ನಿಗದಿತ ಅವಧಿಯೊಳಗೆ ಕೆಲಸ ಮುಗಿಸಿ

ಗುರುಮಠಕಲ್​ ತಾಲೂಕಿನ ಚಿನ್ನಾಕಾರ್​ ಕ್ರಾಸ್​ ಬಳಿ 9.90 ಕೋಟಿ ರೂ. ವೆಚ್ಚದಲ್ಲಿ ಮತೇತ್ರದ ಸಿಂದಗಿ&ಕೊಡಂಗಲ್​ ರಾಜ್ಯ ಹೆದ್ದಾರಿ 16 ಮುಖ್ಯ ರಸ್ತೆ ಆಯ್ದು ಭಾಗಗಳಲ್ಲಿ ಮರು ಡಾಂಬರೀಕರಣ ಸೇರಿ ವಿವಿಧ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಶಿಲನ್ಯಾಸ ನೆರವೇರಿಸಿದರು. ತಹಸೀಲ್ದಾರ್​ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಅಮರೇಶ ಪಾಟೀಲ್​, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ, ಎಇಇ ಪರಶುರಾಮ ಇತರರಿದ್ದರು
ಗುರುಮಠಕಲ್​ ತಾಲೂಕಿನ ಚಿನ್ನಾಕಾರ್​ ಕ್ರಾಸ್​ ಬಳಿ 9.90 ಕೋಟಿ ರೂ. ವೆಚ್ಚದಲ್ಲಿ ಮತೇತ್ರದ ಸಿಂದಗಿ&ಕೊಡಂಗಲ್​ ರಾಜ್ಯ ಹೆದ್ದಾರಿ 16 ಮುಖ್ಯ ರಸ್ತೆ ಆಯ್ದು ಭಾಗಗಳಲ್ಲಿ ಮರು ಡಾಂಬರೀಕರಣ ಸೇರಿ ವಿವಿಧ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರ ಶಿಲನ್ಯಾಸ ನೆರವೇರಿಸಿದರು. ತಹಸೀಲ್ದಾರ್​ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಅಮರೇಶ ಪಾಟೀಲ್​, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ, ಎಇಇ ಪರಶುರಾಮ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಕಂದಕೂರ ಸೂಚನೆ
  • 9.90 ಕೋಟಿ ರೂ. ವಿವಿಧ ಕಾಮಗಾರಿಗೆ ಶಿಲಾನ್ಯಾಸ
ಗುರುಮಠಕಲ್​: ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅಧಿಕಾರಿಗಳು ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸುವಂತೆ ಶಾಸಕ ಶರಣಗೌಡ ಕಂದಕೂರ ಸಂಬಂಧಿಸಿದ ಅಧಿಕಾರಿಗಳಿಗೆ ಕಡಕ್​ ಸೂಚನೆ ನೀಡಿದರು.
ತಾಲೂಕಿನ ಚಿನ್ನಾಕಾರ್​ ಕ್ರಾಸ್​ ಬಳಿ ಬುಧವಾರ ಕೆಕೆಆರ್​ಡಿಬಿ ಮೈಕ್ರೋ ಸಾಮಾನ್ಯ ಯೋಜನೆ ಅಡಿಯಲ್ಲಿ 9.90 ಕೋಟಿ ರೂ.ವೆಚ್ಚದಲ್ಲಿ ಮತೇತ್ರದ ಸಿಂದಗಿ&ಕೊಡಂಗಲ್​ ರಾಜ್ಯ ಹೆದ್ದಾರಿ 16 ಮುಖ್ಯ ರಸ್ತೆ ಆಯ್ದು ಭಾಗಗಳಲ್ಲಿ ಮರು ಡಾಂಬರೀಕರಣ ಹಾಗೂ ಗುರುಮಠಕಲ್​ ಪಟ್ಟಣದ ರಸ್ತೆ ಅಗಲೀಕರಣ ಮತ್ತು ಬ್ರಿಡ್ಜ್​ ನಿರ್ಮಾಣ ಹಾಗೂ ಗುರುಮಠಕಲ್​ ಪಟ್ಟಣದಲ್ಲಿ ಸೌಂದಯೀರ್ಕರಣ ಮತ್ತು ಆಧುನಿಕ ಬಸ್​ ಸ್ಟಾ$್ಯಂಡ್​ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ೇತ್ರದ ಅಭಿವೃದ್ಧಿಗೆ ನಾವು ಸರ್ಕಾರದ ಹಂತದಲ್ಲಿ ಸಾಕಷ್ಟು ಶ್ರಮಪಟ್ಟು ಅನುದಾನ ತರುತ್ತೇವೆ. ಅದು ಸದ್ಬಳಕೆಯಾದಾಗ ಮಾತ್ರ ಜನತೆಗೆ ಅನುಕೂಲವಾಗುವದಲ್ಲದೆ, ನಾವು ಪಟ್ಟ ಶ್ರಮ ಸಾರ್ಥಕವಾಗುತ್ತದೆ. ಇದು ಅಂತಾರಾಜ್ಯ ಸಂಪರ್ಕೀಸುವ ಪ್ರಮುಖ ರಸ್ತೆ, ಗಡಿಭಾಗದ ಜನರು ತಮ್ಮ ದೈನಂದಿನ ಕಾರ್ಯಗಳಿಗಾಗಿ ಗುರುಮಠಕಲ್​, ತೆಲಂಗಾಣದ ನಾರಾಯಣಪೇಟಗೆ ಹೆಚ್ಚಾಗಿ ತೆರಳುತ್ತಾರೆ ಎಂದು ಹೇಳಿದರು.
ಅಲ್ಲದೆ ಹೈದರಾಬಾದ್​ಗೆ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಭಾರಿ ವಾಹನಗಳ ಓಡಾಟ ಹೆಚ್ಚಾಗಿದೆ. ಅದಕ್ಕಾಗಿ ರಸ್ತೆಯನ್ನು ದುರಸ್ಥಿಗೊಳಿಸಲಾಗುತ್ತಿದೆ. ಗುತ್ತಿಗೆದಾರರು ಹಾಗೂ ನಿರ್ವಹಣೆ ಮಾಡುವ ಲೋಕೋಪಯೋಗಿ ಅಧಿಕಾರಿಗಳು ಗುಣಮಟ್ಟದಿಂದ ಕಾಮಗಾರಿ ಕೈಗೊಂಡು ನಿಗದಿತ ಅವಧಿಯೊಳಗೆ ಮುಗಿಸಬೇಕು ಎಂದು ತಾಕೀತು ಮಾಡಿದರು.
ಇನ್ನೂ ಗುರಮಠಕಲ್​ ಪಟ್ಟಣದಲ್ಲಿ ಬೀದಿ ದೀಪಗಳು ಅಳವಡಿಸಿದ ಮೇಲೆ ಅವುಗಳ ನಿರ್ವಹಣೆ ಮಾಡುವ ಜವಾಬ್ದಾರಿ ಪುರಸಭೆ ಅಧಿಕಾರಿಗಳದ್ದು. ಪಟ್ಟಣದ ಉದ್ಯಾನವನ ಸೌಂದಯೀರ್ಕರಣಕ್ಕೆ 50 ಲಕ್ಷ ನೀಡಲಾಗಿದೆ. ಅಲ್ಲದೆ, ಕಾಲವಾರ ಮತ್ತು ಅಂಬಿಗರ ಚೌಡಯ್ಯನವರ ವೃತ್ತದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೂ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.
ಈ ವೇಳೆ ತಹಸೀಲ್ದಾರ್​ ಚನ್ನಮಲ್ಲಪ್ಪ ಂಟಿ, ತಾಪಂ ಇಒ ಅಮರೇಶ ಪಾಟೀಲ್​, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ, ಎಇಇ ಪರಶುರಾಮ, ಸಿಪಿಐ ದೌಲತ್​ ಎನ್​.ಕೆ, ಜೆಡಿಎಸ್​ ಜಿಲ್ಲಾದ್ಯಕ್ಷ ಸುಭಾಶಚಂದ್ರ ಕಟಕಟಿ, ಪಿಎಲ್​ಡಿ ಬ್ಯಾಂಕ್​ ಅದ್ಯಕ್ಷ ರಾಮಣ್ಣ ಯಡ್ಡಳ್ಳಿ, ಮುಖಂಡರಾದ ಸಿದ್ದರಾಮರಡ್ಡಿ ಗುಂಜನೂರ, ಅಜಯರಡ್ಡಿ ಯಲ್ಹೇರಿ, ಶರಣು ಆವಂಟಿ, ರುನಾಥರೆಡ್ಡಿ ಗವಿನೋಳ್​, ಮಹೇಂದ್ರರಡ್ಡಿ ಕಂದಕೂರ, ಬಸಣ್ಣ ದೇವರಹಳ್ಳಿ, ಬಸವರಾಜ ದಾಸರ, ಆನಂದ ವಡವಟ್​, ಬಾಬು, ವೆಂಕಟೇಶ ಪೂಜಾರಿ, ಮೌಲಾನಾ ಸಾಬ್​, ಹಣಮಂತ ಚಿನ್ನಾಕಾರ, ಸಂದೀಪ ಚಿನ್ನಾಕಾರ, ಪಿಡಿಒ ಜಯಶ್ರೀ ಇದ್ದರು.
ಸ್ಥಳದಲ್ಲೇ ಇದ್ದು ಕೆಲಸ ಮಾಡಿ
ಸಧ್ಯ ಮಳೆಗಾಲ ಆರಂಭಗೊಂಡಿದ್ದು ಗ್ರಾಮೀಣ ಭಾಗದಲ್ಲಿ ಮನೆಗಳು ಬಿರುಕು ಬಿಡುವುದು ಮತ್ತು ಹಳೇ ಮನೆಗಳು ನೆಲಕಚ್ಚುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿರಬೇಕು. ಮೇಲಧಿಕಾರಿಗಳ ಸೂಚನೆಗೆ ಕಾಯದೆ ತಕ್ಷಣ ಕಾಯೋರ್ನ್ಮುಖರಾಗಬೇಕು. ವಿಶೇಷವಾಗಿ ಮಳೆಗಾಲದಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುವ ಸಂಭವ ಹೆಚ್ಚಿರುವ ಕಾರಣ ಗ್ರಾಮೀಣ ಭಾಗದಲ್ಲಿ ನೀರಿನ ಟ್ಯಾಂಕ್​ ಸ್ವಚ್ಛಗೊಳಿಸಬೇಕು ಎಂದು ಸ್ಥಳದಲ್ಲಿದ್ದ ತಹಸೀಲ್ದಾರ್​ಗೆ ಶಾಸಕ ಕಂದಕೂರ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net