ಗುರುವಾರ ಕಾಮಗಾರಿ ಪಗತಿ ಪರಿಶೀಲಿಸಿದ ಅವರು, ನಗರೋತ್ಥಾನ ಯೋಜನೆಯಡಿ 1.20 ಕೋಟಿ ರೂ. ಅನುದಾನದಲ್ಲಿ ಕೆಲಸ ನಡೆಯುತ್ತಿದೆ. ಮೊದಲ ಹಂತದಲ್ಲಿ ಲಾಡ್ಜಿಂಗ್ ಕ್ರಾಸ್ನಿಂದ ಬಸ್ ಡಿಪೋವರೆಗೆ 925 ಮೀಟರ್ ರಸ್ತೆ ಮಧ್ಯೆ ಡಿವೈಡರ್ ಮತ್ತು 35 ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆ ನಡೆಯಲಿದೆ. ಡಿವೈಡರ್ ಮಧ್ಯೆ ವಿವಿಧ ಗಿಡಗಳನ್ನು ನೆಡಲಾಗುವುದು. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚಾಗಲಿದೆ. ಮೂರು ತಿಂಗಳಲ್ಲಿ ಕೆಲಸ ಮುಗಿಯಲಿದೆ. ಬರುವ ದಿನಗಳಲ್ಲಿ ಶಹಾಬಾದ್ ಹಾಗೂ ಬಸ್ ನಿಲ್ದಾಣ ರಸ್ತೆಯಲ್ಲಿಯೂ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.