ಸಮುದಾಯ ಭವನಕ್ಕೆ 5 ಎಕರೆ ಜಮೀನು

ಸವದತ್ತಿ ಹಾಲುಮತ ಸಮುದಾಯದಿಂದ ಶಾಸಕ ವಿಶ್ವಾಸ ವೈದ್ಯರನ್ನು ಸನ್ಮಾನಿಸಲಾಯಿತು. ಅಶ್ವತ್ಥ ವೈದ್ಯ, ಜಿ.ಜಿ.ಕಣವಿ, ಡಿ.ಡಿ.ಟೋಪೋಜಿ, ಮಾರುತಿ ಬಸಳಿಗುಂದಿ ಇತರರಿದ್ದರು.
ಸವದತ್ತಿ ಹಾಲುಮತ ಸಮುದಾಯದಿಂದ ಶಾಸಕ ವಿಶ್ವಾಸ ವೈದ್ಯರನ್ನು ಸನ್ಮಾನಿಸಲಾಯಿತು. ಅಶ್ವತ್ಥ ವೈದ್ಯ, ಜಿ.ಜಿ.ಕಣವಿ, ಡಿ.ಡಿ.ಟೋಪೋಜಿ, ಮಾರುತಿ ಬಸಳಿಗುಂದಿ ಇತರರಿದ್ದರು.
Published on
ಸವದತ್ತಿ: ಅಭಿವೃದ್ಧಿಗಾಗಿ ನೀಡಿದ ಭರವಸೆ ಈಡೇರಿಸುವುದು ತನ್ನ ಕರ್ತವ್ಯ. ೇತ್ರದ ಪ್ರತಿಯೊಂದು ಸಮುದಾಯದ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ತಾಲೂಕಿನ ಹಾಲುಮತ ಸಮುದಾಯದ ಕನಕ ಸಮುದಾಯದ ಭವನ ಹಾಗೂ ವಿವಿಧೋದ್ದೇಶಗಳಿಗಾಗಿ ಯಡ್ರಾವಿ ರಸ್ತೆ ಮಾರ್ಗದಲ್ಲಿ 5 ಎಕರೆ ಜಮೀನು ಮಂಜೂರು ಮಾಡಿಸಿದ ಹಿನ್ನೆಲೆಯಲ್ಲಿ, ಅವರ ಗೃಹ ಕಚೇರಿಯಲ್ಲಿ ಹಾಲುಮತ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮಂಜೂರಾದ ಜಾಗದಲ್ಲಿ ಜನರಿಗೆ ಉಪಯುಕ್ತವಾಗುವ ಸುಸಜ್ಜಿತ ಭವನ ನಿರ್ಮಾಣವಾಗಬೇಕು. ಇದರಿಂದ ಶಿಣ, ಸಾಮಾಜಿಕ ಹಾಗೂ ಸಾಂಸತಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಡಿ.ಡಿ.ಟೋಪೋಜಿ ಮಾತನಾಡಿ, ಬಹುಕಾಲದ ಬೇಡಿಕೆಯಾಗಿದ್ದ ಜಾಗವನ್ನು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್​ ಮೂಲಕ ಮಂಜೂರು ಮಾಡಿಸುವಲ್ಲಿ ಶಾಸಕ ವಿಶ್ವಾಸ ವೈದ್ಯ ಶ್ರಮ ಶ್ಲಾನೀಯ ಎಂದು ಹೇಳಿದರು. ಜಿ.ಜಿ.ಕಣವಿ, ಅಶ್ವತ್ಥ ವೈದ್ಯ, ಕಲ್ಲಪ್ಪ ಪೂಜೇರ, ಮಾರುತಿ ಬಸಳಿಗುಂದಿ, ಹನುಮಂತ ಸಿಂಗನವರ, ಗದಿಗೆಪ್ಪ ಕುರಿ, ಮೈಲಾರಪ್ಪ ಹೊಸಮನಿ, ಶಂಕರ ಇಟ್ನಾಳ, ಸಂತೋಷ ನೋರೆಯವರ, ಬಸು ಜಗಲಿ, ಈರಪ್ಪ ಚಿಕ್ಕುಂಬಿ, ಮಹಾಂತೇಶ ಸಂಗ್ರೇಶಿ, ಸದಾನಂದ ಕುರಿ, ಕಿರಣ ಕುರಿ, ಮಲ್ಲು ಮದ್ಲೂರ, ಯಲ್ಲಪ್ಪ ಕುಳ್ಳೂರ, ರವಿ ಯಾದವಾಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net