿಯುಕೆ ಶೈಕ್ಷಣಿಕ, ಸಂಶೋಧನಾ ಕೇಂದ್ರವಾಗಿ ಗುರುತಿಸಿಕೊಳ್ಳುವಂತೆ ಮಾಡಿರುವುದಾಗಿ ಹೇಳಿದರು.
ಹೈಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ ಸಿ.ಎಂ. ಜೋಶಿ ಮಾತನಾಡಿ, ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರ ಕಠಿಣ ಪರಿಶ್ರಮ, ಬದ್ಧತೆ, ಪರಿಣಾಮಕಾರಿ ನಾಯಕತ್ವ, ಉತ್ಸಾಹ, ಗುರಿ ಸಾಧನೆ ಛಲದಿಂದಾಗಿ ವಿವಿ ಶೈಕ್ಷಣಿಕ, ಆಡಳಿತಾತ್ಮಕವಾಗಿ ಗುರಿ ಸಾಧನೆ ತಲುಪಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಲಸಚಿವ ಪ್ರೊ.ಆರ್​.ಆರ್​. ಬಿರಾದಾರ್​ ಮಾತನಾಡಿ, ವಿವಿ ಅಭಿವೃದ್ಧಿ, ಸಂಶೋಧನೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಪ್ರೊ.ಬಟ್ಟು ಸತ್ಯನಾರಾಯಣ ಪರಿಶ್ರಮ ಅಪಾರವಾಗಿದೆ ಎಂದರು. ಕಾರ್ಯಕ್ರಮ ಸಂಚಾಲಕ ಪ್ರೊ.ಚನ್ನವಿರ ಆರ್​.ಎಂ. ಸ್ವಾಗತಿಸಿದರು. ಡಾ.ವೈಷ್ಣವಿ ನಿರೂಪಣೆ ಮಾಡಿದರು. ಡಾ.ಪಂಡಿತ ವಂದಿಸಿದರು. ಐದು ವರ್ಷದಲ್ಲಿ ಮಾಡಿದ ಕಾರ್ಯಗಳ ಮಾಹಿತಿ ಒಳಗೊಂಡ ಕುಲಪತಿಗಳ ದೂರದೃಷ್ಟಿ, ವಿವಿ ಅಭಿವೃದ್ಧಿಯ ಹೆಜ್ಜೆಗುರುತು ಎಂಬ ಸಾಧನಾ ವರದಿ ಬಿಡುಗಡೆ ಮಾಡಲಾಯಿತು.
"

ಪ್ರೊ.ಬಟ್ಟು ಸತ್ಯನಾರಾಯಣ ನೀಡಿದ ಅಮೂಲ್ಯ ಕೊಡುಗೆ, ಮಾರ್ಗದರ್ಶನ, ಅಭಿವೃದ್ಧಿ ಮತ್ತು ಸಾಧನೆ ಪಥವನ್ನು ವಿದ್ಯಾರ್ಥಿಗಳ ಭವಿಷ್ಯ, ದೇಶದ ಹಿತಕ್ಕಾಗಿ ಎಲ್ಲ ಭೋದಕ-ಭೋದಕೇತರ ಸಿಬ್ಬಂದಿ ಮುಂದುವರಿಸಬೇಕು.

— > ಸಿ.ಎಂ.ಜೋಶಿ ಹೈಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net