ಮನಸ್ಸಿನ ಏಕಾಗ್ರತೆಗೆ ನಿರಂತರ ಪ್ರಯತ್ನ ಅಗತ್ಯ

ರೈನಾಪುರ ಗ್ರಾಮದ ಶ್ರದ್ಧಾನಂದ ಆಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾ ಜಪಯ ಕಾರ್ಯಕ್ರಮದಲ್ಲಿ  ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು  ಶ್ರದ್ಧಾನಂದ ಆಶ್ರಮ ಮಠಾಧ್ಯೆ ಮುದ್ದಮ್ಮತಾಯಿ, ಪಾರ್ವತೆಮ್ಮತಾಯಿ ಗೌರವಿಸಿದರು.
ರೈನಾಪುರ ಗ್ರಾಮದ ಶ್ರದ್ಧಾನಂದ ಆಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾ ಜಪಯ ಕಾರ್ಯಕ್ರಮದಲ್ಲಿ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ಶ್ರದ್ಧಾನಂದ ಆಶ್ರಮ ಮಠಾಧ್ಯೆ ಮುದ್ದಮ್ಮತಾಯಿ, ಪಾರ್ವತೆಮ್ಮತಾಯಿ ಗೌರವಿಸಿದರು.
Published on
ಯರಗಟ್ಟಿ: ಸದಾ ಚಂಚಲತೆಯಿಂದ ಕೂಡಿದ ಮನುಷ್ಯನ ಮನಸ್ಸುನ್ನು ಏಕಾಗ್ರತೆಯಲ್ಲಿ ಇಟ್ಟುಕೊಳ್ಳಲು ನಿರಂತರ ಪ್ರಯತ್ನ, ಸಾಧನೆ, ಪರಮಾತ್ಮನ ಸಾಾತ್ಕಾರದಿಂದ ಮಾತ್ರ ಸಾಧ್ಯ ಎಂದು ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ತಾಲೂಕಿನ ರೈನಾಪುರ ಗ್ರಾಮದ ಶ್ರದ್ಧಾನಂದ ಆಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾ ಜಪಯ ಕಾರ್ಯಕ್ರಮ ಹಾಗೂ 18ನೇ ವೇದಾಂತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಗುರುವಿನ ಮಾರ್ಗದರ್ಶನ, ಸತ್ಸಂಗಗಳ ಮೂಲಕ ಬದುಕನ್ನು ಹಸನು ಮಾಡಿಕೊಂಡು ಮನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು ಎಂದರು. ಶಿಂದೋಗಿ ಮುಕ್ತಾನಂದ ಸ್ವಾಮೀಜಿ ಮಾತನಾಡಿದರು. ಅಮಲಝರಿಯ ಜ್ಞಾನಮಯಾನಂದ ಸ್ವಾಮೀಜಿ, ಶ್ರದ್ಧಾನಂದ ಆಶ್ರಮ ಮಠಾಧ್ಯೆ ಮುದ್ದಮ್ಮತಾಯಿ, ಪಾರ್ವತೆಮ್ಮತಾಯಿ, ಮಲ್ಲಯ್ಯ ಸ್ವಾಮೀಜಿ, ಅನುಸೂಯಾ ತಾಯಿ, ಗುತ್ತಿಗೆದಾರ ಬಿ.ಜೆ.ಜೋಗಿ, ಬಸವರಾಜ ಕೌಜಲಗಿ, ರಾಜು ಕಳ್ಳಿಗುದ್ದಿ, ಚಂದ್ರಶೇಖರ ಅಳಗೋಡಿ, ಗೋವಿಂದ ಕಡೆಮನಿ, ಗೋಪಾಲ ಕಡೆಮನಿ, ವೆಂಕಣ್ಣ ಹುರಕನರ, ಶ್ರೀನಿವಾಸ ಶಿದ್ನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net