ಮಾಣಿಕೇಶ್ವರಿ ಆಶ್ರಮದ ಅಭಿವೃದ್ಧಿಗೆ ಬದ್ಧ

ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ರಸ್ತೆ, ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಭೂಮಿ ಪೂಜೆ ನೆರೆವೇರಿಸಿದರು. ಶಂಕರಭೂಪಾಲ ಪಾಟೀಲ್​, ರಜನಿಕಾಂತ ಶೃಂಗೇರಿ, ವಿಶ್ವನಾಥ ಇದ್ದರು.
ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ರಸ್ತೆ, ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಭೂಮಿ ಪೂಜೆ ನೆರೆವೇರಿಸಿದರು. ಶಂಕರಭೂಪಾಲ ಪಾಟೀಲ್​, ರಜನಿಕಾಂತ ಶೃಂಗೇರಿ, ವಿಶ್ವನಾಥ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಭರವಸೆ
  • ಯಾನಾಗುಂದಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
ಸೇಡಂ: ಯಾನಾಗುಂದಿ ಕ್ಷೇತ್ರವು ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಇಂತಹ ಪುಣ್ಯಕ್ಷೇತ್ರ ತಾಲೂಕಿನಲ್ಲಿರುವುದು ನಮ್ಮೆಲ್ಲರ ಸುದೈವ. ಯಾನಾಗುಂದಿ ಮಾಣಿಕೇಶ್ವರಿ ಆಶ್ರಮದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಭರವಸೆ ನೀಡಿದರು.
ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮನವರ ಆಶ್ರಮದ ಶ್ರೀ ಹನುಮಾನ ದೇವಸ್ಥಾನದಿಂದ ಕೋಟಿಲಿಂಗ ಮುಖ್ಯದ್ವಾರದವರೆಗೆ ತಡೆಗೋಡೆ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮಾತೆ ಮಾಣಿಕೇಶ್ವರಿ ಅಮ್ಮನವರು ಅಹಿಂಸಾ ಪರಮೋಧರ್ಮದ ತಳಹದಿ ಮೇಲೆ ಬದುಕು ಸಾಗಿಸಿದ್ದರು. ಅವರ ತತ್ವಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಅಮ್ಮನವರು ಪ್ರಾಣಿ-ಪಗಳಿಗೆ ಹಿಂಸೆ ಆಗಬಾರದು ಎಂದು ಸಾರಿದ್ದರು. ಪ್ರತಿ ಶಿವರಾತ್ರಿಯಂದು ಅವರ ದರ್ಶನಕ್ಕಾಗಿ ರಾಜ್ಯವಲ್ಲದೆ ಅಂತರಾಜ್ಯದಿಂದ ಲಕ್ಷಾಂತರ ಭಕ್ತರು ಬರುತಿದ್ದರು. ಇಲ್ಲಿನ ಆಶ್ರಮವನ್ನು ಶಿವಯ್ಯಸ್ವಾಮಿ ಅವರು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ಅವರಿಗೆ ಸದಾ ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು.
ಟ್ರಸ್ಟ್​ ಅಧ್ಯಕ್ಷ ಶಿವಯ್ಯಸ್ವಾಮಿ ಮಾತನಾಡಿ, ಆಶ್ರಮದ ಮೂಲಕ ಸಕಲರ ಲೇಸಿಗಾಗಿ ಕೆಲಸ ಮಾಡಲಾಗುತ್ತಿದೆ. ಅಮ್ಮನವರು ನಂಬಿದವರಿಗೆ ಕೈಬಿಟ್ಟಿಲ್ಲ. ಸತ್ಯದ ಮಾರ್ಗದಲ್ಲಿ ನಡೆದಾಗ ಯಾವುದೇ ವ್ಯಕ್ತಿ ಜೀವನದಲ್ಲಿ ಹಿಂದಕ್ಕೆ ಹೋಗಲು ಸಾಧ್ಯವಿಲ್ಲ. ಯಾನಾಗುಂದಿಯ ಮಾತೆಮಾಣಿಕೇಶ್ವರಿ ಆಶ್ರಮ ನಮ್ಮದು ಎನ್ನುವ ಭಾವನೆ ಎಲ್ಲರಲ್ಲಿ ಮೂಡಬೇಕು. ಅಂದಾಗ ಕ್ಷೇತ್ರದ ಸವೋರ್ತಮುಖ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಅಮ್ಮನವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ದಾನಿಗಳ ಸಹಕಾರದಿಂದ ಗುಡ್ಡದಲ್ಲಿ ಟ್ರಸ್ಟ್​ ನಿರ್ಮಾಣಗೊಳಿಸಿರುವ ದಾಸೋಹ ಭವನವನ್ನು ಲೋಕಾರ್ಪಣೆಗೊಳಿಸಿದರು.
ಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಶಂಕರಭೂಪಾಲ ಪಾಟೀಲ್​, ಅಲ್ಟ್ರಾಟೆಕ್​ ಸಿಮೆಂಟ್​ ಕಂಪನಿ ಕಾರ್ಮಿಕರ ಸಂದ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್​, ಪಂಚಾಯತ್​ರಾಜ್​ ಇಲಾಖೆ ಇಇ ರಜನಿಕಾಂತ ಶೃಂಗೇರಿ, ಎಇಇ ವಿಶ್ವನಾಥ ಮಾವಿನಗಿಡ, ಪ್ರಮುಖರಾದ ಕಿಷ್ಠಪ್ಪ, ನಾಗವೇಣಿ, ದಾಮೊದರರೆಡ್ಡಿ ಸಿಲಾರಕೋಟ, ಸದಾಶಿವರೆಡ್ಡಿ ಗೋಪನಪಲ್ಲಿ, ಭೀಮರೆಡ್ಡಿ, ಶ್ರೀನಿವಾಸರೆಡ್ಡಿ ಶಂಕರಾಜಪುರ, ಗುಂಡಪ್ಪ ಇಟಕಾಲ್​, ಜೈಪಾಲರೆಡ್ಡಿ ಮೋತಕಪಲ್ಲಿ, ರಾಮಲಿಂಗಪ್ಪ, ಪ್ರಭುರೆಡ್ಡಿ, ಮಹೇಶ ಪಾಟೀಲ್​, ಜಗನರೆಡ್ಡಿ, ಸಂಜೀವಕುಮಾರ, ಕಿರಣರೆಡ್ಡಿ ಮಿರಿಯಾಣ ಇದ್ದರು.
"

ಸರ್ಕಾರದಿಂದ ಇಲ್ಲಿ ಅನೇಕ ಕೆಲಸಗಳನ್ನು ಮಾಡಬೇಕು ಎನ್ನುವ ಮಾತನ್ನು ಟ್ರಸ್ಟ್​ ಅಧ್ಯಕ್ಷರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ನಾನು ಮಾಡಿಕೊಡುತ್ತೇನೆ. ತಾಲೂಕಿನಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನ ಒದಗಿಸಲಾಗಿದೆ.

— > ಡಾ.ಶರಣಪ್ರಕಾಶ ಪಾಟೀಲ್​, ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net