ಪಟ್ಟಣದ ರಾಜ್ಯ ಹೆದ್ದಾರಿ&201ರಿಂದ ಮಹಾಮುನಿ ಕೆರೆವರೆಗೆ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕರ್ನಾಟಕ ಸರ್ಕಾರ ಹಾಗೂ ಪಂಚಾಯಿತಿ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 2025&26ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ 50 ಲ ರೂ. ವೆಚ್ಚದಲ್ಲಿ 800 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಮಹಾಮುನಿ ಕೆರೆ ರಸ್ತೆ ಪಟ್ಟಣದ ಪ್ರಮುಖ ಸಂಚಾರ ಮಾರ್ಗವಾಗಿದ್ದು, ಇದರ ಸುಧಾರಣೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಉದ್ಯಮಿ ಅಶ್ವತ ವೈದ್ಯ, ಪ್ರಭು ಪ್ರಭುನವರ, ಬಸವರಾಜ ಹಂಪಣ್ಣವರ, ಬಸವರಾಜ ಗುರನ್ನವರ, ಪ್ರವಿಣ ಪಟ್ಟಣಶೆಟ್ಟಿ, ಅಶೋಕ ಹಾದಿಮನಿ, ಶಿವಾನಂದ ಪಟ್ಟಣಶೆಟ್ಟಿ, ಗದಿಗೆಪ್ಪ ಕುರಿ, ಮಂಜುನಾಥ ಪಾಚಂಗಿ, ಆಸ್ೀ ಭಾಗೋಜಿಕೊಪ್ಪ ಇತರರಿದ್ದರು.