ಯಾದಗಿರಿ ನಗರದ ಅಭಿವೃದ್ಧಿಗೆ ಬದ್ಧ

ಯಾದಗಿರಿ ನಗರದ ವಾರ್ಡ್​&7ರಲ್ಲಿ ನಿರ್ಮಾಣಗೊಂಡ ಮಹಿಳಾ ಶೌಚಗೃಹ ಕಟ್ಟಡವನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಶುಕ್ರವಾರ ಉದ್ಘಾಟಿಸಿದರು. ಪೌರಾಯುಕ್ತ ಉಮೇಶ ಚವ್ಹಾಣ್​ ಇತರರಿದ್ದರು.
ಯಾದಗಿರಿ ನಗರದ ವಾರ್ಡ್​&7ರಲ್ಲಿ ನಿರ್ಮಾಣಗೊಂಡ ಮಹಿಳಾ ಶೌಚಗೃಹ ಕಟ್ಟಡವನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಶುಕ್ರವಾರ ಉದ್ಘಾಟಿಸಿದರು. ಪೌರಾಯುಕ್ತ ಉಮೇಶ ಚವ್ಹಾಣ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಭರವಸೆ
  • ಮಹಿಳಾ ಶೌಚಗೃಹ ಕಟ್ಟಡ ಉದ್ಘಾಟನೆ
ಯಾದಗಿರಿ: ಜಿಲ್ಲಾ ಕೇಂದ್ರವಾಗಿರುವ ನಗರದ ಹಲವಾರು ವಾರ್ಡ್​ಗಳಲ್ಲಿ ಜನರ ಸಮಸ್ಯೆಗಳನ್ನು ಗಮನಿಸಿದ್ದೇನೆ. ನಗರಸಭೆ ಹಾಗೂ ತಾವೂ ಸರ್ಕಾರದ ವಿವಿಧ ಯೋಜನೆಗಳಡಿ ಅನುದಾನ ತರುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಹೀಗಾಗಿ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ನಗರದ ವಾರ್ಡ್​ ಸಂಖ್ಯೆ 7ರ ಬಂಡಿಗೇರಿಯಲ್ಲಿ ಶುಕ್ರವಾರ ನಗರಸಭೆಯಿಂದ 18 ಲ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮಹಿಳಾ ಸಾರ್ವಜನಿಕ ಶೌಚಗೃಹ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರಸಭೆಯವರು ಚರಂಡಿಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು, ಅಲ್ಲದೆ ಅಗತ್ಯ ಬಿದ್ದರೆ ಬೇರೆ ಕಡೆಯಿಂದ ನೀರಿನ ಸಂಪನ್ಮೂಲ ಬಳಕೆ ಮಾಡಲು ಪೈಪ್​ಲೈನ್​ ಕಾಮಗಾರಿ ಕೈಗೊಳ್ಳಿ ಎಂದು ಸೂಚಿಸಿದರು.
ತಮ್ಮ ಗಮನಕ್ಕೆ ಯಾವುದೇ ಸಮಸ್ಯೆಗಳು ಬಂದರೆ ಆದಷ್ಟೂ ಬೇಗನೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇನೆ, ರಾಜ್ಯ ಸರ್ಕಾರ ಜನರಿಗೆ ಪಂಚ ಗ್ಯಾರಂಟಿಗಳ ಲಾಭ ತಲುಪಿಸುತ್ತಿದೆ, ಶಾಸಕರಿಗೆ ಅನುದಾನದ ಕೊರೆತೆಯಿದೆ, ಸ್ವಲ್ಪ ನಿಧಾನವಾದರೂ ನಿಮ್ಮ ಕೆಲಸ ಖಂಡಿತ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ನಿಮ್ಮೆಲ್ಲರ ಬೇಡಿಕೆಯಂತೆ ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಇದರಿಂದ ಬಡ ಕುಟುಂಬಗಳು ಸಣ್ಣ&ಪುಟ್ಟ ಶುಭ ಕಾರ್ಯ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಸೇರಿದ್ದ ಸಭಿಕರನ್ನು ಉದ್ದೇಶಿಸಿ ಶಾಸಕರು ಹೇಳಿದರು.
ಕಾಂಗ್ರೆಸ್​ ಪದ ಮುಖಂಡ ನಿಂಗಪ್ಪ ಜಾಲಗಾರ ಮಾತನಾಡಿ, ಈ ವಾರ್ಡ್​ನ ಸಮಸ್ಯೆಗಳನ್ನು ಗಮನಿಸಿದ ಶಾಸಕರು ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದರು.
ಈ ವೇಳೆ ಕಾಂಗ್ರೆಸ್​ ಪದ ಮುಖಂಡರಾದ ಸಾಯಿಬಣ್ಣ ಕೆಂಗೂರಿ, ಸುರೇಶ ಮಡ್ಡಿ, ಶಶಿಗೌಡ ಮಾನಸಗಲ್​, ತಿಮ್ಮಣ್ಣ ನಾಯಕ, ಶರಣಗೌಡ ಬಲಕಲ್​, ರಾಜು ಸೈದಾಪುರ, ನಗರಸಭೆ ಸಿಬ್ಬಂದಿ ಭೀಮಣ್ಣ ವೈಧ್ಯೆ, ಶರಣಮ್ಮ, ಲೋಕೇಶ್ವರಿ, ಶಿವಪುತ್ರ, ಮಂಜುನಾಥ, ಶಂಭುಲಿಂಗೇಶ್ವರ ಇತರರಿದ್ದರು. ಉಮೇಶ ಚವ್ಹಾಣ್​ ಪೌರಾಯುಕ್ತರು, ನಗರಸಭೆ ಯಾದಗಿರ ಸರ್ಕಾರದಿಂದ ಯಾವುದೇ ಅನುದಾನ ನಗರಸಭೆಗೆ ಬಂದಿಲ್ಲ, ತೆರಿಗೆ ಹಣದಲ್ಲಿಯೇ ನಾವೂ ಪ್ರಾಮಾಣಿಕವಾಗಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದೇವೆ. ಕಾರಣ ಸರ್ಕಾರದಿಂದ ನಗರಸಭೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕು, ಅಂದಾಗ ಮಾತ್ರ ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net